Advertisement

ನಿನ್ನೆದೆಯಲಿ ಗೂಡು ಕಟ್ಟಲು ಕಾದು ಕುಳಿತಿದ್ದೇನೆ…

06:00 AM Nov 27, 2018 | |

ಕಾಲೇಜಿನ ಕಲ್ಲು ಬೆಂಚಿನ ಮೇಲೆಯೇ ನಮ್ಮ ಮೊದಲ ಭೇಟಿ. ಅಲ್ಲಿಂದ ಶುರುವಾದ ಸ್ನೇಹ, ನನ್ನಲ್ಲಿ ಪ್ರೀತಿಯಾಗಿ ಪರಿವರ್ತನೆಗೊಂಡಿದ್ದು ಯಾವಾಗ? ಗೊತ್ತಿಲ್ಲ. ಕಲ್ಲುಬೆಂಚಿನ ಮೇಲೆ ಮೂಡಿದ ನಮ್ಮ ಸ್ನೇಹ, ಕಾಲೇಜು ಕ್ಯಾಂಟಿನ್‌, ಲೈಬ್ರರಿ, ರಂಗಮಂದಿರ, ಬಸ್‌ ನಿಲ್ದಾಣ, ಆ ಪಾನಿಪುರಿ ಗಾಡಿ, ಬುದ್ಧ ಮಂದಿರ.. ಹೀಗೆ ಸಾಗುವಾಗ ಪ್ರೀತಿಯಾದದ್ದೇನೋ?

Advertisement

ನೀನೆಂದರೆ ಹಾಗೇ.. ಪ್ರೀತಿಸಬೇಕೆಂಬ ವ್ಯಾಮೋಹ.. ಆ ನಿನ್ನ ಹೊಳೆವ ಕಣ್ಣ ಕಂಡರೆ ಸಾಕು; ಮೈ ಮನದಲ್ಲಿ ಕಚಗುಳಿ ಇಟ್ಟ ಅನುಭವ. ಯಾಕೆ ಹೀಗಾಗುತ್ತೆ ಅನ್ನುವುದಕ್ಕೆ ನನ್ನಲ್ಲಿ ಉತ್ತರವಿಲ್ಲ. ನಿನ್ನ ಮೋಹಕ ಕಣ್ಣುಗಳನ್ನು ನೋಡುತ್ತ ಕುಳಿತರೆ ಸಮಯದ ಪರಿವೇ ಇರುವುದಿಲ್ಲ ನನಗೆ.

ಕಾಲೇಜಿನ ಕಲ್ಲು ಬೆಂಚಿನ ಮೇಲೆಯೇ ನಮ್ಮ ಮೊದಲ ಭೇಟಿ. ಅಲ್ಲಿಂದ ಶುರುವಾದ ಸ್ನೇಹ, ನನ್ನಲ್ಲಿ ಪ್ರೀತಿಯಾಗಿ ಪರಿವರ್ತನೆಗೊಂಡಿದ್ದು ಯಾವಾಗ? ಗೊತ್ತಿಲ್ಲ. ಕಲ್ಲುಬೆಂಚಿನ ಮೇಲೆ ಮೂಡಿದ ನಮ್ಮ ಸ್ನೇಹ, ಕಾಲೇಜು ಕ್ಯಾಂಟಿನ್‌, ಲೈಬ್ರರಿ, ರಂಗಮಂದಿರ, ಬಸ್‌ ನಿಲ್ದಾಣ, ಆ ಪಾನಿಪುರಿ ಗಾಡಿ, ಬುದ್ಧ ಮಂದಿರ.. ಹೀಗೆ ಸಾಗುವಾಗ ಪ್ರೀತಿಯಾದದ್ದೇನೋ? ವಿದ್ಯಾಭ್ಯಾಸ ಮುಗಿದು, ವೃತ್ತಿ ಬದುಕು ಆರಂಭಗೊಂಡಿದ್ದರೂ ನನ್ನ ಪ್ರೀತಿ ಹಾಗೂ ನಿನ್ನ ಸ್ನೇಹ ಹಾಗೇ ಮುಂದುವರೆದಿದೆ.

