Advertisement

ಥಾಣೆ: ಅಕ್ರಮ ಕಾಲ್‌ ಸೆಂಟರ್‌ ಪತ್ತೆ; ಮಾಲಕನ ಬಂಧನ

11:57 AM Oct 12, 2018 | Team Udayavani |

ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಟೌನ್‌ಶಿಪ್‌ ನಲ್ಲಿ  ಕಳೆದ ಹಲವು ವರ್ಷಗಳಿಂದ ಕಾರ್ಯವೆಸಗುತ್ತಿದ್ದ ಅಕ್ರಮ ಕಾಲ್‌ ಸೆಂಟರ್‌ ಒಂದನ್ನು ಪತ್ತೆ ಹಚ್ಚಲಾಗಿದೆ. 

Advertisement

ಅಮೆರಿಕದ ಎರಡು ಫಾರ್ಮಾ ಕಂಪೆನಿಗಳಿಗೆ ಐಟಿ ಸೇವೆ ಒದಗಿಸುತ್ತಿದ್ದ ಈ ಅಕ್ರಮ ಕಾಲ್‌ ಸೆಂಟರ್‌ ನ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕನ್ನರಿಗೆ ಫೋನ್‌ ಮಾಡುವ ಸಲುವಾಗಿ ಮೂವರು ಆಪರೇಟರ್‌ಗಳನ್ನು ತಿಂಗಳಿಗೆ 12,000 ರೂ. ವೇತನದ ಮೇಲೆ ಇಲ್ಲಿ ಕೆಲಸಕ್ಕೆ ಇಟ್ಟುಕೊಳ್ಳಲಾಗಿತ್ತು. 

ಬಂಧಿತ ಮಾಲಕನನ್ನು ಅಬ್ದುಲ್‌ ವಷೀದ್‌ ಕಾದಿರ್‌ ಚೌಧರಿ (23) ಎಂದು ಗುರುತಿಸಲಾಗಿದೆ. ಮುಂಬ್ರಾದ ಅಮೃತ್‌ ನಗರ ಪ್ರದೇಶದಲ್ಲಿ ಕಾರ್ಯವೆಸಗುತ್ತಿದ್ದ ಈ ಕಾಲ್‌ ಸೆಂಟರ್‌ನ ಮೇಲೆ ನಿನ್ನೆ ಗುರುವಾರ ಬೆಳಗ್ಗೆ ದಾಳಿ ಮಾಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next