Advertisement
ಕಳೆದ 15ದಿನದಲ್ಲಿ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಪ್ರಕರಣಗಳು ನಡೆದಿದ್ದು, 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಜತೆಗೆ ಇನ್ನೂ ಹಲವಾರು ಕಡೆಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದ್ದು ಸಾಲು-ಸಾಲು ಪ್ರಕರಣಗಳು ಮಾ. 20ರಂದು ಬೆಳಗಿನ ಜಾವ ಬಾಳುRದ್ರು ಗ್ರಾಮದ ಹಂಗಾರಕಟ್ಟೆ ಸೀತಾನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ದಕ್ಕೆಗೆ ಕೋಟ ಪೊಲೀಸರು ಕಂದಾಯ ಇಲಾಖೆಯ ಅಧಿಕಾರಿಗಳ ಜತೆಗೆ ದಾಳಿ ನಡೆಸಿ ಟೆಂಪೋ ಹಾಗೂ ಮರಳು, ಓರ್ವ ಆರೋಪಿಯನ್ನು ವಶಪಡಿಸಿಕೊಂಡಿದ್ದರು.ಆದರೆ ಆರೋಪಿ ಮಂಜು ಠಾಣೆಯಲ್ಲೇ ಪೊಲೀಸರ ಕೈತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
Related Articles
Advertisement
ಮರುಕಳಿಸುತ್ತಿರುವ ಪ್ರಕರಣಗಳುಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಭಾಗದಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ 2017ರಿಂದ ಇಲ್ಲಿಯ ತನಕ ಸುಮಾರು 10ಕ್ಕೂ ಹೆಚ್ಚು ಬಾರಿ ದಾಳಿ ನಡೆದಿದೆ ಹಾಗೂ 23ಕ್ಕೂ ಹೆಚ್ಚು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ್ದು,
ಇದೀಗ ಕೋಟ ಠಾಣೆಯ ಆವರಣದಲ್ಲಿ ದೋಣಿಗಳ ರಾಶಿ ಕಾಣಸಿಗುತ್ತದೆ. ಜತೆಗೆ ಇನ್ನೂ ಹಲವು ಕಡೆಗಳಲ್ಲಿ ಅಕ್ರಮ ಗಣಿಗಾರಿಕೆಯ ಮೇಲೆ ದಾಳಿ ನಡೆದಿದೆ. ಆದರೆ ಅಕ್ರಮ ಚಟುವಟಿಕೆಗಳು ಮಾತ್ರ ನಿಂತಿಲ್ಲ. ಗ್ರಾಮಾಂತರ ಭಾಗದಲ್ಲಿ ಇಂತಹ ಚಟುವಟಿಕೆಗಳು ಹೆಚ್ಚು-ಹೆಚ್ಚು ನಡೆಯುತ್ತಿದ್ದು, ಕೆಲವೊಂದು ಗ್ರಾಮಗಳು ಠಾಣೆಯಿಂದ ಸಾಕಷ್ಟು ದೂರದಲ್ಲಿದರಿಂದ ಇಂತಹ ಚಟುವಟಿಕೆಗಳನ್ನು ಮಟ್ಟಹಾಕಲು ಕಷ್ಟ ಸಾಧ್ಯವಾಗುತ್ತಿದೆ ಎನ್ನಲಾಗಿದೆ. ದೂರು ನೀಡಿ; ಕ್ರಮಕೈಗೊಳ್ಳುತ್ತೇವೆ
ಅಕ್ರಮ ಚಟುವಟಿಕೆಗಳನ್ನು ತಡೆಯಲು ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸ್ಥಳೀಯರು ತಮ್ಮ ಪರಿಸರದಲ್ಲಿ ನಡೆಯುವ ಅಕ್ರಮದ ಕುರಿತು ಗಣಿಅಧಿಕಾರಿಗಳು ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ಸ್ಥಳೀಯ ಮಟ್ಟದ ಅಧಿಕಾರಿಗಳು ಅಕ್ರಮ ತಡೆಗಟ್ಟುವಲ್ಲಿ ವಿಫಲರಾದರೆ ಜಿಲ್ಲಾ ಮಟ್ಟದಿಂದ ಸೂಕ್ತ ತಂಡವನ್ನು ನಿಯೋಜಿಸಿ ಕ್ರಮಕೈಗೊಳ್ಳುತ್ತೇವೆ ಎನ್ನುವುದು ಪೊಲೀಸ್ ಹಾಗೂ ಗಣಿ ಇಲಾಖೆಯ ಉನ್ನತ ಅಧಿಕಾರಿಗಳ ಭರವಸೆಯ ಮಾತುಗಳಾಗಿದೆ.