Advertisement

Goa Karnataka Border: ಅಕ್ರಮ ಮದ್ಯ ಸಾಗಣೆ… ಗೋವಾ ಕರ್ನಾಟಕ ಗಡಿಯಲ್ಲಿ ಬಿಗಿ ತಪಾಸಣೆ

01:45 PM Sep 21, 2023 | Team Udayavani |

ಪಣಜಿ: ಅಬಕಾರಿ ಇಲಾಖೆಯ ತೆರಿಗೆ ವ್ಯತ್ಯಾಸದಿಂದಾಗಿ ಕರ್ನಾಟಕಕ್ಕಿಂತ ಗೋವಾದಲ್ಲಿ ಮದ್ಯವು ಅಗ್ಗವಾಗಿದೆ. ಹಾಗಾಗಿ ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ನಡೆಯುತ್ತಿರುವುದು ಕರ್ನಾಟಕದ ಅಬಕಾರಿ ಇಲಾಖೆಯ ತೆರಿಗೆ ಮೇಲೆ ಪರಿಣಾಮ ಬೀರುತ್ತಿರುವುದನ್ನು ಮನಗಂಡ ಕರ್ನಾಟಕ ಸರ್ಕಾರ ಹೆಚ್ಚಿನ ತೆರಿಗೆಯನ್ನು ವಸೂಲಿ ಮಾಡುವಂತೆ ಅಬಕಾರಿ ಇಲಾಖೆಗೆ ಸೂಚಿಸಿದ್ದು, ಅಬಕಾರಿ ಇಲಾಖೆ ಗೋವಾ ರಾಜ್ಯದ ಗಡಿಗಳಲ್ಲಿ ಮದ್ಯ ಅಕ್ರಮ ತಡೆಗೆ ಭದ್ರತೆಯನ್ನು ಹೆಚ್ಚಿಸಿದೆ. ಗೋವಾದಿಂದ ಕರ್ನಾಟಕ್ಕೆ ತೆರಳುವ ಪ್ರಯಾಣಿಕರ  ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.

Advertisement

ಗೋವಾದಿಂದ ಕರ್ನಾಟಕಕ್ಕೆ ಒಂದು ಬಾಟಲಿ ಮದ್ಯ ಕೊಂಡೊಯ್ದರೂ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾರವಾರ ಅಬಕಾರಿ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ವಾರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾದಿಂದ ಅಕ್ರಮ ಮದ್ಯ ಸಾಗಣೆ ತಡೆಯಲು ಆದೇಶ ನೀಡಿದ್ದರು. ಈ ಆದೇಶವನ್ನು ಜಾರಿಗೊಳಿಸಲು ಇತ್ತೀಚೆಗೆ ಕಾರವಾರದಲ್ಲಿ ಅಬಕಾರಿ ಇಲಾಖೆಯ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಅಬಕಾರಿ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಗೋವಾ ಕರ್ನಾಟಕ ಗಡಿಯಲ್ಲಿ ಹೆಚ್ಚಿನ ತಪಾಸಣೆಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಗೋವಾದಿಂದ ಅಕ್ರಮ ಮದ್ಯ ಸಾಗಾಟ ತಡೆಯಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬಕಾರಿ ಇಲಾಖೆಗೆ ಸೂಚನೆ ನೀಡಿದ್ದರು. ಅದರಂತೆ ಶನಿವಾರ ಕಾರವಾರದಲ್ಲಿ ಅನ್ಮೋದ್, ಮಾಜಾಳಿ ಅಬಕಾರಿ ಅಧಿಕಾರಿಗಳು ಹಾಗೂ ಜಿಲ್ಲಾ ಅಬಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಗೋವಾ ಗಡಿಭಾಗದ ಅನ್ಮೋಡ್, ಮಾಜಾಳಿ ಮೂಲಕ ಮದ್ಯ ಸಾಗಾಣಿಕೆ ತಡೆಯುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಅದರಂತೆಯೇ ಗಡಿಯಲ್ಲಿ ಸದ್ಯ ಅಬಕಾರಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: Tragedy: ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಯುವಕನಿಗೆ ನೃತ್ಯ ಮಾಡುವಾಗಲೇ ಹೃದಯಾಘಾತ… ವಿಡಿಯೋ

Advertisement

Udayavani is now on Telegram. Click here to join our channel and stay updated with the latest news.

Next