Advertisement

ಐದನೇ ಬಾರಿಗೆ ಅಕ್ರಮ ಅಂಗಡಿಗಳ ತೆರವು

01:09 PM Nov 21, 2017 | |

ನಂಜನಗೂಡು: ದಕ್ಷಿಣ ಕಾಶಿ ಎಂದೆ ಪ್ರಸಿಧªವಾದ ನಂಜನಗೂಡಿನ ದೇವಾಲಯದ ಆವರಣದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡು ವ್ಯವಹಾರ ನಡೆಸುತ್ತಿದ್ದ ಅಂಗಡಿಗಳನ್ನು ಐದನೇ ಬಾರಿಗೆ ಪುನಃ ಸೋಮವಾರ ತೆರವುಗೊಳಿಸಲಾಯಿತು.

Advertisement

ಸೋಮವಾರ ಬೆಳ್ಳಂಬೆಳಗ್ಗೆ ಬಿಗಿಯಾದ ಪೊಲೀಸ್‌ ರಕ್ಷಣೆಯ ನಡುವೆ ದೇವಾಲಯದ ಅಧಿಕಾರಿ ಕುಮಾರ ಸ್ವಾಮಿ ಹಾಗೂ ಗಂಗಯ್ಯನವರ ನೇತ್ರತ್ವದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಮೇಶ ದೇವಾಲಯದ ಆವರಣದ ಚಾಮರಾಜನಗರ ಹಳೆ ರಸ್ತೆಯಲ್ಲಿನ ಅಂಗಡಿಗಳ ನೆಲಸಮ ಕಾಮಗಾರಿ ಪ್ರಾರಂಭಿಸಿದರು. ತೆರವು ಕಾರ್ಯ ಪ್ರಾರಂಭವಾದ ಕೆಲ ಹೊತ್ತಿನಲ್ಲಿ ತಾಲೂಕು ದಂಡಾಧಿಕಾರಿ ದಯಾನಂದ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಿಂದೆ 38 ಇಂದು 110: ಮಾಜಿ ಶಾಸಕ ವಿ ಶ್ರೀನಿವಾಸ ರಾಜ್ಯದ ಕಂದಾಯ ಸಚಿವರಾಗಿದ್ದಾಗ ಈ ಅಂಗಡಿಗಳ ನೆಲಸಮಕ್ಕಾಗಿ ಇಲ್ಲಿರುವ ಅಂಗಡಿಗಳ ಪಟ್ಟಿ ತಯಾರಿಸಿದಾಗ 38 ಅಂಗಡಿಗಳು ಆದಿಯಾಗಿ ಸಿದ್ದವಾಗಿತ್ತು . ಈ ಪಟ್ಟಣದ ಇತರೆಡೆಯೂ ಅನಧಿಕೃತವಾಗಿ ಪೆಟ್ಟಿ ಅಂಗಡಿಗಳು ನಿರ್ಮಾಣವಾದ ಹಾಗೆ ಇಲ್ಲಿಯೂ ಅಂಗಡಿಗಳ ನಿರ್ಮಾಣವಾಗಿ ಈಗ ಶಾಸಕ ಕೇಶವ ಮೂರ್ತಿಯವರ ಕಾಲಕ್ಕೆ 110 ಗಿ ವೃದ್ಧಿಯಾಗಿರುವ ಅಂಗಡಿಗಳನ್ನು ನೆಲಸಮ ಮಾಡಬೇಕಾಯಿತು. ಈ ಜಾಗದಲ್ಲಿ ದೇವಾಲಯದ ವತಿಯಿಂದ ಕಾಂಪೌಂಡ್‌ ನಿರ್ಮಿಸಿ ಉದ್ಯಾನವನ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಅದಕ್ಕಾಗಿ ಈಗ ತೆರವು ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ತಿಳಿಸಿದರು.

ಇದೇ ಕೊನೆಯ ಬಾರಿ: ಹಿಂದೆ ನಾಲ್ಕು ಬಾರಿ ಇಲ್ಲಿನ ಅಂಗಡಿಗಳು ನೆಲಸಮ ಗೊಂಡಿದ್ದು ಈಗ ಐದನೇ ಬಾರಿಗೆ ನೀವು ತೆರವು ಗೊಳಸುತ್ತಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಂಡಾಧಿಕಾರಿಗಳು ಇಲ್ಲಿ ಮತ್ತೆ ಅಂಗಡಿಗಳಿಗೆ ಸ್ಥಾನವಿಲ್ಲ ಎಂದರು. ದೇವಾಲಯದ ಸುತ್ತ ಮಾತ್ರ ಈ ಕಾರ್ಯಾಚರಣೆ ಸಿಮಿತವೇ ಎಂದಾಗ ಉತ್ತರಿಸಿದ ಅವರು ದೇವಾಲಯದ ಈ ಸ್ಥಳದಲ್ಲಿನ ಅನಧಿಕೃತ ಅಂಗಡಿಗಳನ್ನು ತೆರವು ಗೊಳಿಸಿ ಎಂದು ದೇವಾಲಯದಿಂದ ಬೇಡಿಕೆ ಬಂದಿದ್ದರಿಂದ ತೆರವು ಮಾಡಲಾಗುತ್ತಿದೆ ಇದೇ ರೀತಿ ಪಟ್ಟಣದಾದ್ಯಂತ ಹುಟ್ಟಿಕೊಂಡಿರುವ ಅಕ್ರಮ ಅಂಗಡಿಗಳನ್ನು ತೆರವು ಗೊಳಿಸಬೇಕು ಎಂಬ ಬೇಡಿಕೆ ನಗರಸಭೆಯಿಂದ ಅಧಿಕೃತವಾಗಿ ಬಂದಾಗ ಅವುಗಳನ್ನೂ ಸಹ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು.

