Advertisement

ಅರಂತೋಡು: ಅಕ್ರಮವಾಗಿ ಸಂಗ್ರಹಿಸಿಟ್ಟ 100 ಲೋಡ್‌ ಮರಳು ವಶ

01:00 AM Dec 20, 2022 | Team Udayavani |

ಅರಂತೋಡು: ಅಜ್ಜಾವರ ಗ್ರಾಮದಲ್ಲಿ ಕಿರಿಯ ಕಂದಾಯ ಅಧಿಕಾರಿಗಳು ರವಿವಾರ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 100 ಲೋಡ್‌ ಮರಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ತಾಲೂಕಿನ ಅಜ್ಜಾವರ ಪಂಚಾಯತ್‌ ವ್ಯಾಪ್ತಿಯ ನಾಗೇಶ್‌ ಅವರ ಜಮೀನಿನಲ್ಲಿ ಸಮಾರು 80 ಲೋಡ್‌ನ‌ ಎರಡು ಅಕ್ರಮ ಮರಳು ದಾಸ್ತಾನು ಮತ್ತು ಅಡ³ಂಗಾಯದ ಮಹಮ್ಮದ್‌ ಶರೀಫ್ ಅವರ ಜಮೀನಿನಲ್ಲಿ 10 ಲೋಡ್‌, ಪೊರಂಬೋಕಿನಲ್ಲಿ 5ರಿಂದ 10 ಲೋಡ್‌ ಅಕ್ರಮ ಮರಳು ದಾಸ್ತಾನು ಪತ್ತೆಯಾಗಿದೆ.

ಸುನಿಲ್‌ ಹಾಗೂ ಶರೀಫ್ ಅವರು ಇದು ತಮಗೆ ಸಂಬಂಧಿಸಿದ್ದು ಎಂದು ಹೇಳಿದ್ದಾರಾದರೂ ಸಂಬಂಧ ದಾಖಲೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next