Advertisement

ಭಯಗೊಳ್ಳದೆ ಚುನಾವಣೆ ಎದುರಿಸಿ: ಅರ್ಚನಾಗೆ ಧೈರ್ಯ ತುಂಬಿದ ಪ್ರಿಯಾಂಕಾ ಗಾಂಧಿ

01:49 PM Jan 16, 2022 | Team Udayavani |

ಮೀರತ್ : ಉತ್ತರ ಪ್ರದೇಶದ ಹಸ್ತಿನಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಡೆಲ್ ಮತ್ತು ನಟಿ ಅರ್ಚನಾ ಗೌತಮ್ ಅವರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಧೈರ್ಯದ ಮಾತುಗಳನ್ನು ಹೇಳಿದ್ದು, ಭಯಪಡಬೇಡಿ, ಚುನಾವಣಾ ಎದುರಿಸಿ ಎಂದು ಸ್ಪೂರ್ತಿ ತುಂಬಿದ್ದಾರೆ.

Advertisement

ಅರ್ಚನಾ ಗೌತಮ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ಬಳಿಕ ಮಾಜಿ ಮಿಸ್ ಬಿಕಿನಿ ಇಂಡಿಯಾ ಆಗಿದ್ದ ಅವರ ಮಾದಕ ಫೋಟೋಗಳು ಸಾಮಾಜಿಕ ತಾಣದಲ್ಲಿ ಹರಿದಾಡಿ ವೈರಲ್ ಆಗಿದ್ದವು. ಅವಹೇಳನಕಾರಿ ಕಾಮೆಂಟ್‌ಗಳಿಂದ ವ್ಯಾಪಕವಾಗಿ ಟೀಕಿಸಲಾಗಿತ್ತು.

ಪಶ್ಚಿಮ ಉತ್ತರ ಪ್ರದೇಶದ ಬಹುಪಾಲು ಗ್ರಾಮೀಣ ಭಾಗದ ಸಂಪ್ರದಾಯವಾದಿ ಮತದಾರರಿರುವ ಕ್ಷೇತ್ರದಲ್ಲಿ 26 ವರ್ಷದ ಅರ್ಚನಾ ರಾಜಕೀಯದಲ್ಲಿ ಚೊಚ್ಚಲ ಅವಕಾಶಕ್ಕಾಗಿ ಕಣಕ್ಕಿಳಿದಿದ್ದಾರೆ.

ಬಿಜೆಪಿ ಮತ್ತು ಅಖಿಲ ಭಾರತ ಹಿಂದೂ ಮಹಾಸಭಾದಂತಹ ಪಕ್ಷಗಳೂ ಅರ್ಚನಾ ಅವರ ಅಭ್ಯರ್ಥಿತನವನ್ನು ಟೀಕಿಸಿದ್ದವು. ಮೀರತ್ ಜಿಲ್ಲೆಯ ಕ್ಷೇತ್ರದಿಂದ ಅರ್ಚನಾ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ “ಅಗ್ಗದ ಪ್ರಚಾರ” ದಲ್ಲಿ ತೊಡಗಿದೆ ಎಂದು ಬಿಜೆಪಿ ಆರೋಪಿಸಿದರೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಅವರನ್ನು ನಾಚಿಕೆಪಡಿಸಲು ಅವರ ಹಳೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಹೊರ ಹಾಕಿದ್ದರು.

“ಗ್ರೇಟ್ ಗ್ರ್ಯಾಂಡ್ ಮಸ್ತಿ” ಮತ್ತು “ಹಸೀನಾ ಪಾರ್ಕರ್” ನಂತಹ ಚಲನಚಿತ್ರಗಳಲ್ಲಿ ನಟಿಸಿದ ಅರ್ಚನಾ ಕಳೆದ ವರ್ಷ ನವೆಂಬರ್‌ನಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು. 2018 ರ ಮಿಸ್ ಬಿಕಿನಿ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿರುವ ಅವರ ಹಿನ್ನೆಲೆಯನ್ನು ರಾಜಕೀಯ ಪ್ರತಿಸ್ಪರ್ಧಿಗಳು ಅದನ್ನೇ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ ಮತ್ತು ಟ್ರೋಲ್ ಮಾಡುತ್ತಿದ್ದಾರೆ.

Advertisement

“ನಾನು ಪ್ರಿಯಾಂಕಾ ದೀದಿಯೊಂದಿಗೆ ಮಾತನಾಡಿದಾಗ, ಅವರು ನನಗೆ ಹೇಳಿದರು, ‘ಅರ್ಚನಾ, ನೀವು ಈ ಜಗತ್ತಿಗೆ ಕಾಲಿಡುತ್ತಿದ್ದೀರಿ ಆದರೆ ಅರೆಮನಸ್ಸಿನಿಂದ ಬರಬೇಡಿ. ನಿಮ್ಮ ಚಿತ್ರಗಳು ಮತ್ತು ವಿಡಿಯೋಗಳಿಂದಾಗಿ ಟ್ರೋಲಿಂಗ್ ಇರುತ್ತದೆ. ಆದರೆ ನೀವು ಭಯಪಡುವ ಅಗತ್ಯವಿಲ್ಲ, ನೀವು ದೃಢವಾಗಿ ಉಳಿಯಬೇಕು’ ” ಎಂದಿದ್ದಾರೆ. ನಾನು ಈಗಾಗಲೇ ಪ್ರಿಯಾಂಕಾ ಅವರ ಮಾತುಗಳಿಂದ ಧೈರ್ಯಶಾಲಿಯಾಗಿದ್ದೇನೆ ಮತ್ತು ನನ್ನನ್ನು ತಡೆಯಲು ಆಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ತಂದೆ ಒಬ್ಬ ರೈತ, ನನ್ನ ತಾಯಿ ಗೃಹಿಣಿ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಾನು ಭಾರತವನ್ನು ಪ್ರತಿನಿಧಿಸಿದ್ದಕ್ಕಾಗಿ ಜನರು ಹೆಮ್ಮೆಪಡಬೇಕು ಎಂದು ಅರ್ಚನಾ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ನನ್ನ ಬಗ್ಗೆ ನಿಂದನೆ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡುವ ಜನರಿಗೆ, ನಾನು ಎರಡು ವೃತ್ತಿಪರ ಜೀವನವನ್ನು ಹೊಂದಿದ್ದೇನೆ ಮತ್ತು ಎರಡೂ ಪರಸ್ಪರ ಭಿನ್ನವಾಗಿದೆ ಎಂದು ಹೇಳಲು ಬಯಸುತ್ತೇನೆ. ನಾನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರಿಂದ ಅವರು ಎರಡನ್ನೂ ಬೆರೆಸಬಾರದು ಎಂದು ನಾನು ಬಯಸುತ್ತೇನೆ. ನಾನು ನನ್ನ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದೇನೆ ಎಂದು ಅರ್ಚನಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next