Advertisement
ಗಣಿ ಅಧಿಕಾರಿಗಳ ಭೇಟಿ: ತೈಲಗೆರೆ ಗ್ರಾಮದ ಸರ್ವೇ ನಂ.110ರಲ್ಲಿ ನಡೆಯುತ್ತಿದ್ದ ಗಣಿ ಗಾರಿಕೆ ಖಂಡಿಸಿ ರೈತರು ಪ್ರತಿಭಟನೆ ತೀವ್ರ ಗೊಳಿಸುತ್ತಿದ್ದಂತೆ ಸ್ಥಳಕ್ಕೆ ತಾಲೂಕಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆಡಳಿತ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಭೇಟಿ ನೀಡಿ ಗಣಿಗಾರಿಕೆ ಪ್ರದೇಶದ ಸ್ಥಳ ಪರಿಶೀಲಿಸಿದರು.
Related Articles
Advertisement
ದೂರುಗಳ ಸರಮಾಲೆ: ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡದ ಬಳಿ ಸ್ಥಳೀಯರು ಸಮಸ್ಯೆ ಹೇಳಿಕೊಂಡರು. ಇತ್ತೀಚೆಗೆ ನಂದಿಬೆಟ್ಟದಲ್ಲಿ ಭೂ ಕುಸಿತವಾಗಿದೆ. ತೈಲಗೆರೆ ಮೇಲೆ ಗಣಿಗಾರಿಕೆ ದುಷ್ಪರಿಣಾಮ ಬೀರಿದೆ. ಕಲ್ಲು ಗಣಿಗಾರಿಕೆಯಿಂದ ನಮ್ಮ ಬೆಳೆಗಳು ಹಾನಿಗೀಡಾಗಿದೆ. ಬಂಡೆ ಸಿಡಿಸಲು ಸಿಡಿಮದ್ದು, ಗ್ರಾನೆಡ್ ಕಡ್ಡಿಯಂತಹ ಸ್ಫೋಟಕ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮನೆಗಳು ಬಿರುಕು ಬಿಟ್ಟಿವೆ.ಕಲ್ಲುಗಣಿಗಾರಿಕೆಗೆಅನುಮತಿ ಕೊಡಬಾರದು. ಕಲ್ಲು ಸಾಗಾಣಿಕೆ ಮಾಡುತ್ತಿರುವ ವಾಹನಗಳ ಸಂಚಾರದಿಂದಾಗಿ ಇಲ್ಲಿನ ರಸ್ತೆಗಳು ಹದಗೆಟ್ಟಿವೆ ಎಂದು ಅಧಿಕಾರಿಗಳಿಗೆ ದೂರು ನೀಡಿದರು.
ಈ ವೇಳೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ರೇಣುಕಾ, ಭೂ ವಿಜ್ಞಾನಿಗಳಾದ ವಿಕ್ರಮ್, ಮೂರ್ತಿ, ಎಇಇ ರಾಜಶೇಖರ್, ತಾಲೂಕು ಸಹಾಯಕಿ ಸವಿತಾ, ವಿಶ್ವನಾಥಪುರ ಠಾಣೆಯ ಪಿಎಸ್‌ಐ ವೆಂಕಟೇಶ್, ಚನ್ನರಾಯಪಟ್ಟಣ ಠಾಣೆಯ ಪಿಎಸ್‌ಐ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿ, ಆರ್‌ಐ ಚಿದಾನಂದ್, ಕ್ರಷರ್ ಮಾಲಿಕರು,ಸಿಬ್ಬಂದಿ, ರೈತ ಮುಖಂಡರು, ಸ್ಥಳೀಯರು ಇದ್ದರು.
