Advertisement

ಅಕ್ರಮ ಆಸ್ತಿ ಗಳಿಕೆ: ಶಾಸಕ ಜಮೀರ್ ಅಹಮದ್ ಎಸಿಬಿ ವಿಚಾರಣೆಗೆ ಹಾಜರು

10:52 PM Aug 06, 2022 | Team Udayavani |

ಬೆಂಗಳೂರು: ಅಕ್ರಮ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿ ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರು ಶನಿವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮುಂದೆ ವಿಚಾರಣೆಗೆ ಹಾಜರಾದರು.

Advertisement

ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಈ ಹಿಂದೆ ಸಮನ್ಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಜಮೀರ್‌ ವಿಚಾರಣೆ ಎದುರಿಸಿದ್ದು, ಆಸ್ತಿಯ ಮೂಲದ ಕುರಿತು ಲಿಖಿತ ರೂಪದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಇದಕ್ಕೆ ಪೂರಕವಾದ ದಾಖಲೆ ಸಲ್ಲಿಸಲು ಜಮೀರ್‌ಗೆ ಎಸಿಬಿ ಅಧಿಕಾರಿಗಳು ಕಾಲಾವಕಾಶ ನೀಡಿದ್ದಾರೆ. ಜಮೀರ್‌ ಕೆಲವು ದಾಖಲೆಗಳನ್ನಷ್ಟೆ ಸಲ್ಲಿಸಿದ್ದು, ತನಿಖೆ ಭಾಗವಾಗಿ ಪ್ರಮುಖ ದಾಖಲೆ ಸಲ್ಲಿಸುವಂತೆ ಎಸಿಬಿ ಸೂಚಿಸಿದೆ ಎಂದು ತಿಳಿದು ಬಂದಿದೆ.

ಡಿಕೆಶಿ, ಜಮೀರ್‌ ಮಾತ್ರ ಕಾಣಿಸೋದಾ?
ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಮೀರ್‌, ರಾಜ್ಯದಲ್ಲಿ ಡಿ.ಕೆ ಶಿವಕುಮಾರ್‌ ಹಾಗೂ ನಾನು ಮಾತ್ರ ಅವರ ಕಣ್ಣಿಗೆ ಕಾಣಿಸುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಮನ್ಸ್‌ ಮೂಲಕ ಕೇಳಿದ ಕೆಲ ದಾಖಲೆಗಳನ್ನು ಎಸಿಬಿ ಅಧಿಕಾರಿಗಳಿಗೆ ಒದಗಿಸಿದ್ದೇನೆ. ಇ.ಡಿ. ಅಧಿಕಾರಿಗಳು ಈ ಹಿಂದೆ ಮನೆ ಖರೀದಿ ಹಾಗೂ ಇನ್ನಿತರ ವ್ಯವಹಾರಗಳ ಬಗ್ಗೆ ದಾಖಲೆ ಕೇಳಿದ್ದರು. ಅವರಿಗೆ ಕೊಟ್ಟಿರುವ ದಾಖಲೆಗಳನ್ನೇ ಎಸಿಬಿಗೂ ಕೊಟ್ಟಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next