ವಿಜಯಪುರ: ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಕೊಲ್ಹಾರ ಪಟ್ಟಣದಲ್ಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊಲ್ಹಾರದ ಹರಿಣ ಶಿಕಾರಿ ಕಾಲೋನಿ ನಿವಾಸಿ ಬ್ಯಾಕೋಡ ಗ್ರಾಮದ ಸೋಮನಾಥ ಸಾಬಪ್ಪ ಮಾದರ ಹಾಗೂ ಆಲಮಟ್ಟಿಯ ಹಣಮಂತ ಸಂಕಪ್ಪ ಲಮಾಣಿ ಎಂದು ಗುರುತಿಸಲಾಗಿದೆ.
ಕೊಲ್ಹಾರ ಪಟ್ಟಣದ ಹರಿಣ ಶಿಕಾರಿ ಕಾಲೋನಿಯಲ್ಲಿ ಬಂಧಿತರು ಗಾಂಜಾ ಮಾರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಆರೋಪಿಗಳಿಂದ 20 ಸಾವಿರ ರೂ. ಮೌಲ್ಯದ 500 ಗ್ರಾಂ ಗಾಂಜಾ ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.
ಅಪರಾಧ ವಿಭಾಗದ ಸಿಪಿಐ ಸುರೇಶ ಬೆಂಡೆಗುಂಬಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇದನ್ನೂ ಓದಿ : ಉಪಚುನಾವಣೆಯ ಬಗ್ಗೆ ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳುತ್ತೇನೆ : ತಿರಥ್ ಸಿಂಗ್ ರಾವತ್