ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಅಕ್ರಮವಾಗಿ ಮಲೇಷಿಯಾಗೆ 400 ಟನ್ ಗೂ ಅಧಿಕ ಪಡಿತರ ಅಕ್ಕಿಯನ್ನ ಅಕ್ರಮವಾಗಿ ರಪ್ತು ಮಾಡಲು ಸಿದ್ದವಾಗಿದ್ದವಾಗಿದ್ದ ರೈಸ್ ಮಿಲ್, ಗೋದಾಮು, ಲಾರಿ ಮೇಲೆ ಕೊಪ್ಪಳ ಡಿಸಿ, ಎಸ್ಪಿ ಹಾಗೂ ಎಸಿ ನೇತೃತ್ವದ ತಂಡ ದಾಳಿ ನಡೆಸಿ ಬೃಹತ್ ಜಾಲವನ್ನ ಬೇಧಿಸಿದೆ.
ಗಂಗಾವತಿಯಲ್ಲಿ ಪಡಿತರ ಅಕ್ರಮ ದಂಧೆ ಜೋರಾಗಿದ್ದು, ಬುಧವಾರ ತಡರಾತ್ರಿ ಸುಮಾರು ನಾಲ್ಕು ಲಾರಿಯಲ್ಲಿದ್ದ ಅಕ್ಕಿ, ಎರಡು ರೈಸ್ ಮಿಲ್, ಎರಡು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟು ವಿದೇಶಕ್ಕೆ ರಪ್ತು ಮಾಡಲು ಸಿದ್ದತೆ ನಡೆಸಿದ್ದ ಜಾಲದ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದಿದೆ.
ರಾಜ್ಯದಲ್ಲಿಯೇ ಇದು ಅತಿ ದೊಡ್ಡ ಪ್ರಮಾಣದ ಪಡಿತರ ಅಕ್ಕಿ ಅಕ್ರಮ ಎಂದೆನ್ನಲಾಗುತ್ತಿದೆ. ಜಿಲ್ಲಾಡಳಿತ, ಪೊಲೀಸ್, ಆಹಾರ ಇಲಾಖೆ, ಕಂದಾಯ ಇಲಾಖೆ ಮಾಹಿತಿ ಮೇರೆಗೆ ಜಂಟಿಯಾಗಿ ದಾಳಿ ನಡೆಸಿದ್ದ ವೇಳೆ ಅಕ್ರಮ ಪಡಿತರ ಅಕ್ಕಿ ಮಾರಾಟದ ಜಾಲ ಪತ್ತೆಯಾಗಿದೆ.
ಇದನ್ನೂ ಓದಿ;ಪಿಯು ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲು ಚಿಂತನೆ : ಶಿಕ್ಷಣ ಸಚಿವ ಸುರೇಶ್ ಕುಮಾರ್
ಇನ್ನೂ ಪಡಿತರ ಅಕ್ಕಿಯ ನಿಖರತೆ ಪರಿಶೀಲನೆ ನಡೆದಿದೆ ಎಂದು ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ.