Advertisement
ಕೋರ್ಟ್ ರಸ್ತೆಯಲ್ಲಿನ ಖಾಸಗಿ ವಸತಿ ಗೃಹದ ಮುಂಭಾಗದಲ್ಲಿ ನಗರಸಭೆಯಿಂದ ಅನುಮತಿ ಪಡೆಯದೆ, ಹೈ-ಟೆನ್ಷನ್ ವೈರ್ ಹಾದುಹೋಗಿರುವ ಕೆಳಭಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಮಳಿಗೆ ನಿರ್ಮಿಸಿದ್ದರು. ಈ ಕುರಿತು ಸ್ಥಳೀಯರೊಬ್ಬರು ನೀಡಿದ ದೂರಿನ ಮೇರೆಗೆ, ನಗರಸಭೆಯಿಂದ ಕಟ್ಟಡ ತೆರವುಗೊಳಿಸಲು ಈ ಹಿಂದೆ ನೊಟೀಸ್ ನೀಡಲಾಗಿತ್ತು. ಆದರೆ ತೆರವುಗೊಳಿಸದೇ ಇದ್ದುದರಿಂದ, ಕಟ್ಟಡ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು ಎನ್ನಲಾಗಿದೆ. ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಂಡು ಕಟ್ಟಡ ತೆರವಿಗೆ ಆದೇಶ ನೀಡಿದ ಹಿನ್ನಲೆ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಷೇಕ್ ಫಿರೋಜ್, ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ವೆಂಕಟೇಶ್ ಸಮ್ಮುಖದಲ್ಲಿ ಕಟ್ಟಡವನ್ನು ತೆರವುಗೊಳಿಸಲಾಯಿತು. ನಗರಸಭೆ ಕಿರಿಯ ಅಭಿಯಂತರರಾದ ಚಂದ್ರಶೇಖರ್, ರಾಮೇಗೌಡ ಹಾಗೂ ಬೆಸ್ಕಾಂ ಸಿಬ್ಬಂದಿ ಇದ್ದರು. Advertisement
ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ
03:55 PM Jan 28, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.