ನವದೆಹಲಿ: “200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಾತ್ರವಿಲ್ಲ. ಆಕೆ ಚಿಂತಿಸಬಾರದು. ಅವಳ ರಕ್ಷಣೆಗೆ ನಾನಿದ್ದೇನೆ,’ ಎಂದು ವಂಚಕ ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ.
ಆತನನ್ನು ದೆಹಲಿ ಪಾಟಿಯಾಲ ಹೌಸ್ ಕೋರ್ಟ್ ಎದುರು ಶುಕ್ರವಾರ ಹಾಜರುಪಡಿಸಲಾಯಿತು. ಈ ವೇಳೆ ಆತ ಬಂಧಿತ ಆಮ್ ಆದ್ಮಿ ಪಕ್ಷದ(ಆಪ್) ಸತ್ಯೇಂದ್ರ ಜೈನ್ ಅವರ ಕುರಿತೂ ಹೇಳಿಕೆ ನೀಡಿದ ಸುಕೇಶ್, “ಸತ್ಯೇಂದ್ರ ಜೈನ್ ಅವರನ್ನು ಆಪ್ ಸರ್ಕಾರ ಸಚಿವ ಸ್ಥಾನದಿಂದ ಇನ್ನೂ ಏಕೆ ಕೆಳಗಿಳಿಸಿಲ್ಲ? ಎಎಸ್‌ಪಿ ದೀಪಕ್ ಶರ್ಮ ಅವರು ನನ್ನಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಹಾಗೂ ನನ್ನ ಜೈಲಿನ ಬ್ಯಾರಕ್ ಮೇಲೆ ನಡೆದ ದಾಳಿಯ ವಿಡಿಯೋ ಲೀಕ್ ಮಾಡಿದ್ದಾರೆ,’ ಎಂದು ಆರೋಪಿಸಿದ್ದಾನೆ. ಇದೇ ವೇಳೆ ನ್ಯಾಯಾ ಲಯ ಸೋಮವಾರದವರೆಗೆ ಆತನನ್ನು ಇಡಿ ವಶಕ್ಕೆ ನೀಡಿತು.