Advertisement

ಶರಣರ ಚಿಂತನೆ ಜೀವನದಲ್ಲಿ ಅಳವಡಿಸಿಕೊಳ್ಳಿ: ಸತ್ಯಾದೇವಿ

12:54 PM Jul 29, 2018 | Team Udayavani |

ಬೀದರ: ಶರಣರ ಚಿಂತನೆಗಳನ್ನು ಅರ್ಥಪೂರ್ಣವಾಗಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶರಣರಿಗೆ ನಮನ ಸಲ್ಲಿಸಬೇಕು ಎಂದು ಸತ್ಯಾದೇವಿ ಮಾತಾಜಿ ಹೇಳಿದರು. ನಗರದ ಬಸವ ಮಂಟಪದಲ್ಲಿ ನಡೆದ ಮಾಸಿಕ ಬಸವ ಜ್ಯೋತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣನವರ ಆಪ್ತರಾದ ಹಡಪದ ಅಪಣ್ಣನವರ ಕುರಿತು ವಿವರಣೆ ನೀಡಿದರು.

Advertisement

ಸುನೀತಾ ದಾಡಗೆ ಮಾತನಾಡಿ, ಲೋಕದಲ್ಲಿ ಜೀವಿಸುವ ವ್ಯಕ್ತಿಗಳಿಗೆ ಸ್ತುತಿ, ನಿಂದೆಗಳು ಸಹಜ. ಆದರೆ ಸ್ತುತಿಯಿಂದ ಹಿಗ್ಗದೇ, ನಿಂದೆಯಿಂದ ಕುಗ್ಗದೇ ಸಮಧಾನಿಯಾಗಿರುವುದು ಹಾಗೂ ಅದರಂತೆ ಬದುಕುವುದು ಉತ್ತಮ ಜ್ಞಾನಿಯ ಲಕ್ಷಣ ಎಂದರು. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಹೆಣ್ಣು ಮತ್ತು ಹೊನ್ನು ಕಾರಣ ಎಂಬುದು ಎಲ್ಲಿಗೂ ಗೊತ್ತಿದ್ದರೂ ಕೂಡ ಇದರಿಂದ ಹೊರಬರಲು ಸಾಧ್ಯವಾಗದೆ ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇವುಗಳನ್ನು ಸರಳವಾಗಿ ಅರ್ಥ ಮಾಡಿಕೊಂಡರೆ ಜೀವನದಲ್ಲಿ ನೆಮ್ಮದಿ, ಸಂತೋಷ ಪ್ರಾಪ್ತಿಯಾಗುತ್ತದೆ ಎಂದರು.

ಡಾ| ವೈಶಾಲಿ ಸಾಯಗಾಂವಕರ್‌ ಮಾತನಾಡಿ, ಇಂದಿನ ಹೆಣ್ಣುಮಕ್ಕಳು ಆರೋಗ್ಯದ ಕಡೆಗೆ ಗಮನ ಹರಿಸದ ಕಾರಣ,
ರಕ್ತ ಹಿನತೆಯಿಂದ ಬಳಲುತ್ತಿದ್ದು, ಇದರಿಂದಾಗಿ ನವಜಾತ ಶಿಶುಗಳು ಅಕಾಲಿಕವಾಗಿ ಮರಣ ಹೊಂದುತ್ತಿವೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು. ಅತಿಯಾದ ಮೊಬೈಲ್‌ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾಗಿ ಬಳಸುವುದರಿಂದ ಆರೋಗ್ಯ ಸಮಸ್ಯೆ ಎದುರಿಸಬೇಕಾದ ಪ್ರಸಂಗ ಬರಬಹುದು ಎಂದು ಎಚ್ಚರಿಸಿದರು. ವಿನೀತ ಮೇಗೂರೆ, ನಾಗಶೆಟ್ಟಿ ಶಟಕಾರ, ಶ್ರೀನಿವಾಸ ಬಿರಾದಾರ, ಗುರುನಾಥ ಬಿರಾದಾರ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಚಂದ್ರಪ್ಪಾ ಹಳ್ಳೆ, ಸರೋಜನಿ ಪಾಟೀಲ, ಬಸವರಾಜ ಸಂಗಮ, ಮಹಾಲಿಂಗ ಸ್ವಾಮಿ, ಗೌರಿ ನಾಗಶೆಟ್ಟಿ ಶಟಕಾರ, ರಾಜೇಂದ್ರ ಜೊನ್ನಿಕೇರಿ, ಕಲ್ಯಾಣರವ್‌ ಬಂಬುಳಗೆ, ಶಿವರಾಜ ಪಾಟೀಲ ಅತಿವಾಳ, ಕುಶಾಲರಾವ್‌ ಪಾಟೀಲ ಖಾಜಾಪೂರ, ಶಿವಕುಮಾರ ನಾವದಗೆ, ಶೀತಲ್‌ ಸೂರ್ಯವಂಶಿ, ಮನ್ನಥಯ್ನಾ ಸ್ವಾಮಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next