ಹೊಸದಿಲ್ಲಿ: ಈ ಬಾರಿ ಮುಂಗಾರು ಮಾರುತಗಳು ಅವಧಿಗೆ ಮುನ್ನವೇ ಆಗಮಿಸಲಿದ್ದು, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲಿ ಮೇ 15ರ ಸುಮಾರಿಗೆ ಮಳೆಗಾಲ ಆರಂಭವಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಹೇಳಿದೆ.
Advertisement
ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಸನಿಹದ ಬಂಗಾಲ ಕೊಲ್ಲಿಯ ಭಾಗಗಳಲ್ಲಿ ಮೇ 15ರ ಆಸುಪಾಸಿಗೆ ಮುಂಗಾರು ಮಾರುತಗಳು ಆಗಮಿಸಲಿವೆ ಎಂದು ಐಎಂಡಿಯ ಹೇಳಿಕೆ ತಿಳಿಸಿದೆ. ಮುಂಗಾರು ಅಲ್ಲಿಂದ ಕೇರಳ ಪ್ರವೇಶಿಸಿ ಉತ್ತರಾಭಿಮುಖವಾಗಿ ಮುಂದುವರಿಯುವುದಕ್ಕೆ ಪೂರಕ ವಾತಾವರಣ ಇದೆ ಎಂದು ಅದು ಹೇಳಿದೆ. ಮುಂಗಾರು ಜೂ. 1ರ ಸುಮಾರಿಗೆ ಕೇರಳ ಪ್ರವೇಶಿಸುವುದು ವಾಡಿಕೆ.