ವಿದ್ಯುತ್‌ ನೀರು ಸಂಪರ್ಕ ಪಡೆದ ಅಂಗಡಿಗಳು ಅಕ್ರಮ ಹೇಗಾದವು: ಪ್ರವೀಣ ಕುಮಾರ ಅಂಗಡಿಗಳ ತೆರವು ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದ ಹಾಗೆ ಸ್ಥಳಕ್ಕೆ ಆಗಮಿಸಿದ ಕರವೇ ಜಿಲ್ಲಾದ್ಯಕ್ಷ ಪ್ರವೀಣ ಕುಮಾರ್‌ ನೀರು ವಿದ್ಯುತ್‌ ಸಂಪರ್ಕ ಪಡೆದ ಈ ಅಂಗಡಿಗಳು ಹೇಗೆ ಅಕ್ರಮ ಎಂದು ಪ್ರಶ್ನಿಸಿ ತೆರವು ಗೊಳಿಸುವ ಕುರಿತು ಸೂಚನೆಯನ್ನಾದರೂ ನೀಡಬಾರದೆ ದಯವಿಟ್ಟು ಒಂದೆರಡು ವಾರ ಅವಕಾಶ ನೀಡಿ ಈ ಬಡವರಿಗೆ ಬೇರಡೆ ಸ್ಥಳಾವಕಾಶ ಕಲ್ಪಿಸಿ ಎಂದು ಆಗ್ರಹಿಸಿದರು. ಬೇರೆ ಸ್ಥಳದ ಕುರಿತು ಶಾಸಕರೊಂದಿಗೆ ಚರ್ಚಿಸಿ ಎಂದ ಅಧಿಕಾರಿಗಳು ತೆರವು ಕಾರ್ಯದತ್ತ ಮುಗ್ನರಾದರು

Advertisement

ಆರೋಪ: ತೆರವು ಕಾರ್ಯಾಚರಣೆ ಇಲ್ಲೊಂದೇ ಏಕೆ ನಗರದಾದ್ಯಂತ ನಡೆಯಲಿ ಎಂದವರು ವಿಚಾರ ವೇದಿಕೆಯ ಅದ್ಯಕ್ಷ ಜಗದೀಶ್‌, ಪಟ್ಟಣದಲ್ಲಿ ಪ್ರಾಭಾವಿಗಳ ಮೇಲುಸ್ತುವಾರಿಯಲ್ಲಿ ಹುಲ್ಲಹಳ್ಳಿ ರಸ್ತೆ ಬಸವನ ಗುಡಿಯಿಂದ ಪ್ರಾರಂಭಿಸಿ ದೇವಾಲಯದ ವರಿಗೂ ನಾಯಿ ಕೊಡೆಗಳಂತೆ ದಿನಪ್ರತಿ ನಿರ್ಮಾಣ ವಾಗಿರುವ ಅಸಂಖ್ಯಾತ ಪೆಟ್ಟಿ ಅಂಗಡಿಗಳನ್ನೂ ನೆಲಸಮ ಮಾಡಲಿ ದೇವಾಲಯದ ಆವರಣದ ಅಂಗಡಿಗಳನ್ನು ಏಕೆ ನೆಲಸಮ ಮಾಡಬೇಕು. ಅಕ್ರಮ ಅಂಗಡಿಗಳ ನಿರ್ಮಾಣಕ್ಕೆ ನಗರಸಭೆಯದೇ ಬೆಂಗಾವಲು ಎಂದು ಅವರು ಆರೋಪಿಸಿದರು.

ನಗರಸಭಾ ವ್ಯಾಪ್ತಿಯ ಎಲ್ಲಡೆ ಈ ಕಾರ್ಯಾಚರಣೆ ನಡೆಯಲಿದೆ ಎಂದ ನಗರಸಭಾ ಆಯುಕ್ತ ವಿಜಯ್‌ ಇದರ ನಂತರ ರಥ ಬೀದಿ ಆಮೇಲೆ ರಾಷÅ$uಪತಿ ರಸ್ತೆ ಹುಲ್ಲಹಳ್ಳಿ ರಸ್ತೆ ಹಾಗೂ ಇತರೆಡೆಯ ಪೆಟ್ಟಿ ಅಂಗಡಿಗಳನ್ನೂ ತೆರವು ಗೊಳಿಸಲಾಗುತ್ತದೆ. ಇಂತಹ ಅಂಗಡಿಗಳಲ್ಲಿನ ನಲ್ಲಿ ಹಾಗೂ ವಿದ್ಯುತ್‌ ಸಂಪರ್ಕವೂ ಅಕ್ರಮವಾಗಿದೆ. ನಗರಸಭೆಯಿಂದ ಸೂಚನೆಯಿಲ್ಲದೆ ನೀರಿನ ನಲ್ಲಿ ಹಾಗೂ ವಿದ್ಯುತ್‌ ಸಂಪರ್ಕ ಪಡೆದಿದ್ದರೆ ಅಂತಹವರಿಗೂ ಕ್ರಮ ಜರುಗಿಸಲಾಗುವುದು. ಹಂತ ಹಂತ ವಾಗಿ ಎಲ್ಲ ಅಕ್ರಮ ಅಂಗಡಿಗಳಿಗೂ ಕಾರ್ಯಾಚರಣೆ ಬಿಸಿ ತಟ್ಟಲಿದೆ  
-ವಿಜಯ, ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next