Advertisement
ಹೊರ ರಾಜ್ಯ, ಜಿಲ್ಲೆಗಳಿಂದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಂಡ್ಯಕ್ಕೆ ತಂದು ವಿವಿಧ ರೈಸ್‌ಮಿಲ್ ಗಳಲ್ಲಿ ಪಾಲಿಶ್ ಮಾಡಿ ಹೊರ ರಾಜ್ಯ, ಜಿಲ್ಲೆ, ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
Related Articles
Advertisement
ರೈಸ್‌ಮಿಲ್ ಮೇಲೆ ದಾಳಿ: ನಗರದ ರೈಸ್‌ಮಿಲ್‌ವೊಂದರಲ್ಲಿ ಪಡಿತರ ಅಕ್ಕಿಯನ್ನು ತಂದು ಪಾಲಿಶ್ ಮಾಡಿ ವಿವಿಧ ಬ್ರಾಂಡ್‌ಗಳ ಮೂಲಕ ಹೊರ ರಾಜ್ಯ ಹಾಗೂ ದೇಶಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಅದನ್ನು ಬೇ ಸಿದ ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದರೂ, ಇದುವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಪ್ರಕರಣ ಯಾವ ಮಟ್ಟದಲ್ಲಿದೆ ಎಂಬುದು ಸಾರ್ವಜನಿಕರಿಗೆ ತಿಳಿದಿಲ್ಲ.
ಕ್ಯಾಂಟರ್ ವಶಪಡಿಸಿಕೊಂಡಿದ್ದ ಪೊಲೀಸರು:
ಇತ್ತೀಚೆಗೆ ಕ್ಯಾಂಟರ್‌ನಲ್ಲಿ ಅಕ್ಕಿ ಸಾಗಾಣೆ ಮಾಡಲಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ, ಕ್ಯಾಂಟರ್‌ನ್ನು ವಶಕ್ಕೆ ಪಡೆದುಕೊಂಡಿದ್ದರು. ಇದರ ಬಗ್ಗೆ ಯಾವುದೇ ಮಾಹಿತಿ ನೀಡಲು ಪೊಲೀಸರು ಹಿಂದೇಟು ಹಾಕಿದ್ದರು. ಪ್ರಕರಣ ದಾಖಲಾಗಿದ್ದರೂ, ಇದುವರೆಗೂ ತನಿಖೆ ಯಾವ ಹಂತದಲ್ಲಿದೆ ಎಂಬುದು ತಿಳಿದು ಬಂದಿಲ್ಲ.
ರಾತ್ರೋ ರಾತ್ರಿ ದಾಸ್ತಾನು ಮಾಯ: ಕಳೆದ ಡಿ.8ರಂದು ಮಂಡ್ಯ ನಗರದ ಹೊರವಲಯದ ಸ್ವರ್ಣಸಂದ್ರ ಇಂಡಸ್ಟ್ರೀಯಲ್‌ನ ಲಕ್ಷ್ಮೀದೇವಿ ರೈಸ್ ಮಿಲ್ ಮೇಲೆ ಅಕ್ರಮ ಅಕ್ಕಿ ಸಾಗಾಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ
ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಆಗ 525ಕ್ಕೂ ಹೆಚ್ಚು ಅಕ್ಕಿ ತುಂಬಿದ ಕ್ಯಾಂಟರ್‌ನ್ನು ವಶಪಡಿಸಿಕೊಳ್ಳಲಾಗಿತ್ತು. ಅಕ್ಕಿಯನ್ನು ರೈಸ್‌ಮಿಲ್‌ನ ದಾಸ್ತಾನಿಡಲಾಗಿತ್ತು. ಕ್ಯಾಂಟರ್ ಹಾಗೂ ದಾಸ್ತಾನಿಕ ಬೀಗದ ಕೀಯನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಆದರೆ, ರಾತ್ರೋ ರಾತ್ರಿ ಅಕ್ಕಿ ದಾಸ್ತಾನು ಮಾಯವಾಗಿತ್ತು.
