Advertisement

ಹೆಂಗವಳ್ಳಿ: ಅಕ್ರಮ ಗೋ ಸಾಗಾಟ; ಆರೋಪಿಗಳು ವಶ

09:53 PM Aug 06, 2023 | Team Udayavani |

ಸಿದ್ದಾಪುರ: ಆರೋಪಿ ಹೆಂಗವಳ್ಳಿ ಗೋಪಾಲ ಪೂಜಾರಿ(45) ಎಲ್ಲಿಯೋ ಕದ್ದುತಂದ ಎರಡು ಗಂಡು ಕರುಗಳನ್ನು ಬೋಜ ಪೂಜಾರಿ(35) ನೀರ್ಮಣ್ಣು ಹೈಕಾಡಿ ಅವರೊಂದಿಗೆ ಸುಜಾತ ಪೂಜಾರಿ (38) ಹೈಕಾಡಿ ಅವರ ಪಿಕಪ್‌ ವಾಹನದಲ್ಲಿ ಹಾಕಿಕೊಂಡು ಹೆಂಗವಳ್ಳಿ ಕಡೆಯಿಂದ ಹೈಕಾಡಿ ಕಡೆಗೆ ಅಕ್ರಮವಾಗಿ ಗೋಸಾಣಿಕೆ ಮಾಡುತ್ತಿದ್ದರು.

Advertisement

ಹೆಂಗವಳ್ಳಿ ಕ್ರಾಸ್‌ ಬಳಿ ಪೊಲೀಸರು ವಾಹನ ತಡೆದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next