Advertisement

ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳೇ ಕಾರಣ

08:47 PM Jul 10, 2021 | Team Udayavani |

ಮಂಡ್ಯ: ಗಣಿಗಾರಿಕೆಗಳು ಕಾನೂನು ಬದ್ಧವಾಗಿನಡೆದರೆ ನೂರಾರು ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಬರಲಿದೆ. ಅಕ್ರಮ ಗಣಿಗಾರಿಕೆ ನಡೆಯಲು ಅಧಿಕಾರಿಗಳೇ ಕಾರಣರಾಗಿದ್ದಾರೆ,

Advertisement

ಶಾಮೀ ಲಾಗಿದ್ದಾರೆ.ಮಾಧ್ಯಮಗಳಲ್ಲಿ ಪ್ರತಿನಿತ್ಯ ಸುದ್ದಿ ಬರುತ್ತಿದೆ. ಆದರೆಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಿಲ್ಲ ಎಂದುಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವಕೆ.ಸಿ.ನಾರಾಯಣ ಗೌಡ ಕಿಡಿಕಾರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಕಲ್ಲು, ಜಲ್ಲಿ ಎಲ್ಲವೂ ಬೇಕು. ಆದರೆಕಾನೂನುಬದ್ಧವಾಗಿರಬೇಕು. ಅಕ್ರಮ ಗಣಿಗಾರಿಕೆ ವಿರುದ್ಧಕ್ರಮಕೈಗೊಳ್ಳದಿದ್ದರೆ, ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆನಾನೂ ಭೇಟಿ ನೀಡುವೆ. ಸುಮಲತಾ ಅವರುಮಾಡುತ್ತಿರುವ ಕೆಲಸವನ್ನು ಮುಂದು ವರೆಸುವೆಎಂದು ಸುಮಲತಾ ಅವರಿಗೆ ಬೆಂಬಲವ್ಯಕ್ತಪಡಿಸಿದರು.

ವರದಿ ನೀಡಿಲ್ಲ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಸಂಪೂರ್ಣವಾಗಿ ನಿಲ್ಲ ಬೇಕು. ಇದರಲ್ಲಿ ಅಧಿಕಾರಿಗಳತಪ್ಪು ಇದೆ. ಅಕ್ರಮ ಗಣಿಗಾರಿಕೆ ಎಷ್ಟು ನಡೆ ಯುತ್ತಿವೆಎಂಬುದರ ಪಟ್ಟಿ ಕೇಳಿದ್ದೆ. ಆದರೆ ಇನ್ನೂ ನೀಡಿಲ್ಲ. 15ದಿನಗಳೊ ಳಗೆ ನೀಡದಿದ್ದರೆ ನೋಟಿಸ್‌ ನೀಡಿ ಕ್ರಮಕೈಗೊಳ್ಳಲಾಗುವುದು. ಹಿಂದಿನ ಹಾಗೂ ಇಂದಿನ ಗಣಿ ಅಧಿಕಾರಿಗಳು ಹಾಳು ಮಾಡುತ್ತಿದ್ದಾರೆ. ಇದರ ಬಗ್ಗೆಗಣಿ ಸಚಿವರಿಗೂ ಮನವಿ ಮಾಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next