Advertisement
ಈ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಬೆಳಗ್ಗೆ ಪತ್ರಿಕಾಗೋಷ್ಠಿ ಕರೆದು ಆರೋಪಿಸಿದ ಬೆನ್ನಲ್ಲೇ, ಸರ್ಕಾರಿ ಇಲಾಖೆಯ ಹಣ ನಕಲಿ ಖಾತೆಗೆ ವರ್ಗಾವಣೆ ಆಗಿರುವುದನ್ನು ಗ್ರಾಮೀಣಾಭಿವೃದಿಟಛಿ ಸಚಿವ ಎಚ್.ಕೆ.ಪಾಟೀಲ್ ಒಪ್ಪಿಕೊಂಡಿದ್ದಾರೆ. “”ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ತನಿಖಾ ವರದಿಯನ್ನು ಸೋಮವಾರ ಸಂಜೆ ಸಲ್ಲಿಸಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಖಾತೆ ಸೃಷ್ಟಿ ಮಾಡಲಾಗಿದ್ದು, ಈ ಖಾತೆ ಮೂಲಕ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಈ ಪೈಕಿ ಬೆಂಗಳೂರಿನ ವಿಜಯಾ ಬ್ಯಾಂಕಿನ ಕೋರ ಮಂಗಲ ಶಾಖೆಯ ಷಾ ಎಕ್ಸ್‌ಪೋರ್ಟ್ ಎಂಬ ಖಾತೆಗೆ 50 ಲಕ್ಷ ರೂ ವರ್ಗಾವಣೆ ಮಾಡಲಾಗಿದೆ. ಈ ಮಧ್ಯೆ ಈ ಖಾತೆಯು 2 ವರ್ಷಗಳಿಂದ ಶೂನ್ಯ ವ್ಯವಹಾರದ ಖಾತೆಯಾಗಿದ್ದು, ಇದರಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಹೇಗೆ ಬರಲು ಸಾಧ್ಯ ಎಂದು ವಿಜಯಾ ಬ್ಯಾಂಕಿನಿಂದ ಮಾಹಿತಿ ಬಂದ ಹಿನ್ನೆಲೆ ಯಲ್ಲಿ ಈ ಸಂಬಂಧ ತನಿಖೆ ನಡೆಸಿ ಅ.28ರೊಳಗೆ ವರದಿ ನೀಡುವಂತೆ ಪ್ರಧಾನ ಕಾರ್ಯದರ್ಶಿಗೆ
ಸೂಚಿಸಲಾಗಿತ್ತು. ಅದರಂತೆ ವರದಿ ಬಂದಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದಿಟಛಿ ನಿಯಮಿತ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಹಾಗೂ ಉಪ ಹಣಕಾಸು ಅಧಿಕಾರಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ನಡುವೆ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಶಾಖಾ ವ್ಯವಸ್ಥಾಪಕರ ವಿರುದಟಛಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Related Articles
ವರ್ಗಾವಣೆ ಮಾಡಲಾಗುತ್ತಿದ್ದು, ಚುನಾವಣೆಗಾಗಿ “ವೈಟ್ ಮನಿ’ಯನ್ನೇ ಬಳಕೆ ಮಾಡಲಾಗುತ್ತಿದೆ. ಇದು ಸಿದ್ದರಾಮಯ್ಯ ಸರ್ಕಾರದ ಪಾರದರ್ಶಕ ಆಡಳಿತಕ್ಕೆ ಸಾಕ್ಷಿ ಎಂದು ಈ ಅವ್ಯವಹಾರದ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಲೇವಡಿ ಮಾಡಿದರು.
Advertisement
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಇದೇ ಇಲಾಖೆ ುಲ್ಲಿ ಸಾವಿರಾರು ಕೋಟಿ ರೂ. ಅಕ್ರಮವಾಗಿ ಬೇರೆ ಬೇರೆ ಕಡೆ ಠೇವಣಿ ಇಡಲಾಗಿತ್ತು. ಈ ಬಗ್ಗೆ ಪ್ರಸ್ತಾಪಿಸಿದಾಗ ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆ ನಂತರ ಎಚ್.ಕೆ.ಪಾಟೀಲರೇ ಅಕ್ರಮ ಒಪ್ಪಿಕೊಂಡಿದ್ದರು. ಆದರೆ, ಅಕ್ರಮದಲ್ಲಿ ಭಾಗಿಯಾದವರ ವಿರುದಟಛಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಎಚ್.ಕೆ.ಪಾಟೀಲರ ಬಗ್ಗೆ ನಮಗೆಗೌರವವಿದೆ. ಆದರೆ, ಈ ರೀತಿ ಸರ್ಕಾರದ ಹಣ ಬೇರೆ ಬೇರೆ ಕಡೆ ಠೇವಣಿ ಇಟ್ಟು ಅಕ್ರಮವಾಗಿ ವರ್ಗ
ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು. ಹಿಂದೆ ರಾಮನಗರ-ಚನ್ನಪಟ್ಟಣ ಅಭಿವೃದಿಟಛಿ ಪ್ರಾಧಿಕಾರ ಅವ್ಯವಹಾರ, ಮಂಡ್ಯ ಅಭಿವೃದಿಟಛಿ ಪ್ರಾಧಿಕಾರದಲ್ಲಿ ನಡೆದ ಅವ್ಯವಹಾರದಲ್ಲೂ ನಾಲ್ಕು ವರ್ಷ ಕಳೆದರೂ ಒಬ್ಬರ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಲು ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಬೇರೆ ಬೇರೆ ಇಲಾಖೆಗಳ ಹಣ ಈ ರೀತಿ ಅಕ್ರಮವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಹಗರಣದ ಬಗ್ಗೆ ಸಿಎಂ ಸಿದ್ದರಾಮಯ್ಯ, ಸಚಿವ ಎಚ್.ಕೆ.ಪಾಟೀಲ್ ರಾಜ್ಯದ ಜನತೆಗೆ ಉತ್ತರಿಸಬೇಕು. ಹಿಂದೆ ಆಗಿದ್ದ ಹಗರಣದ ತಪ್ಪಿತಸ್ಥರ ವಿರುದಟಛಿ ಕೈಗೊಂಡ ಕ್ರಮದ ಬಗ್ಗೆಯೂ ತಿಳಿಸಬೇಕು ಎಂದು ಆಗ್ರಹಿಸಿದರು.