ಸದಾ ಕೋರ್ಟು ಕೇಸು ಎಂದು ಅಲೆಯುವ ನಿಂಗೆ ಶನಿವಾರ, ಭಾನುವಾರ ಬಂತೆಂದರೆ ಸೋಮಾರಿತನ. ನಂಗೋ, ಶನಿವಾರ ಹ್ಯಾಗ್‌ ಹ್ಯಾಗೋ ಸಮಯ ಕಳೆದು ಮಧ್ಯಾಹ್ನದ ನಿನ್ನ ಕರೆಗೆ ಕಾಯುವುದೇ ಕೆಲಸ. ನಾನಾಗಿಯೇ ಕರೆ ಮಾಡಲು, ಹುಡುಗಿ ಎಂಬ ಹಮ್ಮು. ನೀನೇ ಕರೆ ಮಾಡಬೇಕು. ಮಧ್ಯಾಹ್ನ ಮೂರಾದರೂ ನಿನ್ನ ಕರೆ ಬರದಿದ್ದರೆ ನಾನು ಕಂಗಾಲು. ನಿನ್ನೊಂದು ಕರೆಗಾಗಿಯೇ ನಾನು ಕಾದು ಕೂತಿರುತ್ತೇನೆ ಅನ್ನೋದು ನಿಂಗೆ ಅರ್ಥವಾಗೋದಿಲ್ಲ. ಮಧ್ಯಾಹ್ನ 3ಕ್ಕೊಂದು, ಸಂಜೆ 6ಕ್ಕೊಂದು ಕರೆ ಬಂದರೆ ನೆಮ್ಮದಿ. ಇಲ್ಲದಿದ್ದರೆ, ನೀರಿನಿಂದ ಹೊರಬಂದ ಮೀನಿನಂತೆ ವಿಲವಿಲ ಒದ್ದಾಡಿಬಿಡುತ್ತೇನೆ. ಹ್ಯಾಗೆ ವಿವರಿಸಲಿ ಅದನ್ನೆಲ್ಲ ಈಗ? ಉಸ್ಸಪ್ಪಾ, ಭಾನುವಾರ ಬಂತು. ಕಣ್ತುಂಬ ತುಂಬಿಕೊಳ್ಳಲು ಸಿಗುತ್ತೀ ನೀನು ಎಂದುಕೊಂಡರೆ, ಮಧ್ಯಾಹ್ನ 12 ಆದರೂ ನಿನ್ನಿಂದ ಕರೆಯಿಲ್ಲ, ಸಂದೇಶವೂ ಇಲ್ಲ. ನಾನೇ ಕರೆ ಮಾಡಿ ಎಬ್ಬಿಸಬೇಕು ನಿನ್ನ. ಆಗಲೇ ಸಿಟ್ಟು ಬರುವುದು ನಂಗೆ. ಈ ಪರಿ ಭಾವನೆಗಳನ್ನು ಹೊತ್ತ ಹುಡುಗಿ, ನಿನಗಾಗಿ ಪರಿತಪಿಸುತ್ತಿದ್ದರೆ ನೀನು ಶುದ್ಧ ಸೋಮಾರಿಯಂತೆ ಮಲಗಿರ್ತಿಯಲ್ಲಾ ಅಂತ. 

ಆ ದಿನ ನಾವು ಮೊದಲ ಬಾರಿಗೆ ಬುದ್ಧ ಮಂದಿರಕ್ಕೆ ಭೇಟಿ ನೀಡಿದ್ದು, ನೆನಪಿದ್ಯಾ? ಬಹುಶಃ ನಿನಗದು ನೆನಪಿಲ್ಲ. ಬೂದು ಬಣ್ಣದ ಶರ್ಟ್‌ನಲ್ಲಿ ನೀನು, ಕೆಂಪು ಬಣ್ಣದ ಲಂಗದಲ್ಲಿ ನಾನು. ಆ ಬೌದ್ಧ ಸನ್ಯಾಸಿ “ಸದಾ ಜೊತೆಯಾಗಿರಿ’ ಎಂದು ಹಾರೈಸಿದಾಗ ನೀನು ಮೌನವಾಗಿ ಅದೆಷ್ಟು ಹೊತ್ತು ನನ್ನ ಕಣ್ಣುಗಳನ್ನು ದಿಟ್ಟಿಸಿದ್ದೆ. ಅಂದು ನೀನಾಡಿದ ಮಾತುಗಳು ನನ್ನಲ್ಲಿನ್ನೂ ಗುಂಯ್‌ಗಾಡುತ್ತಿವೆ. “ಸದಾ ಸಂತೋಷ ತುಂಬಿಕೊಂಡ ನಿನ್ನ ಕಣ್ಣುಗಳಲ್ಲಿ ದಿವ್ಯ ಶಕ್ತಿಯೊಂದು ಅಡಗಿದೆ’ ಅಂದಕ್ಷಣವೇ ನಾನು ಕರಗಿಬಿಟ್ಟೆ. ಆಗಲೇ ಹೇಳಿಬಿಡಬೇಕು ಎಂದುಕೊಂಡಿದ್ದೆ, ಈ ಕಣ್ಣಲ್ಲಿ ನಿನ್ನದೇ ಚಿತ್ರ ಶಾಶ್ವತವಾಗಿ ಉಳಿಯಲಿ ಎಂದು. ಆದರೇನು ಮಾಡಲಿ? ನಾಚಿಕೆ ನನ್ನ ಬಾಯಿ ಕಟ್ಟಿ ಹಾಕಿತು.

Advertisement

ಸುಂದರ ಭಾವನೆಯೊಂದು ಹುಟ್ಟಿಕೊಂಡು ಅರಳಿ ನಿಂತಿದೆ. ಜೊತೆಗಿರಿ ಎಂದು ಹಾರೈಸಲು ಬುದ್ಧನಿದ್ದಾನೆ. ಇನ್ಯಾಕೆ ತಡ? ಹೇಳಿಬಿಡು ನೀ ನನ್ನವಳೆಂದು. ಕಾಯುತ್ತಿರುವೆ ನಾನು ನಿನ್ನೆದೆಯಲ್ಲಿ ಗೂಡುಕಟ್ಟಲು, ಪ್ರೀತಿಗೆ ಬೆಚ್ಚನೆಯ ಕಾವು ಕೊಡಲು.

ಇಂತಿ ನಿನ್ನ ಧ್ಯಾನಿ 

ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next