Advertisement

ಪಡಿತರ ಅಕ್ಕಿ ಅಕ್ರಮ ಸಂಗ್ರಹ, ಮಾರಾಟ

05:11 PM Sep 23, 2021 | Team Udayavani |

ಚಿಕ್ಕಬಳ್ಳಾಪುರ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸವಿತಾ ಹಾಗೂ ಆಹಾರ ಇಲಾಖೆಯ ಶಿರಸ್ತೇದಾರ್‌, ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಸಪ್ತಗಿರಿ ಗ್ರಾಮೋದಯ ಅಕ್ಕಿ ಗಿರಣಿಗೆ ಅನಿರೀಕ್ಷಿತವಾಗಿ ದಾಳಿ ನಡೆಸಿ, ಅಕ್ಕಿ ಗಿರಣಿಯಲ್ಲಿ ಅಕ್ಕಿಯನ್ನು ರೀಪಾಲಿಶ್‌ ಮಾಡಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಿದ್ಧಪಡಿಸುತ್ತಿದ್ದ ಅಂಶ ಬೆಳಕಿಗೆ ತಂದಿದ್ದಾರೆ.

Advertisement

ಅಕ್ಕಿ ಗಿರಣಿಯ ಮುಖ್ಯ ಬಾಗಿಲು ಮುಚ್ಚಿ ಪಕ್ಕದಲ್ಲಿರುವ ಕಿರಿಯ ಬಾಗಿಲು ತೆರೆದು ಅಕ್ಕಿಯನ್ನು ರೀ ಪಾಲಿಶ್‌ ಮಾಡಿ ಅಕ್ಕಿ ಮತ್ತು ನುಚ್ಚಕ್ಕಿ ಬೇರ್ಪಡಿಸಿ ತಲಾ 25 ಕೆ.ಜಿಯಂತೆ ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಮಯೂರ ಬ್ರಾಂಡ್‌ ಹೆಸರಿನಲ್ಲಿ ಸಿದ್ಧಗೊಳಿಸುತ್ತಿರುವಾಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸವಿತಾ ಹಾಗೂ ಆಹಾರ ಇಲಾಖೆಯ ಶಿರಸ್ತೆದಾರ್‌ ದಾಳಿ ನಡೆಸಿದ್ದಾರೆ.

ಕಾಳಸಂತೆಯಲ್ಲಿ ಮಾರಾಟ: ಗಿರಣಿಯ ಮಾಲಿಕ ವೇಣುಗೋಪಾಲ್‌ ಅವರು ಸ್ಥಳದಲ್ಲಿಯೇ ಇದ್ದು, ಸದರಿ ಅಕ್ಕಿ ಕುರಿತು ಲೆಕ್ಕಪತ್ರಗಳ ನಿರ್ವಹಣೆಯನ್ನು ವಿಚಾರಿಸಲಾಯಿತು. ಅವರು, ಯಾವುದೇ ರೀತಿಯ ದಾಖಲೆಗಳನ್ನು ನೀಡಿಲ್ಲ. ಅನ ಧಿಕೃತವಾಗಿ ಸರ್ಕಾರದ ವಿವಿಧ ಯೋಜನೆಗಳ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ:ಅರಮನೆ ಆವರಣದಲ್ಲಿ ಗರಿಗೆದರಿದ ದಸರಾ ಸಿದ್ಧತೆ

