Advertisement
ಮೈಮುಲ್‌ನಲ್ಲಿ ನಡೆದಿರುವ ದಾಖಲೆಗಳು ನಮಗೆ ಲಭ್ಯವಾ ಗಿದ್ದು, ಎಲ್ಲವನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗು ವುದು. ಕಳೆದ 3 ದಿನದ ಹಿಂದೆ ಮೈಮುಲ್ ನೇಮಕಾತಿ ಕುರಿತು ಹಲವು ಆರೋಪ ಮಾಡಿದ್ದ ಸಾ.ರಾ.ಮಹೇಶ್, ಶುಕ್ರವಾರವೂ ಅದಕ್ಕೆ ಪುಷ್ಟಿ ನೀಡುವ ಆಡಿಯೋ ಸಂಭಾಷಣೆ ಬಿಡುಗಡೆ ಮಾಡುವ ಮೂಲಕ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದರು.
Related Articles
Advertisement
ಈ ಬಗ್ಗೆ ಸರ್ಕಾರ ಪರಿ ಗಣಿಸದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಹೇಳಿದರು. ಭ್ರಷ್ಟಾಚಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಸಂಬಂಧಿ ಎಸ್.ಸಿ.ಅಶೋಕ್ ನೇರ ವಾಗಿ ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗೆ ಈ ಕುರಿತು ನಾನೇನೂ ಹೇಳುವುದಿಲ್ಲ. ಆಡಿಯೋ ಬಿಡುಗಡೆ ಮಾಡಿದ್ದೇನೆ. ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ. ಅಶ್ವಿನ್‌ಕುಮಾರ್, ಮೈಮುಲ್ ನಿರ್ದೇಶಕ ಸೋಮಶೇಖರ್ ಇದ್ದರು.
ಆಡಿಯೋ ಸಂಭಾಷಣೆಯಲ್ಲಿ ಇರೋದೇನು?: ಮಹಿಳೆ ಮತ್ತು ತುಮಕೂರು ಡೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ನಡುವಿನ ಸಂಭಾಷಣೆ ಆಡಿಯೋದಲಿದ್ದು, ವ್ಯಕ್ತಿಯು ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್ ಅವರಿಗೆ ಮಾರ್ಕೆಟಿಂಗ್ ಅಧಿಕಾರಿ ಹುದ್ದೆಗಾಗಿ 40 ಲಕ್ಷ ಹಣವನ್ನು ಮಂಗಳೂರು ಡೇರಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ನೀಡಿದ್ದಾರೆ ಎಂದು ತಿಳಿಸುತ್ತಾರೆ.
ಪದೇ ಪದೇ ದೂರವಾಣಿ ಸಂಭಾಷಣೆಯಲ್ಲಿ ತೊಡಗಿದ್ದ ವ್ಯಕ್ತಿಯು ಮಹಿಳೆಗೆ ರೆಕಾರ್ಡ್ ಮಾಡಿಕೊಳ್ಳಬೇಡ ಎಂದು ಮನವಿ ಮಾಡುತ್ತಾರೆ. ಈಗಾಗಲೇ ಸಾ.ರಾ.ಮಹೇಶ್‌ಗೆ ಮಾಜಿ ಸಚಿವ ಎಚ್. ವಿಶ್ವನಾಥ್ ಬೆಂಬಲ ನೀಡಿದ್ದಾರೆ ಎಂದೂ ವ್ಯಕ್ತಿ ಸಂಭಾಷಣೆ ವೇಳೆ ಹೇಳುತ್ತಾರೆ. ಮಹಿಳಾ ಅಭ್ಯರ್ಥಿಯೊಬ್ಬರು ಈಗಾಗಲೇ 18 ಲಕ್ಷ ಹಣ ನೀಡಿದ್ದು, ಇದಲ್ಲದೆ ಇನ್ನೂ 3ರಿಂದ 4 ಲಕ್ಷ ಹಣ ನೀಡುವ ಕುರಿತು ಮಾಡಿರುವ ಪ್ರಸ್ತಾಪ ಮತ್ತೂಂದು ಆಡಿಯೋದಲ್ಲಿದೆ.