Advertisement

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ

03:34 PM May 08, 2022 | Team Udayavani |

ಕುದೂರು: ತಾಲೂಕಿನಲ್ಲಿ ನಿರಂತರವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ, ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಎಲ್ಲೊ ಕೆಲವು ಕಡೆ ನಾಮ್‌ ಕೇ ವಾಸ್ತೆಗೆ ದಾಳಿ ಮಾಡಿದಂತೆ ಪ್ರಚಾರ ಗಿಟ್ಟಿಸಿಕೊಂಡು ಇತರರಿಗೆ ಎಚ್ಚರಿಕೆ ಕೊಡುವ, ಆ ಮೂಲಕ ವಸೂಲಿ ಬಾಜಿಯಲ್ಲಿ ನಿರಂತರವಾಗಿ ಬಗ್ಗೆ ವ್ಯಾಪಾಕ ದೂರುಗಳು ದಟ್ಟವಾಗಿವೆ.

Advertisement

ಹಳ್ಳಿಗಳಲ್ಲಿ ರಾಜಾರೊಷವಾಗಿ ಮದ್ಯ ಮಾರಾಟ ದಂಧೆ ಕಣ್ಣಿಗೆ ಕಾಣಿಸುತ್ತಿದ್ದರೂ, ತಮಗೆ ಏನೂ ಗೊತ್ತಿಲ್ಲದಂತೆ ಈ ಅಧಿಕಾರಿಗಳು ನಿದ್ರಗೆ ಜಾರಿದ್ದು, ಇವರ ನಿರ್ಲಕ್ಷ್ಯತನವೇ ಗ್ರಾಮೀಣ ಸಮುದಾಯದ ಕುಟುಂಬ ಬೀದಿಪಾಲು ಮಾಡುತ್ತಿದೆ.

ಕುಡಿತದ ಚಟಕ್ಕೆ ಬೀಳುತ್ತಿರುವ ಯುವ ಜನಾಂಗ ಹಾಗೂ ಕೂಲಿ ಕಾರ್ಮಿಕ ಕುಟುಂಬ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವ ದುರಂತ ಚಿತ್ರಣ ಕಂಡು ಬರುತ್ತಿವೆ. ಇಷ್ಟಾದರೂ ಅಧಿಕಾರಿಗಳು ಮಾಮೂಲಿ ವಸೂಲಿಯಲ್ಲಿಯೇ ನಿರಂತರವಾಗಿ ಹಳ್ಳಿಗಳ ನೆಮ್ಮದಿ ಹಾಳು ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗಳು ವ್ಯಾಪಾಕವಾಗಿ ಕೇಳಿಬರುತ್ತಿವೆ.

ಎಂತಹದೇ ಕಷ್ಟ ಬರಲಿ ಕೆಲವರಿಗೆ ಎಣ್ಣೆ ಇರಲೇಬೇಕು. ಒಂದು ಹೊತ್ತು ಊಟ ಬಿಟ್ಟರೂ ಪರವಾಗಿಲ್ಲ. ಮದ್ಯದ ನಶೆ ಏರಲೇಬೇಕು. ನಗರ ಪ್ರದೇಶದಲ್ಲಿ ಮನೆಯಿಂದ ಹೊರಗೆ ಬಾರ್‌ಗಳಿಗೆ ಹೋಗಿ ನಶೆ ತೀರಿಸಿಕೊಂಡು ಬರುತ್ತಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಯಾವುದೇ ಅಡೆ ತಡೆತಡೆಗಳಿಲ್ಲ. ಬಾಟಲ್‌ ಸಿಕ್ಕಿದರೆ ಸಾಕು ಎಲ್ಲಿ ಬೇಕಾದರೂ ಸ್ವಚ್ಚಂದವಾಗಿ ಮದ್ಯ ಸೇವನೆ ಮಾಡಬಹುದು. ಇದು ಅವರಿಗೆ ಹೇಳಿ ಮಾಡಿಸಿದಂತ ತಾಣಗಳಾಗುತ್ತಿವೆ. ಗ್ರಾಮಗಳು, ಆದರೆ ಹಿಂದಿಗಿಂತ ಮದ್ಯ, ಮಾರಾಟ ಮತ್ತು ದಂಧೆ ಈಗ ಹೆಚ್ಚಳ ವಾಗಿರುವುದು ಅಷ್ಟೇ ಸತ್ಯ.