ಅಕ್ರಮ ನಡೆದಿದ್ದರೇ ಕ್ರಮ ಜರುಗಿಸುವೆತೈಲಗೆರೆ ಸರ್ವೆ ನಂಬರ್ 110ರಲ್ಲಿ 55 ಎಕರೆ ಪ್ರದೇಶದಲ್ಲಿ 14 ಮಂದಿ ಗಣಿಗಾರಿಕೆ ಗುತ್ತಿಗೆ ಪಡೆದಿದ್ದುಕಾನೂನು ಬದ್ಧವಾಗಿ ಗಣಿಗಾರಿಕೆ ಮಾಡ್ತಿದ್ದಾರೆ. ಗಣಿಗಾರಿಕೆ ಪ್ರದೇಶದ ಸುತ್ತಲು ಫೆನ್ಸಿಂಗ್‌ಅಳವಡಿಸಿ,ನಾಮಫಲಕಹಾಕಲಾಗಿದೆ.ಗಣಿಗಾರಿಕೆಯಿಂದತೊಂದರೆಯಾಗಿದ್ದರೇ ತಾಂತ್ರಿಕ ವರದಿ ಪಡೆದು ಪರಿಶೀಲಿಸಲಾಗುತ್ತದೆ. ಲೀಸ್‌ನಿಂದ ರಾಜಧನ ಕಳೆದ ವರ್ಷ 11ಕೋಟಿ 50ಲಕ್ಷ , ಈ ವರ್ಷ 2ಕೋಟಿ 70ಲಕ್ಷ ರೂ. ರಾಜಧನ ಹರಿದು ಬಂದಿದೆ. ಡಿಸ್ಟ್ರಿಕ್ಟ್ ಮಿನರಲ್ ಫೌಂಡೇಷನ್ ಟ್ರಸ್ಟ್ ಮೂಲಕ ಪ್ರತಿ ಟನ್‌ಗೆ ಇಂತಿಷ್ಟು ಹಣ ನಿಗದಿ ಮಾಡಲಾಗಿದೆ. ಕಳೆದ ವರ್ಷ 16ಲಕ್ಷ ಈ ವರ್ಷ 5ಲಕ್ಷ ರೂ.ಬಂದಿರುತ್ತದೆ. ಅಕ್ರಮ ಗಣಿಗಾರಿಕೆ ನಡೆಸಿದ್ದರೇ ಕ್ರಮ ಜರುಗಿಸುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ
ಇಲಾಖೆಯ ಆಡಳಿತ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಹೇಳಿದರು ಅಕ್ರಮ ಗಣಿಗಾರಿಕೆ ಮಾಡಿಲ್ಲ
ಗಣಿಗಾರಿಕೆಯಲ್ಲಿ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಸ್ಫೋಟಕ ಬಳಸಲಾಗುತ್ತಿದೆ. ಇದಕ್ಕೆ ತಾಂತ್ರಿಕ ತಜ್ಞರನ್ನು ನೇಮಿಸಲಾಗಿದೆ. ಸ್ಫೋಟಿಸುವ ಮುನ್ನಾ ಎಲ್ಲ ರೀತಿಯ ಸುರಕ್ಷಾಕ್ರಮ ಅನುಸರಿಸಲಾಗುತ್ತಿದೆ. ಸರ್ಕಾರದಿಂದ ಅಧಿಕೃತವಾಗಿ ಅನುಮತಿ ಪಡೆದುಕೊಂಡು ಮಾಡಲಾಗುತ್ತಿದೆ. ಸ್ಫೋಟಕ ಬಳಕೆಗೆ 4 ವರ್ಷದ ಹಿಂದೆ ಕೇಂದ್ರ ಅನುಮತಿ ನೀಡಿದೆ. ಅಕ್ರಮ ಗಣಿಗಾರಿಕೆ ಮಾಡಿಲ್ಲ. ಎಲ್ಲಾ ದಾಖಲೆ ಇಟ್ಟು ಕೊಂಡೇ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಕಲ್ಲುಗಣಿಗಾರಿಕೆ ಮತ್ತು ಕ್ರಷರ್ ಮಾಲಿಕರ ರಾಜ್ಯ ಘಟಕದ ಕಾರ್ಯದರ್ಶಿ ಕಿರಣ್ ಜೈನ್ ಸ್ಪಷ್ಟನೆ ನೀಡಿದರು.