Advertisement
ಮಂಗಳೂರು ತಾಲೂಕು ಶಾಂತಿಗುಡ್ಡೆ ನಿವಾಸಿ ಮೊಯಯಿದ್ದಿ ಎಂಬವರ ಮಗ, ಈಚರ್ ಚಾಲಕ ನವಾಜ್ (32)ಬಂಧಿತ. ಲಾರಿಯಲ್ಲಿದ್ದ ಹಸೈನಾರ್, ನಿಝಾರ್ ಜೋಕಟ್ಟೆ, ಹನೀಫ್ ಜೋಕಟ್ಟೆ, ಮುಸ್ತಾಕ್ ಅಡ್ಯಾರ್ ಕಣ್ಣೂರು ಎಂಬವರು ಪರಾರಿಯಾಗಿದ್ದಾರೆ.
ಶನಿವಾರ ಬೆಳಗ್ಗೆ ಸುಮಾರು 6 ಗಂಟೆಗೆ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಈ ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಧಿಕ್ಕರಿಸಿ ಮಂಗಳೂರು ಕಡೆಗೆ ವೇಗವಾಗಿ ಸಾಗಿದೆ. ಅನುಮಾನಗೊಂಡ ಚೆಕ್‌ಪೋಸ್ಟ್ ಸಿಬಂದಿ ನೆಲ್ಯಾಡಿ ಹೊರಠಾಣೆಯ ಎಸ್‌ಐ ಸೀತಾರಾಮ ಗೌಡರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಸ್‌ಐ ಹಾಗೂ ಕಾನ್‌ಸ್ಟೆಬಲ್ ಪ್ರತಾಪ್ ಅವರು ಈಚರ್ ಲಾರಿಯನ್ನು ನೆಲ್ಯಾಡಿಯಲ್ಲಿ ತಡೆಯಲು ಮುಂದಾದರು. ಅಲ್ಲಿಂದಲೂ ತಪ್ಪಿಸಿಕೊಂಡು ಪರಾರಿಯಾದ ವಾಹನವನ್ನು ಪೊಲೀಸರು ಬೆನ್ನಟ್ಟಿಕೊಂಡು ಹೋಗಿ ಕೊಣಾಲು ಗ್ರಾಮದ ಕೋಲ್ಪೆಯಲ್ಲಿ ತಡೆಯುವಲ್ಲಿ ಸಫಲರಾದರು.
Related Articles
Advertisement
ನಿರಂತರ ನಡೆಯುತ್ತಿದೆ ಅಕ್ರಮ ದನಸಾಗಾಟ:ಒಂದೆಡೆ ಪೊಲೀಸರ ಕಾರ್ಯಾಚರಣೆುಂದ ಅಕ್ರಮ ಸಾಗಾಟಗಳನ್ನು ಪತ್ತೆಹಚ್ಚುವ ಘಟನೆ ನಡೆಯುತ್ತಿದ್ದ ಹಾಗೆಯೇ ಅಕ್ರಮ ಸಾಗಾಟಗಾರರು ಐಶಾರಾಮಿ ವಾಹನಗಳಲ್ಲಿ ಅಮಾನುಷವಾಗಿ ತುಂಬಿಸಿಕೊಂಡು ಹೋಗುವ ಘಟನೆಗಳು ನಡೆಯುತ್ತಿದ್ದು ಇದನ್ನು ಪತ್ತೆ ಮಾಡುವುದೂ ಕೂಡಾ ಸವಾಲಿನ ಕಾರ್ಯವೇ ಆಗಿದೆ. ವಶಪಡಿಸಿಕೊಂಡ ವಾಹನಗಳು ಹಾಗೂ ಆರೋಪಿಗಳು ತಕ್ಷಣ ಜಾಮೀನಿನ ಮೇಲೆ ಹೊರಬರುತ್ತಿದ್ದು ಮತ್ತೆ ಅದೇ ಚಾಳಿ ಮುಂದುವರಿಸುತ್ತಿದ್ದಾರೆ ಎಂದು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಕ್ರಮವಾಗಿ ಸಾಗಾಟಕ್ಕೆ ಬಳಸಲಾಗುವ ವಾಹನಗಳ ದಾಖಲೆ ಪತ್ರಗಳನ್ನು ಬೇರೊಂದು ವ್ಯಕ್ತಿಗೆ ಜಿಪಿಎ ಮಾಡಿಕೊಳ್ಳುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಕ್ಷಣ ವಾಹನಗಳನ್ನು ಬಿಡುಗಡೆಗೊಳಿಸಿ ಮತ್ತದೇ ದಂಧೆಗೆ ಬಳಸಲಾಗುತ್ತಿದೆ ಅನ್ನು ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಕ್ರಮ ಸಾಗಾಟ ನಡೆದಾಗ ಆರೋಪಿಗಳ ಹಾಗೂ ವಾಹನದ ಮೇಲೆ ಕಠಿಣ ಸೆಕ್ಷನ್ ಹಾಕಿ ವಾಹನ ಬಿಡುಗಡೆಯಾಗದಂತೆ ಕ್ರಮ ತೆಗೆದುಕೊಂಡಲ್ಲಿ ಮಾತ್ರ ಅಕ್ರಮ ಸಾಗಾಟ ನಿಯಂತ್ರಣಕ್ಕೆ ಬರಬಹುದಷ್ಟೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.