ಅಕ್ಕಿ, ಪರಿಕರಗಳ ಜಪ್ತಿ: ಈ ಹಿನ್ನೆಲೆಯಲ್ಲಿ ಸಪ್ತಗಿರಿ ಅಕ್ಕಿ ಗಿರಣಿಯಲ್ಲಿ ಅಕ್ರಮವಾಗಿ ಪತ್ತೆಯಾದ ಮಯೂರ ಬ್ರಾಂಡ್‌ ಹೆಸರಿನ 61 ಚೀಲಗಳಲ್ಲಿ 15.25 ಕ್ವಿಂಟಲ್‌ ನುಚ್ಚಕ್ಕಿ ಹಾಗೂ ಅದೇ ಬ್ರಾಂಡ್‌ನ‌ 122 ಚೀಲಗಳಲ್ಲಿ 27.75 ಕ್ವಿಂಟಲ್‌ ಅಕ್ಕಿ ಸೇರಿ ಒಟ್ಟು 183 ಚೀಲಗಳಲ್ಲಿ 43.00 ಕ್ವಿಂಟಲ್‌ನಷ್ಟು ಅಕ್ಕಿ, ನುಚ್ಚಕ್ಕಿಯನ್ನು ಹಾಗೂ ಎಲೆಕ್ಟ್ರಾನಿಕ್‌ ವೇಯಿಂಗ್‌ ಸ್ಕೇಲ್‌ ಮತ್ತು ಚೀಲಗಳ ಬಾಯಿ ಹೊಲಿಯಲು ಉಪಯೋಗಿಸುತ್ತಿದ್ದ ಸ್ಟೀಚಿಂಗ್‌ ಮಿಷನ್‌ ಅನ್ನು ಸರ್ಕಾರದ ಪರವಾಗಿ ಜಪ್ತಿ ಮಾಡಿ ತಾಲೂಕಿನ ನಂದಿ ಗಿರಿಧಾಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೇ ಗಿರಣಿ ಮಾಲಿಕರು ವಿರುದ್ಧ ಇದು ಎರಡನೇ ಪ್ರಕರಣ ದಾಖಲಾಗಿದೆ.

Advertisement

ಈ ಹಿಂದೆಯೂ 350 ಕ್ವಿಂಟಲ್‌ ಅಕ್ಕಿ, ನುಚ್ಚಕ್ಕಿ ಜಪ್ತಿ ಮಾಡಿ ಕೇಸು ದಾಖಲು
ಈ ಹಿಂದೆ 4.6.2021ರಂದು ಈ ಅಕ್ಕಿ ಗಿರಣಿಯಲ್ಲಿ ಅನ ಧಿಕೃತವಾಗಿ ರೀ ಪಾಲಿಶ್‌ ಮಾಡಿ ಅಕ್ರಮವಾಗಿ ಸಂಗ್ರಹಿಸಿದ್ದ ಸರ್ಕಾರದ ವಿವಿಧ ಯೋಜನೆಗಳ 350 ಕ್ವಿಂಟಲ್‌ ಅಕ್ಕಿ ಮತ್ತು ನುಚ್ಚಕ್ಕಿಯನ್ನು ಜಪ್ತಿ ಮಾಡಿ ಅದೇ ದಿನದಂದು ಚಿಕ್ಕಬಳ್ಳಾಪುರ ತಾಲೂಕು ನಂದಿ ಗಿರಿಧಾಮ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ, ಅಕ್ಕಿ ಗಿರಣಿದಾರರು ಸಾರ್ವಜನಿಕರಿಂದ ಸರ್ಕಾರದ ವಿವಿಧ ಯೋಜನೆಗಳ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಅದನ್ನು ರೀ ಪಾಲಿಶ್‌ ಮಾಡಿ ಅಕ್ರಮವಾಗಿ ಬೇರೆ ಬೇರೆ ನಕಲಿ ಬ್ರಾಂಡ್‌ಗಳ ಹೆಸರಿನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿರುವುದು ಕಂಡುಬಂದಿದೆ. ಸಾರ್ವಜನಿಕರು, ಪಡಿತರ ಚೀಟಿದಾರರರು ತಮ್ಮ ಹಕ್ಕಿನ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡು ವುದು ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016ರ ಅನ್ವಯ ಅಪರಾಧವಾಗಿದ್ದು, ಅಂತಹ ಪಡಿತರ ಚೀಟಿ ನಿಯಮಾನುಸಾರ 6 ತಿಂಗಳ ಕಾಲ ಅಮಾನತುಪಡಿಸಲಾಗುವುದೆಂದು ಇಲಾಖೆ ಅ ಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next