ಮಂಗಳೂರು : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್-ಹರೇಕಳ ಬಳಿ ನೇತ್ರಾವತಿ ನದಿಯಲ್ಲಿ ಶನಿವಾರ ದೋಣಿ ಮಗುಚಿ ಬಿದ್ದು ಓರ್ವ ಕಾರ್ಮಿಕ ನಾಪತ್ತೆಯಾಗಿ ಇನ್ನಿಬ್ಬರು ಪಾರಾಗಿದ್ದಾರೆ.
ಉತ್ತರಪ್ರದೇಶದ ರಾಜ್ (50) ನಾಪತ್ತೆಯಾದವರು. ಈತ ಇತರ ಇಬ್ಬರು ಕಾರ್ಮಿಕರೊಂದಿಗೆ ದೋಣಿಯಲ್ಲಿ ತೆರಳಿ ಮರಳು ತೆಗೆಯುತ್ತಿದ್ದರು ಎಂದು ತಿಳಿದುಬಂದಿದೆ.
ಅಕ್ರಮ ಮರಳುಗಾರಿಕೆ
ನೇತ್ರಾವತಿ ನದಿ ತುಂಬಿದ ಕಾರಣ ಅಡ್ಯಾರ್-ಹರೇಕಳ ಹೊಸ ಡ್ಯಾಮ್‌ನಲ್ಲಿ ಗೇಟ್ ತೆಗೆದು ಕೆಳಭಾಗಕ್ಕೆ ನೀರು ಬಿಡಲಾಗುತ್ತಿದೆ. ಶನಿವಾರ ರಾಜ್ ಮತ್ತು ಇತರ ಇಬ್ಬರು ಕಾರ್ಮಿಕರು ಡ್ಯಾಮ್‌ನ ಕೆಳಭಾಗದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದರು. ಈ ಸಂದರ್ಭ ದುರಂತ ಸಂಭವಿಸಿದೆ. ಈ ಭಾಗದಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೈದ ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು
Related Articles