Advertisement

ಅಕ್ರಮ-ಸಕ್ರಮ ಅರ್ಜಿ ಸಲ್ಲಿಕೆ ತಾಂತ್ರಿಕ ದೋಷ ತುರ್ತು ಕ್ರಮಕ್ಕೆ ಸೂಚನೆ

01:00 AM Mar 13, 2019 | Harsha Rao |

ಉಡುಪಿ: ಅಕ್ರಮ- ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸುವಾಗ ಉಂಟಾಗುತ್ತಿರುವ ಸರ್ವರ್‌ ಸಮಸ್ಯೆ ಮತ್ತು ತಾಂತ್ರಿಕ ದೋಷಗಳ ಕುರಿತು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿದರು.

Advertisement

ಸರ್ವರ್‌ ತೊಂದರೆಯಿಂದ ಅಟಲ್‌ಜೀ ಜನಸ್ನೇಹಿ ಕೇಂದ್ರ, ನಾಡ ಕಚೇರಿಗಳಲ್ಲಿ ಆನ್‌ಲೈನ್‌ಗಾಗಿ ನೂರಾರು ಮಂದಿ ಕಾಯುವ ಸ್ಥಿತಿ ಒದಗಿ ಬಂದಿದೆ. ಇದಕ್ಕೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಶ್ರೀನಿವಾಸ ಪೂಜಾರಿ ಸೂಚಿಸಿದರು. 

ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆಯ ಒತ್ತಡದಿಂದ ಸರ್ವರ್‌ ಓವರ್‌ ಲೋಡ್‌ ಆಗಿದೆ. ಸ್ಥಳೀಯವಾಗಿ ಇಂಟರ್‌ನೆಟ್‌ ಸಮಸ್ಯೆಯೂ ಇದೆ. ಸರ್ವೆ ನಂಬರ್‌ ಜೋಡಣೆ ಯಲ್ಲಿ ವಿಳಂಬವಾಗುತ್ತಿದ್ದು, ಇದರಿಂದಲೂ ಸಮಸ್ಯೆ ಉಂಟಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ಒಂದೆರಡು ದಿನದಲ್ಲಿ ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಹೆಚ್ಚುವರಿ ಕೌಂಟರ್‌, ಕಂಪ್ಯೂಟರ್‌ ಮತ್ತು 4 ಸಿಬಂದಿ ಅಗತ್ಯದ ಬಗ್ಗೆ ಶ್ರೀನಿವಾಸ ಪೂಜಾರಿ ಗಮನ ಸೆಳೆದಾಗ, ಅಟಲ್‌ಜೀ ಕೇಂದ್ರಗಳಿಗೆ ಕಂಪ್ಯೂಟರ್‌, ಸಿಬಂದಿ ಒದಗಿಸಲಾಗುವುದು. ಈ ಕುರಿತು ಡಿಸಿಗಳಿಂದ ವರದಿ ಪಡೆದು ಅಗತ್ಯ ಅನುಮತಿ ನೀಡಲಾಗುವುದು ಎಂದು ಅಧಿಕಾರಿ ಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next