ಮಹಿಳೆಯರ ಪ್ರತಿಭಟನೆ: ಗ್ರಾಮಾಂತರ ಪ್ರದೇಶ ಗಳಲ್ಲಿ ಹಲವು ರೀತಿಯ ಅಂಗಡಿಗಳು ತೆರೆಯಲ್ಪಟ್ಟಿವೆ. ಚಿಲ್ಲರೆ ಅಂಗಡಿಯಿಂದ ಹಿಡಿದು ಬೀಡಿ, ಬೆಂಕಿಪೊಟ್ಟಣ ಮಾರುವ ಶೆಡ್‌, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಯಥೇತ್ಛವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮದ ಮಹಿಳೆಯರು ಪ್ರತಿಭಟಿಸಿದರೂ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಸ್ಥಗಿತಗೊಂಡಿಲ್ಲ. ಅಧಿಕಾರಿಗಳು ವಿಫ‌ಲ: ಅಕ್ರಮ ಮದ್ಯ ಮಾರಾಟ ನಿಯಂತ್ರಿಸಬೇಕಾಗಿರುವುದು ಅಬಕಾರಿ ಇಲಾಖೆ ಅಧಿಕಾರಿಗಳ ಕರ್ತವ್ಯ. ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.

Advertisement

ರಾಜಾರೋಷವಾಗಿ ಮದ್ಯ ಮಾರಾಟ: ಸರ್ಕಾರದ ಪರವಾನಗಿ ಹೊಂದಿದ್ದರೆ ಮಾತ್ರ ಮದ್ಯ ಮಾರಾಟ ಮಾಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಬೀಡಿ ಅಂಗಡಿಗಳಲ್ಲಿ, ಪಟ್ಟಣದ ಹಲವು ಡಾಬಾಗಳಲ್ಲಿ ಪ್ರತಿನಿತ್ಯ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುವುದು ರಾಜಾ ರೋಷವಾಗಿ ನಡೆಯುತ್ತಿದೆ. ಆದರೂ, ಇವರಿಗೆ ಕಡಿವಾಣ ಹಾಕುವವರು ಯಾರೂ ಇಲ್ಲದಂತಾಗಿದೆ.

ಅಕ್ರಮ ಮದ್ಯದಿಂದ ಕುಟುಂಬ ಬೀದಿಪಾಲು: ಕೂಲಿ ಮಾಡಿ ಬದುಕು ಸಾಗಿಸುವ ಬಡವರು, ಕೃಷಿ ಕಾರ್ಮಿಕರು ಪ್ರತಿನಿತ್ಯ ತಾವು ದುಡಿದ ಕೂಲಿ ಹಣ ಮದ್ಯ ಕುಡಿದು ಹಾಳು ಮಾಡುತ್ತಿರುವುದರಿಂದ ಆ ಕುಟುಂಬಗಳು ಗೋಳು ಹೇಳ ತೀರದಾಗಿದೆ. ಹಲವು ಕುಟುಂಬಗಳು ಅಕ್ರಮ ಮದ್ಯದಿಂದ ಕುಟುಂಬ ಬೀದಿ ಪಾಲಾಗುವ ಸ್ಥಿತಿಗೆ ಬಂದು ನಿಂತಿವೆ. ಬಾರ್‌ ಮಾಲೀಕರ ಒತ್ತಡದಿಂದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವುದನ್ನು ಇಲಾಖೆ ಅಧಿಕಾರಿಗಳು ಕೈ ಬಿಟ್ಟಿದ್ದಾರೆ ಎಂಬುದು ಸಾರ್ವಜನಿಕರ ಆರೋಪ ವಾಗಿದೆ. ಈಗಲಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಮಹಿಳೆಯರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.

ಡಾಬಾಗಳಲ್ಲಿ ಮದ್ಯ ಮಾರಾಟ: ಅಕ್ರಮ ಮದ್ಯ ಮಾರಾಟದ ದಂಧೆ ಹಳ್ಳಿಗಳಲ್ಲಿ ಮಾತ್ರವಲ್ಲದೆ, ಪಟ್ಟಣದ ಪ್ರದೇಶದ ಪ್ರತಿ ಡಾಬಾಗಳಲ್ಲೂ ನಡೆಯುತ್ತಿದೆ. ಪ್ರತಿ ತಿಂಗಳು ಸ್ಪರ್ಧೆ ಎನ್ನುವಂತೆ ಹಲವು ಡಾಬಾಗಳು ಹುಟ್ಟಿ ಕೊಳ್ಳುತ್ತಲಿವೆ. ಕೆಲ ಡಾಬಗಳಲ್ಲಿ ಮದ್ಯ ಮಾರಾ ಟದ ಅನುಮತಿ ಇಲ್ಲವಾದರೂ, ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಪ್ರತಿದಿನ ಅಕ್ರಮ ಮದ್ಯ ಮಾರಟ ಮಾಡುವವರ ಮೇಲೆ ದಾಳಿ ಮಾಡುವ ಅಬಕಾರಿ ಇಲಾಖೆ ಅಧಿಕಾರಿಗಳು ಚುನಾವಣೆ ಮುಗಿದ ಮೇಲೆ ಒಂದು ಸ್ಥಳದಲ್ಲೂ ದಾಳಿ ಮಾಡಿದ ಉದಾಹರಣೆ ಸಿಗುವುದಿಲ್ಲ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.

ಕೆ.ಎಸ್‌.ಮಂಜುನಾಥ್‌ ಕುದೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next