ಮಂಡ್ಯ: ಮದ್ದೂರು ತಾಲೂಕಿನ ರಾಜೇಗೌಡನ ದೊಡ್ಡಿಯ ಮಲ್ಲಕಮ್ಮ ಬೆಟ್ಟದಲ್ಲಿ ಸ್ಫೋಟಕ ಬಳಸಿ ಅಕ್ರ ಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಕಲ್ಲು ಸಿಡಿಸಲು ಬಳಸುತ್ತಿರುವ ಸ್ಫೋಟಕಗಳಿಂದ ಮನೆಗಳು ಬಿರುಕು ಬಿಡುತ್ತಿದ್ದು, ಕೃಷಿ ಚಟುವಟಿಕೆ, ಸಾರ್ವಜನಿಕ ರಸ್ತೆಗೆ ಅಪಾಯ ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆ: ಗ್ರಾಮದ ರೈತರು ಕೃಷಿಯನ್ನೇ ನಂಬಿ ಜೀವನನಡೆಸುತ್ತಿದ್ದಾರೆ. ಕೃಷಿಯೇ ಇಲ್ಲಿನ ಜನರ ಪ್ರಮುಖ ಆದಾಯ ಮೂಲವಾಗಿದೆ. ಇಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿ ಕೃಷಿ ಚಟುವಟಿಕೆಗೆ ಮಾರಕವಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿಗೆ ದೂರು ನೀಡಿದ್ದಾರೆ.
ಕೃಷಿ ಜಮೀನಿಗೆ ಹೊಂದಿ ಕೊಂಡಂತಿರುವ ಮಲ್ಲಕಮ್ಮ ಬೆಟ್ಟದಲ್ಲಿ ಇಲ್ಲಿ ಗ್ರಾಮದ ಪದ್ಮಮ್ಮ ಕೋಂರಾಮ ಲಿಂಗಯ್ಯ ಗಣಿಗಾರಿಕೆ ನಡೆಸುತ್ತಿ ದ್ದರೆ. ಈ ಗಣಿ ಪ್ರದೇಶ ಕೃಷಿ ಜಮೀ ನಿ ನಿಂದ 30 ಮೀಟರ್ ಹಾಗೂ ಸಾರ್ವಜನಿಕ ರಸ್ತೆ ಯಿಂದ 50 ಮೀಟರ್ ಅಂತರದಲ್ಲಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ರಸ್ತೆಗೂ ಹಾನಿ: ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ಅಪಾಯಕಾರಿ ಸ್ಫೋಟಕ ಸಿಡಿಮದ್ದು ಬಳಸಿ ಬಂಡೆ ಗಳನ್ನು ಸಿಡಿಸ ಲಾಗುತ್ತಿದ್ದು, ಕಲ್ಲು ಮತ್ತು ದೂಳಿನ ಕಣ ಗಳು ಕೃಷಿ ಜಮೀನಿಗೆ ಬಂದು ಬೀಳುತ್ತಿವೆ. ಇದ ರಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಯಾವುದೇ ಬೆಳೆ ಬೆಳೆಯುವುದಕ್ಕೂ ಸಾಧ್ಯ ವಾಗುತ್ತಿಲ್ಲ. ಕೃಷಿಯನ್ನೇ ನಂಬಿ ಬದುಕುತ್ತಿರುವವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸ್ಫೋಟಕ ಸಿಡಿಸುತ್ತಿರುವುದರಿಂದ ಸಾರ್ವಜನಿಕ ರಸ್ತೆಗೂ ಹಾನಿಯಾಗಿದ್ದು, ಸಂಚಾರಕ್ಕೆ ತೊಂದ ರೆ ಯಾ ಗಿದೆ ಎಂದು ಗ್ರಾಮ ಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕಾರಣದಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಸಾರ್ವಜನಿಕರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿ ಸುವಂತೆ ಗ್ರಾಮಸ್ಥರಾದ ಸುನಿಲ್, ನಿತೀನ್, ನಿಂಗೇಗೌಡ,ಪುಟ್ಟಲಿಂಗಯ್ಯ, ಲಿಂಗೇಗೌಡ, ಸೂರಿ, ಸುಧಾ ಸೇರಿದಂತೆ ಇತ ರರು ಒತ್ತಾಯಿಸಿದ್ದಾರೆ.