Advertisement
ನಮ್ಮ ಮೊದಲ ನೋಟದಲ್ಲಿ ಪ್ರೇಮ ಅಂಕುರಿಸಿತು. ನಂತರ ಮೊದಲ ಮಾತಿನಲ್ಲಿ ಚಿಗುರೊಡೆದಿದೆ. ಇನ್ನೂ ಸ್ವಲ್ಪ ಸಮಯ ಬೇಕು ಸಸಿಯಾಗಲು. ಅದಕ್ಕೇ ಇಂಥ ಪ್ರೇಮ ಪತ್ರಗಳನ್ನು ಬರೆದು ಕಳಿಸುವುದು. ತನ್ಮೂಲಕ ಮಧುರ ಕ್ಷಣಗಳ ನೆನಪಿಸುವಂಥಾ ಒರತೆಯ ನೀರುಣಿಸಿ ಸಸಿಯನ್ನು ಗಟ್ಟಿ ಮಾಡುತ್ತಿದ್ದೇನೆ. ಈ ಸಸಿಯು ಪ್ರೇಮವೃಕ್ಷವಾಗಿ ಬೆಳೆಯಲಿ, ಪ್ರೇಮಫಲಗಳನ್ನು ನೀಡಲಿ. ನಮ್ಮ ಪ್ರೇಮ ಫಲಿಸಿದ ಖುಷಿಗೆ ಯಾವುದೇ ಅಡೆತಡೆಗಳಿಲ್ಲದ ರಮ್ಯತಾಣಗಳಲ್ಲಿ ಚಂದ್ರನ ಬೆಳಕಿನಲ್ಲಿ ನಾವಿಬ್ಬರೇ ಬೆಳಗಾಗುವವರೆಗೂ ಮಾತಾಡಬೇಕೆನಿಸುತ್ತಿದೆ. ಇಬ್ಬರೂ ಕೈ ಕೈ ಜೋಡಿಸಿ ಬೆಳ್ಳಿತಟ್ಟೆಯಂತೆ ಕಾಣುವ ಚಂದ್ರನೊಳಗೆ ಹೃದಯದ ಚಿಹ್ನೆ ಬಿಡಿಸಿ ಅದರೊಳಗೆ ನಮ್ಮ ಹೆಸರನ್ನು ಬರೆಯೋಣ ಮತ್ತು ಅಕ್ಕಪಕ್ಕದಲ್ಲಿ ಎರಡು ಗಿಳಿಗಳನ್ನು ಬಿಡಿಸೋಣ. ಯಾಕೆ ಗೊತ್ತಾ? ಅವು ಬಹುಸುಂದರವಾಗಿ ಮಾತನಾಡುತ್ತವಂತೆ. ಅಂತೆಯೇ ನಮ್ಮ ಮಾತುಗಳು ಎಷ್ಟಿದ್ದರೂ ಮುಗಿಯದಿರಲಿ ಎಂಬಾಸೆ ನನ್ನದು.
Advertisement
ಈಡಿಯಟ್ ಅಂತ ಕರೆದ್ರೂ ನನಗೇನೂ ಬೇಜಾರಿಲ್ಲ
03:45 AM May 09, 2017 | |
Advertisement
Udayavani is now on Telegram. Click here to join our channel and stay updated with the latest news.