ಪೊಲೀಸರು ಶಾಮೀಲು: ದಾಸ್ತಾನಿನಲ್ಲಿದ್ದ ಅಕ್ಕಿಯು ಬೆಳಗ್ಗೆ ಬಂದು ನೋಡುವಷ್ಟರಲ್ಲಿ ಮಾಯವಾಗಿತ್ತು. ತಹಶೀಲ್ದಾರ್ ಚಂದ್ರಶೇಖರ್ ಶಂ.ಗಾಳಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವಂತೆ ರಾತ್ರಿ ದಾಳಿ ಮಾಡಿ ವಶಪಡಿಸಿಕೊಂಡಿದ್ದ ಅಕ್ಕಿಯು ಬೆಳಗ್ಗೆ ನೋಡುವಷ್ಟರಲ್ಲಿ ಇಲ್ಲವಾಗಿದೆ. ದಾಸ್ತಾನಿನ ಬೀಗದಕೀಯನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಆದ್ದರಿಂದ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಅಲ್ಲದೆ, ಪೊಲೀಸರ ವಿರುದ್ಧವೇ ದೂರು ನೀಡಿದ್ದರು. ಆದರೆ, ತಹಶೀಲ್ದಾರ್ ದೂರು ಪರಿಗಣಿಸದೆ ಪೊಲೀಸರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರ ದೂರು ಪಡೆದಿರುತ್ತಾರೆ. ಇದರಿಂದಅಕ್ಕಿಯ ದಂಧೆಯಲ್ಲಿ ಪೊಲೀಸ್ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಮೀಲಾಗಿದ್ದು, ಪೊಲೀಸರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿತ್ತು.
ವಿವಿಧ ಬ್ರಾಂಡ್‌ಗಳ ಮೂಲಕ ಮಾರಾಟ :
ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ವಿವಿಧ ಬ್ರಾಂಡ್‌ಗಳ ಮೂಲಕ ಹೊರ ಜಿಲ್ಲೆ, ದೇಶಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಸತ್ಯ ಹೊರಬಂದಿದೆ. ಅಧಿಕಾರಿಗಳು ದಾಳಿ ನಡೆಸಿದಾಗ, ವಿವಿಧ ನಕಲಿ ಬ್ರಾಂಡ್‌ಗಳ ಚಿಹ್ನೆ ಇರುವ ಚೀಲಗಳು ಪತ್ತೆಯಾಗಿವೆ. ನಕಲಿ ಬ್ರಾಂಡ್‌ನಲ್ಲಿ ಗ್ರಾಹಕರಿಗೆ ಅಕ್ಕಿ ಸರಬರಾಜು ಮಾಡುತ್ತಿರುವ ದಂಧೆ ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ.
ಮಂಡ್ಯದಲ್ಲಿ ಪದೇ ಪದೆ ಅಕ್ರಮ ಪಡಿತರ ಅಕ್ಕಿ ದಂಧೆ ಪ್ರಕರಣಗಳುಹೆಚ್ಚಾಗುತ್ತಿದ್ದು, ಮೊನ್ನೆ ನಡೆದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್‌ದಾಖಲಾಗಿದೆ. ಮುಂದೆ ಇದೇ ರೀತಿ ಆಗದಂತೆ ಕ್ರಮ ಕೈಗೊಳ್ಳುವಂತೆ ಆಹಾರಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ಅದರಂತೆ ಪೊಲೀಸ್ ಇಲಾಖೆಗೂ ತಿಳಿಸಲಾಗಿದೆ.–ಎಸ್.ಅಶ್ವತಿ, ಜಿಲ್ಲಾಧಿಕಾರಿ, ಮಂಡ್ಯ
ಅನರ್ಹರಿಗೂ ಪಡಿತರ ಕಾರ್ಡ್ ವಿತರಣೆ ಮಾಡಿರುವುದರಿಂದ ಪಡಿತರ ಅಕ್ಕಿ ಈ ರೀತಿ ದುರುಪಯೋಗವಾಗುತ್ತಿದೆ. ಇದರ ಬಗ್ಗೆ ಪೊಲೀಸರು ನಿರ್ಲಕ್ಷ್ಯ ತೋರದೆಕ್ರಮ ಕೈಗೊಳ್ಳಬೇಕು. ಪಡಿತರ ಅಕ್ಕಿ ಬಡವರಿಗೆ ವಿತರಣೆ ಮಾಡಬೇಕು. ಆದರೆ, ಇದು ಕಾಳಸಂತೆಯಲ್ಲಿ ಪಾಲಿಶ್ ಮಾಡಿಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.ಇದನ್ನು ತಪ್ಪಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂದಾಗಬೇಕು. –ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷ, ರೈತಸಂಘ
–ಎಚ್.ಶಿವರಾಜು