ಕೆ.ಆರ್.ಪೇಟೆ: ತಾಲೂಕಿನ ಸೋಮೇನಹಳ್ಳಿ ಗ್ರಾಮ ದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೈ ಮಾರುತಿ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಿದ ತಹಶೀಲ್ದಾರ್ ಎಂ.ಶಿವಮೂರ್ತಿ ನೇತೃತ್ವದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಕ್ರಮ ಗಣಿಗಾರಿಕೆಗೆ ಬೀಗ ಮುದ್ರೆ ಹಾಕಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಜೈಮಾರುತಿ ಕಲ್ಲು ಗಣಿಗಾರಿಕೆಯ ಮಾಲೀಕ ಮಂಜುನಾಥ್ ಸುಮಾರು 2014ರಿಂದ ಈವರೆಗೆ ಯಾವುದೇ ಪರವಾನಗಿ ಪಡೆಯದೆ ಕಲ್ಲು ಗಣಿಗಾರಿಕೆ ನಡೆಸುವ ಮೂಲಕ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ದ್ದಲ್ಲದೆ, ಪರಿಸರಕ್ಕೆ ಹಾನಿಯಾಗುವಂತೆ ಗಣಿಗಾರಿಕೆ ನಡೆಸಿ ಪರಿಸರ ನಾಶಕ್ಕೂ ಕಾರಣರಾಗಿದ್ದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶದ ಮೇರೆಗೆ ಸೋಮೇನಹಳ್ಳಿಯ ಜೈಮಾರುತಿ ಸ್ಟೋನ್ ಕ್ರಷರ್‌ಗೆ ದಾಳಿ ನಡೆಸುವ ಸುಳಿವು ಅರಿತ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ದಂಧೆಕೋರರು ಸ್ಥಳದಿಂದ ಪರಾರಿಯಾಗಿದ್ದರು. ಆಗ ಅಧಿಕಾರಿಗಳು ಕ್ರಷರ್ ಬಳಿ ನಿಲ್ಲಿಸಿದ್ದ 2 ಜೆಸಿಬಿ ಮತ್ತು 2 ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡು ಕ್ರಷರ್‌ಗೆ ಬೀಗ ಜಡಿದು ಮಾಲೀ ಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಶಿವಪುರ ಬಳಿ ಕ್ರಷರ್ ಬಂದ್: ಶೀಳನೆರೆ ಹೋಬಳಿ ಶಿವಪುರದ ಬಳಿ ಗಣಿಗಾರಿಕೆ ನಡೆಸುತ್ತಿದ್ದ ಟಿ.ಜೆ.ಸ್ಟೋನ್ ಕ್ರಷರ್‌ಗೆ ಅಧಿಕೃತ ಪರವಾನಗಿ ಇದ್ದರೂ ಎಂ.ಸ್ಯಾಂಡ್, ಜಲ್ಲಿ, ಸೈಜುಗಲ್ಲುಗಳನ್ನು ಹೊರ ಸಾಗಾಣಿಕೆ ಮಾಡಿರುವ ಲೋಡ್‌ಗಳ ಬಗ್ಗೆ ಸೂಕ್ತ ದಾಖಲೆ ಸಲ್ಲಿಸದ ಕಾರಣ ಅಲ್ಲಿಯವರೆಗೆ ಕ್ರಷರ್ ಬಂದ್ ಮಾಡಿ ದಾಖಲೆ ಸಲ್ಲಿಸಿ ಬಿಡುಗಡೆ ಮಾಡಿಸಿಕೊಳ್ಳುವಂತೆ ಮಾಲೀಕರಿಗೆ ಅಧಿಕಾರಿಗಳು ಸಲಹೆ ನೀಡಿದ್ದರು.
