Advertisement

ಅಕ್ರಮ ಇ-ಖಾತೆ: ತಪ್ಪಿತಸ್ಥ ಅಧಿಕಾರಿಗಳ ಅಮಾನತು ಮಾಡಿ

02:26 PM Jan 08, 2022 | Team Udayavani |

ಕೋಲಾರ: ಅಕ್ರಮವಾಗಿ ಇ-ಖಾತೆ ಮಾಡಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಸದ ಎಸ್‌.ಮುನಿಸ್ವಾಮಿ ಸೂಚಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ನಗರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅಕ್ರಮವಾಗಿ ಇ-ಖಾತೆ ಮಾಡಿಕೊಟ್ಟಿರುವಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆನಾನೇ ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ. ನೀವು ಕೂಡ ಪರಿಶೀಲಿಸಿ ಡೀಸಿಗೆ ವರದಿ ನೀಡುವಂತೆ ನಗರ ಯೋಜನಾಧಿಕಾರಿಗೆ ತಿಳಿಸಿದರು.

ಬೇರೆ ಕಡೆ ವರ್ಗಾವಣೆ ಮಾಡಿ: ಸರ್ಕಾರಿ ಜಮೀನಿಗೆ ನಗರಸಭೆಯಲ್ಲಿ ಖಾತೆ, ಅಗ್ರಿಮೆಂಟ್‌ ನಿವೇಶನಗಳಿಗೆ ಇ-ಖಾತೆ ಮಾಡಿಕೊಂಡು ಹೋದರೆ ಹೇಗೆ? ನಿಮ್ಮನ್ನು ಯಾರುಹೇಳ್ಳೋರು-ಕೇಳ್ಳೋರು ಇಲ್ಲವೇ? ಅಮಾನತು ಮಾಡಿದಾಗ ನಿಮಗೆ ಬುದ್ಧಿ ಬರುತ್ತದೆ. ನಗರಸಭೆ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಹಲವು ವರ್ಷಗಳಿಂದ ಬೀಡು ಬಿಟ್ಟಿದ್ದಾರೆ. ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಎಂದು ಸೂಚಿಸಿದರು.

ಪೌರಾಯುಕ್ತ ಏನ್ತಾಡುತ್ತಿದ್ದಾರೆ: ಕಳೆದ ಆರೇಳು ವರ್ಷಗಳಿಂದ ನಗರಸಭೆಯ ಅಗ್ರಿಮೆಂಟ್‌ ನಿವೇಶನಗಳಿಗೆ ಇ-ಖಾತೆಗಳನ್ನು ಅಧಿಕಾರಿಗಳು ಮಾಡಿಕೊಡುತ್ತಿದ್ದಾರೆ. ಒಂದು ಖಾತೆ ಮಾಡಿಕೊಡುವುದಕ್ಕೆ ಲಕ್ಷಾಂತರ ರೂ.ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಇದೆ ಎಂದು ಹೇಳಿದರು.

ಸದಸ್ಯರಿಂದಲೇ ಒತ್ತಡ: ಈ ವೇಳೆ ಸಂಸದರ ಹೇಳಿಕೆಗೆ ಉತ್ತರಿಸಿದ ಪೌರಾಯುಕ್ತ ಪ್ರಸಾದ್‌, ಅಗ್ರಿಮೆಂಟ್‌ ನಿವೇಶನಗಳಿಗೆ ಖಾತೆ ಮಾಡಿಕೊಡುವಂತೆ ಕೆಲವು ಸದಸ್ಯರೇ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಾರೆ. ಇದರಿಂದ ನಾವೇನು ಮಾಡೋದಿಕ್ಕೆ ಆಗುತ್ತಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಮುಂದಾದರು.

Advertisement

ಇ-ಖಾತೆ ಮಾಡಿಕೊಟ್ಟರೆ ನಿಮ್ಮದೇ ತಪ್ಪು: ಪೌರಾಯುಕ್ತರ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ನಗರಸಭೆ ಉಪಾಧ್ಯಕ್ಷ ಪ್ರವೀಣ್‌ ಗೌಡ, ನಗರಸಭೆ ಸದಸ್ಯರು ಅಗ್ರಿಮೆಂಟ್‌ನಿವೇಶನಗಳಿಗೆ ಇ-ಖಾತೆ ಮಾಡಿಕೊಡುವಂತೆ ಒತ್ತಡ ಹಾಕಿದರೆ, ಕಾನೂನಿನಲ್ಲಿ ಅವಕಾಶವಿಲ್ಲಎಂದು ತಿರಸ್ಕಾರ ಮಾಡಬೇಕು. ಅದು ಬಿಟ್ಟುಇ-ಖಾತೆ ಮಾಡಿಕೊಟ್ಟರೆ ನಿಮ್ಮದು ತಪ್ಪಾಗುತ್ತದೆ ಎಂದು ಹೇಳಿದರು.

ಬ್ರೋಕರ್‌ ಹಾವಳಿ ತಪ್ಪಿಸಿ: ನಗರಸಭೆಯಲ್ಲಿ ಶೇ.70 ಬ್ರೋಕರ್‌ಗಳ ಹಾವಳಿ ಜಾಸ್ತಿಯಾಗಿದೆ.ಸಾಮಾನ್ಯ ಜನರು ಕೆಲಸ ಕಾರ್ಯಗಳಿಗೆ ಬಂದರೆ ಅವರ ಕೆಲಸ ಆಗೋದಿಲ್ಲ, ಅದೇ ಬ್ರೋಕರ್‌ಗಳಮೂಲಕ ಹೋದರೆ ಅರ್ಧ ಗಂಟೆಯಲ್ಲಿಆಗುತ್ತದೆ. ಇದೇನಾ ನೀವು ಮಾಡುತ್ತಿರುವ ಕೆಲಸ ಎಂದು ತರಾಟೆಗೆ ತೆಗೆದುಕೊಂಡರು.

ಹಾರೋಹಳ್ಳಿ ಬಳಿ 36 ಗುಂಟೆ ಕಂದಾಯ ಜಮೀನು, ಪಾಲಸಂದ್ರ ಬಡಾವಣೆಯಲ್ಲಿಉದ್ಯಾನಕ್ಕೆ ಮೀಸಲಿಟ್ಟ ಜಾಗಕ್ಕೆ ಖಾತೆಮಾಡಿಕೊಡಲಾಗಿದೆ ಎಂದು ದಾಖಲೆಗಳ ಸಮೇತ ಉಪಾಧ್ಯಕ್ಷ ಪ್ರವೀಣ್‌ಗೌಡ ತೋರಿಸಿದಾಗ ಅಧಿಕಾರಿಗಳು ಮರು ಮಾತನಾಡಲಿಲ್ಲ. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿ ಚಂದ್ರು -ತ್ಯಾಗರಾಜ್‌ ಅವರನ್ನು ಪ್ರಶ್ನಿಸಿದ್ರೂ ಸಮರ್ಪಕ ಮಾಹಿತಿ ಕೊಡಲಿಲ್ಲ. ಸಭೆಯಲ್ಲಿ ನಗರಸಭೆ ಪೌರಾಯುಕ್ತ ಪ್ರಸಾದ್‌ರೆಡ್ಡಿ, ಎಇಇ ರವೀಂದ್ರ, ನಾಮಿನಿ ಸದಸ್ಯ ರಾಜೇಶ್‌ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next