Advertisement

ಅಕ್ರಮ ಗ್ಯಾಸ್‌ ರಿಫಿಲ್ಲಿಂಗ್‌: ಸಿಲಿಂಡರ್‌ಗಳ ವಶ

01:12 PM Jan 18, 2022 | Team Udayavani |

ಚಿಕ್ಕಬಳ್ಳಾಪುರ: ಅನಧಿಕೃತವಾಗಿ ಗ್ಯಾಸ್‌ ರಿಫಿಲ್ಲಿಂಗ್‌ ಮಾಡಿ ಸರಬರಾಜು ಮತ್ತು ಮಾರಾಟ ಕೇಂದ್ರದಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ನಡೆಸಿಗೃಹ, ವಾಣಿಜ್ಯ ಬಳಕೆ ಸಿಲಿಂಡರ್‌ಗಳನ್ನು ವಶಕ್ಕೆಪಡೆದು. ಆರೋಪಿಯನ್ನು ಬಂಧಿಸಿ, ಕೋರ್ಟ್‌ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಘಟನೆತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Advertisement

ಆಹಾರ ಇಲಾಖೆ ಶಿರಸ್ತೇದಾರ್‌ ಬಿ.ಜಿ.ಗೌತಮ್‌ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ, ಓರ್ವನನ್ನು ವಶಕ್ಕೆ ಪಡೆದು, ಆತನ ಎರಡುವಾಹನಗಳಲ್ಲಿದ್ದ ಗೃಹ, ವಾಣಿಜ್ಯ ಬಳಕೆ ಸಿಲಿಂಡರ್‌ವಶಕ್ಕೆ ಪಡೆದಿದೆ. ಬಂಧಿತ ರೆಡ್ಡಿಗೊಲ್ಲವಾರಹಳ್ಳಿಯ ಜಿ.ಆರ್‌.ಸುನೀಲ್‌ ಕೋರ್ಟ್‌ ಜಾಮೀನಿನ ಮೇಲೆಬಿಡುಗಡೆ ಆಗಿದ್ದಾರೆ ಎಂದು ಪೆರೇಸಂದ್ರ ಪಿಎಸ್‌ಐ ಮಂಜುನಾಥ್‌ ತಿಳಿಸಿದ್ದಾರೆ.

ಏನಿದು ಪ್ರಕರಣ: ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಗ್ರಾಮದಲ್ಲಿ ಜಿ.ಆರ್‌.ಸುನೀಲ್‌ ಎಂಬಾತ ಅನಧಿಕೃತವಾಗಿ ಗ್ಯಾಸ್‌ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿರುವ ಕುರಿತು ಬಂದ ಖಚಿತಮಾಹಿತಿ ಮೇರೆಗೆ ದಿಢೀರ್‌ ದಾಳಿ ನಡೆಸಿ, 12 ಖಾಲಿವಾಣಿಜ್ಯ ಬಳಕೆ ಸಿಲಿಂಡರ್‌ ಅಲ್ಲದೆ, 6 ಗೃಹ ಬಳಕೆ ಖಾಲಿ ಸಿಲಿಂಡರ್‌, 64 ತುಂಬಿದ ವಾಣಿಜ್ಯ ಬಳಕೆ ಸಿಲಿಂಡರ್‌ ವಶಕ್ಕೆ ಪಡೆಯಲಾಗಿದೆ ಎಂದು ಆಹಾರ ಇಲಾ ಖೆಯ ಶಿರಸ್ತೇದಾರ್‌ ಬಿ.ಜಿ.ಗೌತಮ್‌ ಪೆರೇಸಂದ್ರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಜಿ.ಆರ್‌.ಸುನೀಲ್‌ ಎಂಬಾತನನ್ನುವಿಚಾರಿಸಿದಾಗ ತಾನು ವಾಯುಪುತ್ರ ಎಂಟರ್‌ಪ್ರೈಸಸ್‌ ಎಂಬ ಸಂಸ್ಥೆಯಡಿ ಬೆಂಗಳೂರಿನ ಪೂರ್ಣಾದ್ರಿ ಎಂಟರ್‌ಪ್ರೈಸಸ್‌ ಗ್ಯಾಸ್‌ ವಿತರಕರಿಂದ ಕಮರ್ಷಿಯಲ್‌ ಗ್ಯಾಸ್‌ ಸಿಲಿಂಡರ್‌ ಖರೀದಿ ಮಾಡಿ, ಚಿಕ್ಕಬಳ್ಳಾಪುರ ಮತ್ತು ಪೆರೇಸಂದ್ರ ಸುತ್ತಮುತ್ತಲಿನಹೋಟೆಲ್‌, ಅಂಗಡಿಗಳಿಗೆ ಮಾರಾಟಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಜಿ.ಆರ್‌.ಸುನೀಲ್‌ಹಾಜರು ಪಡಿಸಿದ ದಾಖಲೆ ಪರಿಶೀಲಿಸಿದಾಗ ಆತ ತನ್ನ ವಾಯುಪುತ್ರ ಎಂಟರ್‌ಪ್ರೈಸಸ್‌ ಅಡಿಯಲ್ಲಿಬೆಂಗಳೂರಿನ ಎನ್‌ಬಿಇ ಎಂಟರ್‌ಪ್ರೈಸಸ್‌ನಿಂದಕಮರ್ಷಿಯಲ್‌ ಗ್ಯಾಸ್‌ ಸಿಲಿಂಡರ್‌ಗಳನ್ನು ಮ್ಯಾನ್ಯುವಲ್‌ ಬಿಲ್‌ ಮೂಲಕ ಪಡೆದು ಸರಬರಾಜು ಮತ್ತು ಮಾರಾಟ ಮಾಡುತ್ತಿರುವುದನ್ನು ಸ್ಪಷ್ಟವಾಗಿದೆ.

ಆರೋಪಿಗೆ ಕೋರ್ಟ್‌ ಜಾಮೀನು: ಅಲ್ಲದೆ, ಸುನೀಲ್‌ಕುಮಾರ್‌ ಅವರ ಮನೆ ಮುಂದಿನ ಕಟ್ಟಡದಲ್ಲಿ ಗ್ಯಾಸ್‌ ಸಿಲಿಂಡರ್‌ ಸಂಗ್ರಹ ಮಾಡಿದ್ದು,ಇದಕ್ಕೆ ಯಾವುದೇ ಅನುಮತಿ ಅಥವಾ ಪರವಾನಗಿ ಹೊಂದಿರುವುದಕ್ಕೆ ದಾಖಲೆ ನೀಡಿಲ್ಲ. ಪ್ರಕರಣಕ್ಕೆಸಂಬಂಧಪಟ್ಟಂತೆ ಜಿ.ಆರ್‌.ಸುನೀಲ್‌ ಅವರ ತಂದೆರಾಮಕೃಷ್ಣಪ್ಪ ಹಾಗೂ ಸಹೋದರ ಅನಿಲ್‌ ವಿರುದ್ಧ ಸಹ ದೂರು ದಾಖಲಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಗ್ರಾಮದಲ್ಲಿ ಜಿ.ಆರ್‌.ಸುನೀಲ್‌ ಎಂಬಾತ ಅನಧಿಕೃತವಾಗಿ ಸಿಲಿಂಡರ್‌ ಸರಬರಾಜು ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಾನೂನು ರೀತಿಯ ಕ್ರಮ ಜರುಗಿಸಿದ್ದಾರೆ. ಸವಿತಾ, ಉಪನಿರ್ದೇಶಕಿ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next