Advertisement

ಶಿಕ್ಷಕರ ನೇಮಕದಲ್ಲಿ ಅಕ್ರಮ: ಇಬ್ಬರು ಹಾಲಿ ನಿರ್ದೇಶಕರ ಸೆರೆ

12:26 AM Sep 27, 2022 | Team Udayavani |

ಬೆಂಗಳೂರು: 2014-15ರಲ್ಲಿ ನಡೆದಿದ್ದ ಶಿಕ್ಷಕರ ಅಕ್ರಮ ನೇಮಕ ಪ್ರಕರಣ ಸಂಬಂಧ ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕಿ ಗೀತಾ, ಪಠ್ಯ ಪುಸ್ತಕ ಗಳ ನಿರ್ದೇಶಕ ಮಾದೇಗೌಡ ಸೇರಿದಂತೆ ಐವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

Advertisement

ನಿವೃತ್ತ ಜಂಟಿ ನಿರ್ದೇಶಕರಾದ ಜಿ.ಆರ್‌.ಬಸವರಾಜು, ಕೆ.ರತ್ನಯ್ಯ, ಡಿ.ಕೆ. ಶಿವಕುಮಾರ್‌ ಉಳಿದ ಬಂಧಿತರು.

ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಸಿಐಡಿ, ಶಿಕ್ಷಕರ ನೇಮಕ ಅಕ್ರಮದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಹಿಂದೆ ಇದೇ ಕೇಸ್‌ನಲ್ಲಿ ಬಂಧನ ಕ್ಕೊಳಗಾಗಿದ್ದ ಆರೋಪಿಗಳ ವಿಚಾರಣೆ ವೇಳೆ ಈ ಜಾಲದ ಹಿಂದೆ ಇನ್ನಷ್ಟು ಕಾಣದ ಕೈಗಳು ಹಾಗೂ ಈ ಐವರ ಬಗ್ಗೆ ಸುಳಿವು ಸಿಕ್ಕಿತ್ತು. ಅವರು ಅಕ್ರಮ ಎಸಗಿರುವುದಕ್ಕೆ ಸಂಬಂಧಿಸಿ ಸಾಕ್ಷ್ಯಗಳು ಸಿಐಡಿ ಕೈಗೆ ಸಿಗುತ್ತಿದ್ದಂತೆ ಬಂಧಿಸಿದ್ದಾರೆನ್ನಲಾಗಿದೆ.

ಮೂರು ಜಿಲ್ಲೆಗಳ ಉಪನಿರ್ದೇಶಕರ ಕಚೇರಿ ಯಲ್ಲಿರುವ ದಾಖಲೆಗಳು ಹಾಗೂ ಸಹ ಶಿಕ್ಷಕ ರಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳ ಬಳಿ ಇರುವ ದಾಖಲೆಗಳನ್ನು ಸಿಐಡಿ ಪರಿಶೀಲಿಸಿತ್ತು. ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದಂತೆ ನೇಮಕಾತಿ ಮಂಡಳಿಯಲ್ಲಿ ಕೆಲಸ ಮಾಡುವವರನ್ನು ಸಂಪರ್ಕಿಸಿದ್ದರು.

ಅಕ್ರಮವಾಗಿ ಆಯ್ಕೆಯಾಗಲು ಅವರ ಜತೆಯೇ ಹಣದ ಒಪ್ಪಂದ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈಚೆಗೆ ಬಂಧಿತರಾಗಿದ್ದ ಎಫ್ಡಿಎ ಪ್ರಸಾದ್‌ ನೀಡಿದ್ದ ಮಾಹಿತಿ ಅನ್ವಯ ಈ ವಿಷಯ ಬೆಳಕಿಗೆ ಬಂದಿತ್ತು. ಐವರು ಆರೋಪಿಗಳನ್ನು ಸಿಐಡಿ ಪೊಲೀಸರು ಸೋಮವಾರ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಅ¨ರಂತೆ ಬಂಧಿತರನ್ನು ಅ.1ರ ವರೆಗೆ ಸಿಐಡಿ ವಶಕ್ಕೆ ನೀಡಿದೆ.

Advertisement

ಪ್ರಕರಣದ ಹಿನ್ನೆಲೆ
2012-13 ಮತ್ತು 2014-15ನೇ ಸಾಲಿನ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ (ಗ್ರೇಡ್‌-2) ಹಾಗೂ ದೈಹಿಕ ಶಿಕ್ಷಕರ (ಗ್ರೇಡ್‌-1) ನೇಮಕದಲ್ಲಿ ಅಕ್ರಮ ನಡೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಮಹೇಶ ಶ್ರೀಮಂತ ಸೂಸಲಾಡಿ ಎಂಬವರು 2012-13ನೇ ಸಾಲಿನಲ್ಲಿ ಅಕ್ರಮವಾಗಿ ನೇಮಕ ವಾಗಿದ್ದ ಸಂಬಂಧ ತನಿಖೆ ನಡೆಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಆ.12ರಂದು ದೂರು ದಾಖಲಿಸಿದ್ದರು. 2014-15ನೇ ಸಾಲಿನಲ್ಲಿ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಹಾಗೂ ದೈಹಿಕ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮದ ಸಂಬಂಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಗಂಭೀರತೆ ಅರಿತ ಸರಕಾರವು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ತುಮಕೂರಿನ 10 ಹಾಗೂ ವಿಜಯಪುರದ 1 ಸೇರಿ 11 ಮಂದಿಯನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next