Advertisement

Cow: ಅಕ್ರಮ ಗೋ ಸಾಗಾಟ: ನಾಲ್ವರ ಬಂಧನ

08:41 PM Aug 09, 2023 | Team Udayavani |

ಕಾರ್ಕಳ: ಅಕ್ರಮ ಗೋ-ಸಾಗಾಟ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ಧಾರೆ. ಬಂಟ್ವಾಳ ಫ‌ರಂಗಿಪೇಟೆ ನಿವಾಸಿಗಳಾದ ಜಬ್ಬರ್‌ (24), ಹೈದರಾಲಿ (26), ಕಾರ್ಕಳ ಶಿರ್ಲಾಲು ಗ್ರಾಮದ ಪ್ರಸಾದ್‌ ಪೂಜಾರಿ(23) ಮತ್ತು ಜಗನ್ನಾಥ ಶೆಟ್ಟಿ (58) ಬಂಧಿತರು.

Advertisement

ಆ. 7ರ ಮುಂಜಾನೆ ಕೆರ್ವಾಶೆಯಿಂದ ಸ್ಕಾರ್ಫಿಯೋ ವಾಹನದಲ್ಲಿ ಆರೋಪಿಗಳು ಗೋವುಗಳನ್ನು ಸಾಗಾಟ ನಡೆಸುತ್ತಿದ್ದರು. ಹಿಂದೂ ಸಂಘಟನೆಗಳ ಕಾರ್ಯಕರ್ತರು ನೀಡಿದ ಮಾಹಿತಿಯನ್ವಯ ಪೊಲೀಸರು ವಾಹನವನ್ನು ಬೆನ್ನಟ್ಟಿದ್ದು, ಬಜಗೋಳಿ ಬಳಿಯಲ್ಲಿ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ನಾಲ್ವರ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next