Advertisement
ಮಾಜಿ ಸಚಿವ ಜನಾರ್ದನರೆಡ್ಡಿ ಸಹಭಾಗಿತ್ವದ ಓಎಂಸಿ ಗಣಿ ಕಂಪನಿಯಲ್ಲಿ ಅಕ್ರಮ ಮತ್ತು ಅವೈಜ್ಞಾನಿಕವಾಗಿ ಗಣಿಗಾರಿಕೆ ಮತ್ತು ಅದಿರು ಸಾಗಣೆ ಮಾಡಲಾಗಿದೆ ಎಂಬ ದೂರಿನನ್ವಯ 2011, ಸೆ.5ರಂದು ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಅ ಧಿಕಾರಿಗಳು ಬಂಧಿಸಿದ್ದರು. 5 ವರ್ಷಗಳ ಕಾಲ ಹೈದ್ರಾಬಾದ್ ಮತ್ತು ಬೆಂಗಳೂರು ಜೈಲಿನಲ್ಲಿರಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತಾದರೂ ಬಳ್ಳಾರಿ, ಅನಂತಪುರಂ, ಕರ್ನೂಲ್ ಜಿಲ್ಲೆಗಳಿಗೆ ಹೋಗದಂತೆ ಷರತ್ತು ವಿಧಿಸಿತ್ತು. ಆ ಷರತ್ತನ್ನು ಸಹ ಕಳೆದ ಒಂದು ವರ್ಷದಿಂದ ಸಡಿಲಿಸಲಾಗಿತ್ತಾದರೂ ಸುಪ್ರೀಂಕೋರ್ಟ್ ನ.6ರವರೆಗೆ ಮಾತ್ರ ಬಳ್ಳಾರಿಯಲ್ಲಿ ಇರಲು ಅವಕಾಶ ನೀಡಿ ಇದೀಗ ಈ ಹಿಂದಿನಂತೆ ಷರತ್ತು ಮುಂದುವರಿಸಿದೆ.
Advertisement
ಇಂದು ಅಕ್ರಮ ಗಣಿ ಪ್ರಕರಣ ವಿಚಾರಣೆ; ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಜರ್
09:01 PM Nov 08, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.