Advertisement

ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ದಾಳಿ: ದೋಣಿ ವಶಕ್ಕೆ ಪಡೆದ ಪೊಲೀಸರು

10:32 PM Feb 16, 2023 | Team Udayavani |

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಲಿಮಾರು ಗ್ರಾಮದ ಅವರಾಲು ಕೊಪ್ಪಲು ಎನ್ನುವಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ಪಡುಬಿದ್ರಿ ಪಿಎಸ್‌ಐ ಪುರುಷೋತ್ತಮ್‌ ಹಾಗೂ ಸಿಬಂದಿ ಗುರುವಾರ ದಾಳಿ ನಡೆಸಿದ್ದಾರೆ.

Advertisement

ಮರಳುಗಾರಿಕೆಗಾಗಿ ದಂಧೆಕೋರರು ರಾತ್ರಿಯ ವೇಳೆ ಬಳಸಿಕೊಳ್ಳಲು ಉಡುಪಿ ಜಿಲ್ಲೆಯ ಶಾಂಭವಿ ನದಿ ದಂಡೆಯಲ್ಲಿ ಇಟ್ಟಿದ್ದ ದೊಡ್ಡ ದೋಣಿಯೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಣ್ಣುಮುಚ್ಚಾಲೆ ಆಟವಾಡುವ ದಂಧೆಕೋರರು
ಈ ಕುರಿತಾಗಿ ಪೊಲೀಸರು ದಾಳಿಯಾಗಬಹುದೆಂಬ ಮುನ್ಸೂಚನೆಯನ್ನು ಪಡೆದ ದಂಧೆಕೋರರು ತಾತ್ಕಾಲಿಕವಾಗಿ ತಮ್ಮ ಕಾನೂನು ಬಾಹಿರ ಚಟುವಟಿಕೆಯನ್ನು ನಿಲ್ಲಿಸಿದ್ದರೂ, ಕಣ್ಣುಮುಚ್ಚಾಲೆಯಂತೆ ಶಾಂಭವಿ ಹೊಳೆಯ ಆಚೆಯ ದ.ಕ., ಗಡಿಭಾಗದಿಂದ ಎಲ್ಲ ಬೆಳವಣಿಗೆಗಳನ್ನು ಗಮನಿಸುವ ಇವರು ಸಮಯ ಸಾಧಿಸಿ ತಮ್ಮ ದಂಧೆಯನ್ನು ಮುಂದುವರಿಸುತ್ತಲೇ ಬರುತ್ತಿದ್ದಾರೆ ಎಂದು ಪೊಲೀಸ್‌ ಮಾಹಿತಿಗಳು ತಿಳಿಸಿವೆ.

ಕಂಚಿನಡ್ಕದ ನಿಜಾಮುದ್ದೀನ್‌, ಅವರಾಲು ಮಟ್ಟುವಿನ ರೋಹಿತ್‌ ಹಾಗೂ ಪ್ರಶಾಂತ್‌ ಈ ಅಕ್ರಮ ದಂಧೆಯನ್ನು ನಡೆಸುತ್ತಿರುವವರು. ರಾತ್ರಿಯ ವೇಳೆ ಇಲ್ಲಿನ ನದಿಯಿಂದ ತೆಗೆಯುತ್ತಿರುವ ಮರಳನ್ನು ಉಡುಪಿ ಜಿಲ್ಲೆಯ ಭಾಗದಿಂದ ದ.ಕ. ಜಿಲ್ಲೆಯ ಬಾಂದೊಟ್ಟುವಿನಲ್ಲಿ ಶೇಖರಿಸಿಡುತ್ತಿರುವ ಮಾಹಿತಿಯನ್ನು ಸ್ಥಳೀಯರಿಂದ ಪಡೆದ ಪಡುಬಿದ್ರಿ ಪೊಲೀಸರು ವರದಿಯನ್ನು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಜಪೆ: ಬೈಕ್‌ ಕಳವು ಪ್ರಕರಣ… ತಲೆಮರೆಸಿಕೊಂಡಿದ್ದ ನಾಲ್ವರ ಸೆರೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next