ದಾಖಲೆಗಳ ಪರಿಶೀಲನೆ: ಅಧಿಕಾರಿಗಳು ಕ್ರಷರ್‌ಗೆ ಭೇಟಿ ನೀಡಿದ ವೇಳೆ ವಿವಿಧ ಇಲಾಖೆಗಳಿಂದ ಪಡೆದಿರುವ ಅಧಿಕೃತ ಪರವಾನಗಿ ಪತ್ರಗಳನ್ನು ಕ್ರಷರ್ ಮಾಲೀಕ ಹೆಚ್.ಟಿ.ಲೋಕೇಶ್ ನೀಡಿದರು. ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಅಧಿಕೃತ ಪರವಾನಗಿ ಪಡೆದು ಕೊಂಡಿರುವಂತೆಯೇ ಎಂಸ್ಯಾಂಡ್, ಜಲ್ಲಿ, ಸೈಜುಗಲ್ಲುಗಳನ್ನು ಹೊರ ಸಾಗಿಸುವಾಗ ಅಗತ್ಯ ಬಿಲ್ ಇತರೆ ದಾಖಲೆ ಪತ್ರಗಳನ್ನು ನೀಡುವ ಮೂಲಕ ಕ್ರಷರ್ ನಡೆಸುವಂತೆ ಸಲಹೆ ನೀಡಿದರು. ಟಿ.ಜೆ.ಸ್ಟೋನ್ ಕ್ರಷರ್ ಮಾಲೀ ಕರು ಕ್ರಷರ್ ನಡೆಸಲು ಕಂದಾಯ ಇಲಾಖೆ, ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದಾರೆ. ಆದರೆ, ಪ್ರತಿನಿತ್ಯ 75 ರಿಂದ 80 ಲೋಡ್‌ನಷ್ಟು ಜಲ್ಲಿ, ಎಂ ಸ್ಯಾಂಡ್ ಉತ್ಪನ್ನಗಳನ್ನು ಹೊರಗೆ ಸಾಗಾಟ ನಡೆಸಿ ದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದ ಇಲಾಖೆ ಗಳಿಗೆ ಪೂರ್ಣ ಪ್ರಮಾಣದಲ್ಲಿ ಲೆಕ್ಕಪತ್ರಗಳನ್ನು ತೋರಿಸಿಲ್ಲ ವಾದ್ದರಿಂದ ಮಂಡ್ಯ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕ್ರಷರ್‌ನ್ನು ಸೀಜ್ ಮಾಡಲಾಗಿದೆ ಎಂದು ತಹಶೀಲ್ದಾರ್ ಶಿವಮೂರ್ತಿ ತಿಳಿಸಿದರು.
ಆದೇಶ ನೀಡುವವರೆಗೂ ಸ್ಥಗಿತ: ಮುಂದಿನ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಮುಂದಿನ ಆದೇಶವನ್ನು ನೀಡುವವರೆಗೆ ಕ್ರಷರ್‌ನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಅಲ್ಲಿಯವರೆಗೆ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡದಂತೆ ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ಮುತ್ತಪ್ಪ ಮಾಲೀಕರಿಗೆ ತಿಳಿಸಿದರು.
ದಾಳಿಯಲ್ಲಿ ತಹಶೀಲ್ದಾರ್ ಶಿವಮೂರ್ತಿ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಅಧಿಕಾರಿ ಮುತ್ತಪ್ಪ, ಜಿಲ್ಲಾ ಪರಿಸರ ಇಲಾಖೆಯ ಅಧಿಕಾರಿ ಸವಿತಾ, ಅರಣ್ಯ ಇಲಾಖೆ ಅಧಿಕಾರಿ ಮಧುಸೂದನ್, ಸಬ್ ಇನ್ಸ್‌ಪೆಕ್ಟರ್ ಹೆಚ್.ಎಸ್.ವೆಂಕಟೇಶ್, ರಾಜಸ್ವ ನಿರೀಕ್ಷಕ ಚಂದ್ರಶೇಖರ್, ಉಪತಹಶೀಲ್ದಾರ್ ಚಂದ್ರಶೇಖರ್‌ಗೌಡ, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾಜರ್ಜುನ್, ಸಂತೇಬಾಚಹಳ್ಳಿ ಉಪ ತಹಶೀಲ್ದಾರ್ ರಾಮಚಂದ್ರು ಮತ್ತಿತರರಿದ್ದರು.