Advertisement
ಅವರು ರವಿವಾರ ಕಾರಿಂಜ ಕ್ಷೇತ್ರದ ರಥಬೀದಿಯಲ್ಲಿ ಕಾರಿಂಜ ಕ್ಷೇತ್ರದ ರಕ್ಷಣೆಗಾಗಿ, ಅಕ್ರಮ ಗಣಿಗಾರಿಕೆ, ಗೋಮಾಳ ಭೂಮಿಯ ಅತಿಕ್ರಮಣ ಹಾಗೂ ಅಪವಿತ್ರತೆಯ ವಿರುದ್ಧ ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ನಡೆದ ರುದ್ರಗಿರಿಯ ರಣಕಹಳೆ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ನಿಮ್ಮ ಪ್ರಾಮಾಣಿಕತೆ ಪರೀಕ್ಷೆ ಕಾರಿಂಜ ಬೆಟ್ಟವನ್ನು ಉಳಿಸುವ ಕಾರ್ಯದಿಂದಲೇ ನಡೆಯಲಿ. ಹಿಂದೆ ಸಚಿವರಾಗಿದ್ದ ವಿ.ಎಸ್. ಆಚಾರ್ಯರು ಕ್ಷೇತ್ರದ ಗಣಿಗಾರಿಕೆಯನ್ನು ನಿಲ್ಲಿಸಿದ್ದು, ಈಗ ಮತ್ತೊಬ್ಬ ಆಚಾರ್ಯರು ಹುಟ್ಟಿಬರಬೇಕಿದೆ. ಜಿಲ್ಲಾಧಿಕಾರಿಗಳು, ಸಚಿವರು, ಶಾಸಕರಿಗೆ 30 ದಿನಗಳ ಕಾಲಾವಾಕಾಶ ನೀಡುತ್ತೇವೆ. ನಿಮಗೆ ಸಾಧ್ಯವಾಗದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಕಾರಂತ ಆಗ್ರಹಿಸಿದರು.
Related Articles
Advertisement
ಇದನ್ನೂ ಓದಿ:ಪಟಿಯಾಲಾದಿಂದ ನನ್ನ ಸ್ಪರ್ಧೆ: ಅಮರಿಂದರ್
ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಪ್ರಸ್ತಾವನೆಗೈದರು. ಸಂಘಟನೆಯ ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ಮಂಗಳೂರು ವಿಭಾಗ ಕಾರ್ಯದರ್ಶಿ ಚಿನ್ಮಯಿ ಈಶ್ವರಮಂಗಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ ಉಪಸ್ಥಿತರಿದ್ದರು.
ಬೃಹತ್ ಪಾದಯಾತ್ರೆಸಮಾವೇಶಕ್ಕೆ ಮೊದಲು ವಗ್ಗದಿಂದ ನಡೆದ ಸಾವಿರಾರು ಸಂಖ್ಯೆಯ ಕಾರ್ಯಕರ್ತರ ಪಾದಯಾತ್ರೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಸೇರಿದಂತೆ ಗಣ್ಯರು ಉದ್ಘಾಟಿಸಿದರು. ಹಿಂಜಾವೇ ಬಂಟ್ವಾಳ ತಾಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೂರು ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ನಿರ್ವಹಿಸಿದರು. ಸರಕಾರಕ್ಕೆ ಆಗ್ರಹ
– ಕಾರಿಂಜ ಕ್ಷೇತ್ರದ 10 ಕಿ.ಮೀ. ವ್ಯಾಪ್ತಿಯನ್ನು ಧಾರ್ಮಿಕ ಸೂಕ್ಷ್ಮವಲಯ ಎಂದು ಘೋಷಿಸಿ
– ಕ್ಷೇತ್ರಕ್ಕೆ ಹಿಂದೂ ಧರ್ಮದವರಿಗೆ ಮಾತ್ರ ಪ್ರವೇಶ ನೀಡಿ
– ಶಿವಮಾಲಾಧಾರಣೆ ಎಂಬ ಹೆಸರಿನಲ್ಲಿ ಕ್ಷೇತ್ರಕ್ಕೆ ಯಾತ್ರೆ ಬರುವಂತೆ ಹೊಸ ಸಂಪ್ರದಾಯ ಆರಂಭಿಸಿ
– ಪ್ರವಾಸೋದ್ಯಮದ ಹೆಸರಿನಲ್ಲಿ ದೇವಸ್ಥಾನದ ಪಾವಿತ್ರ್ಯವನ್ನು ಹಾಳುಗೆಡವದಂತೆ ಕ್ರಮ ಕೈಗೊಳ್ಳಿ