Advertisement

ಐಎಂಎಫ್ ಅಧ್ಯಕ್ಷ ಪದಕ್ಕೆ ಲಗಾರ್ಡೆ ರಾಜೀನಾಮೆ; ಇಸಿಬಿ ಅಧ್ಯಕ್ಷೆಯಾಗಿ ನಾಮಕರಣ

12:26 PM Jul 04, 2019 | Team Udayavani |

ವಾಷಿಂಗ್ಟನ್‌ : ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟೀನ್‌ ಲಗಾರ್ಡೆ ಅವರು ತಾತ್ಕಾಲಿಕವಾಗಿ ತಾನು ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಪ್ರಕಟಿಸಿದ್ದಾರೆ.

Advertisement

ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ ಮುಖ್ಯಸ್ಥೆಯಾಗಿ ತಾನು ನಾಮಕರಣ ಗೊಂಡಿರುವ ಕಾರಣಕ್ಕೆ ತಾನು ಐಎಂಎಫ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಲಗಾರ್ಡೆ ಹೇಳಿದ್ದಾರೆ.

ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕಿನ ಮುಖ್ಯಸ್ಥರಾಗಿರುವ ಮ್ಯಾರಿಯೋ ಡ್ರ್ಯಾಗೀ ಅವರ ಅಧಿಕಾರಾವಧಿಯು ಇದೇ ವರ್ಷ ನವೆಂಬರ್‌ ನಲ್ಲಿ ಮುಗಿಯಲಿರುವ ಕಾರಣ ಅವರ ಉತ್ತರಾಧಿಕಾರಿಯಾಗಿ ಐರೋಪ್ಯ ನಾಯಕರು ಐಎಂಎಫ್ ಮುಖ್ಯಸ್ಥೆಯಾಗಿರುವ ಕ್ರಿಸ್ಟೀನ್‌ ಲಗಾರ್ಡೆ ಅವರನ್ನು ಆಯ್ಕೆ ಮಾಡಿರುವುದಾಗಿ ವರದಿಗಳು ತಿಳಿಸಿವೆ.

ಇಸಿಬಿ ಅಧ್ಯಕ್ಷ ಪದಕ್ಕೆ ತನ್ನನ್ನು ನಾಮಕರಣ ಮಾಡಲಾಗಿರುವುದು ತನಗೆ ದೊರಕಿರುವ ದೊಡ್ಡ ಗೌರವ ಎಂದು ಲಗಾರ್ಡೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next