Advertisement

ಅಕ್ರಮ ಮರಳು ಸಾಗಾಟ: ಲಾರಿ ವಶಕ್ಕೆ

02:18 PM May 17, 2022 | Niyatha Bhat |

ತೀರ್ಥಹಳ್ಳಿ: ಭಾನುವಾರ ಸಂಜೆಯ ವೇಳೆ ಮರಳನ್ನು ಡಬ್ಲಿಂಗ್‌ ಮಾಡಿಕೊಂಡು ಬರುತ್ತಿದ್ದ ಲಾರಿಯನ್ನು ಪೊಲೀಸರು ಕುಶಾವತಿ ಬಳಿ ಹಿಡಿದಿದ್ದಾರೆ. ತಾಲೂಕಿನ ಮಳಲೂರು, ಆಂದಿನಿ, ಬುಕ್ಲಾಪುರದಲ್ಲಿ ಪ್ರತಿದಿನ ಡಬ್ಲಿಂಗ್‌ ಮಾಡಲಾಗುತ್ತದೆ. ಆದರೆ ಇಲ್ಲಿ ಯಾವ ರೀತಿಯ ತಪಾಸಣೆಯೂ ನಡೆಯಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಕರೆಗೆ ಸ್ಪಂದಿಸುವುದಿಲ್ಲವೆಂಬುದು ಸ್ಥಳೀಯರ ಆರೋಪವಾಗಿದೆ.

Advertisement

ಮಾಮೂಲಿಯಾಗಿ ಮರಳು ಕ್ವಾರಿ ನಿಯಮದ ಪ್ರಕಾರ 8 ಟನ್‌ ಮರಳನ್ನು ಮಾತ್ರ ಲಾರಿಗೆ ತುಂಬಿಸಬೇಕೆಂಬ ನಿಯಮವಿದೆ. ಆದರೆ ಈ ನಿಯಮವನ್ನೆಲ್ಲಾ ಗಾಳಿಗೆ ತೂರಲಾಗಿದೆ. ಒಂದು ಲಾರಿಗೆ 25 ಟನ್‌ ಮರಳನ್ನು ತುಂಬಲಾಗುತ್ತದೆ. ಇದನ್ನೇ ಡಬ್ಲಿಂಗ್‌ ಎನ್ನಲಾಗುತ್ತದೆ. ಒಂದೇ ಬಿಲ್ಲು ಹಿಡಿದು 3 ಪಟ್ಟು ಲೋಡ್‌ ಹೆಚ್ಚಾಗುತ್ತದೆ. ಕ್ವಾರಿಗಳಲ್ಲಿ ಡಬ್ಲಿಂಗ್‌ ಮಾಡಿ ವಿಪರೀತ ಮರಳು ತುಂಬುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸುವುದು ಯಾವಾಗ?

ಭಾನುವಾರ ರಾತ್ರಿ ಮೂರು ಲಾರಿಗಳನ್ನು ಸೀಜ್‌ ಮಾಡಿದ್ದು ಸೀಜ್‌ ಆದ ಪ್ರತಿ ಲಾರಿಗಳಲ್ಲಿ ಪತ್ತೆಯಾದ ಮರಳು ಬರೋಬ್ಬರಿ 25 ಟನ್‌ ಲೋಡು ಇದೆ. ಹೀಗೆ ತುಂಬುವ ಲಾರಿಗಳನ್ನು ಮಾತ್ರ ಸೀಜ್‌ ಮಾಡುವುದು ಮಾತ್ರವಲ್ಲದೆ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು. ತಾಲೂಕಿನಾದ್ಯಂತ ಹೇರಳವಾಗಿರುವ ಅಕ್ರಮ ಮರಳು ಲೂಟಿಯಾಗುವುದನ್ನು ತಡೆಯುವುದು ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next