Advertisement

Panaji: ಅಕ್ರಮ ಕ್ಯಾಸಿನೋಗಳ ಕಡಿವಾಣಕ್ಕೆ ಮುಂದಾದ ಮಹಾನಗರ ಪಾಲಿಕೆ…

04:35 PM Aug 09, 2023 | Team Udayavani |

ಪಣಜಿ: ಗೋವಾದ ರಾಜಧಾನಿ ಪಣಜಿಯ ಮಾಂಡವಿ ನದಿಯಲ್ಲಿ ಹಲವು ಕ್ಯಾಸಿನೊಗಳಿವೆ. ಈ ಕ್ಯಾಸಿನೋಗಳು ಕೆಲವೆಡೆ ಅತಿಕ್ರಮಣ ಮಾಡಿಕೊಂಡಿವೆ. ಅಥವಾ ಸರ್ಕಾರಿ ಸ್ಥಳಗಳಲ್ಲಿ ಜಾಹೀರಾತು ಫಲಕಗಳು ಹಾಕಿವೆ. ಈ ಅಕ್ರಮಗಳ ವಿರುದ್ಧ  ಹೈಕೋರ್ಟ್ ತೀರ್ಪಿನಂತೆ ಪಣಜಿ ಮಹಾನಗರಪಾಲಿಕೆ ಕ್ಯಾಸಿನೋಗಳ ಅಕ್ರಮ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಿದೆ. ಮಂಗಳವಾರ ಇಂತಹ ಅಕ್ರಮ ಜಾಹೀರಾತು ಫಲಕಗಳ ತೆರವು ಕಾರ್ಯ ಕೈಗೊಳ್ಳಲಾಗಿದೆ.

Advertisement

ಪಣಜಿ ಮಹಾನಗರ ಪಾಲಿಕೆ ನೌಕರರು ಕ್ಯಾಸಿನೋಗಳ ಅಕ್ರಮ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದ್ದಾರೆ. ದೂರದಿಂದಲೂ ನೋಡಬಹುದಾದ ಕ್ಯಾಸಿನೊಗಳ ಅದ್ಭುತವಾದ ಜಾಹೀರಾತುಗಳು ಇದ್ದವು. ಆದರೆ, ಅಕ್ರಮ ನಿವೇಶನ ಇರುವ ಕಾರಣ ಮಹಾನಗರ ಪಾಲಿಕೆ ಸಿಬ್ಬಂದಿಗಳು ಈ ಕ್ಯಾಸಿನೊಗಳ ಅಕ್ರಮಕ್ಕೆ ಕಡಿವಾಣ ಹಾಕಿದ್ದಾರೆ.

ಗೋವಾದ ಹಲವು ಕ್ಯಾಸಿನೊಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇವುಗಳಲ್ಲಿ ಕೆಲವು ಕ್ಯಾಸಿನೊಗಳು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದವು. ಅಕ್ರಮವಾಗಿ ನಿರ್ಮಾಣ ಮಾಡಿದ್ದ ಜಾಹೀರಾತು ಬೃಹತ್ ಫಲಕಗಳನ್ನು ತೆರವುಗೊಳಿಸುವ ಮೂಲಕ ಕ್ಯಾಸಿನೊಗಳ ವಿರುದ್ಧ ಮಹಾನಗರಪಾಲಿಕೆ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: Sirsi: ಕೊಲ್ಕತ್ತಾದ ಈ ವ್ಯಕ್ತಿ ಸೈಕಲ್ ಪ್ರವಾಸ ಹೊರಟಿದ್ದೇಕೆ ಗೊತ್ತಾ ? ಇಲ್ಲಿದೆ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next