Advertisement

ಅಕ್ರಮ ಕಾಲ್‍ಸೆಂಟರ್; ಅಮೆಜಾನ್ ಹೆಸರಲ್ಲಿ ವಂಚನೆ: ಗೋವಾ ದಲ್ಲಿ 16 ಮಂದಿ ಬಂಧನ

07:20 PM Jun 11, 2022 | Team Udayavani |

ಪಣಜಿ: ಓಲ್ಡ್ ಗೋವಾದ ಶಾಲೆ ಯೊಂದರ ಪಕ್ಕದ ಬಂಗಲೆಯೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕಾಲ್‍ಸೆಂಟರ್ ಮೇಲೆ ಗೋವಾ ಸೈಬರ್ ಕ್ರೈಂ ಪೋಲಿಸರು ದಾಳಿ ನಡೆಸಿ 16 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಈ ಕುರಿತು ಮಾಹಿತಿ ನೀಡಿದ ಪೋಲಿಸ್ ನಿರೀಕ್ಷಕ ರಾಹುಲ್ ಪರಬ್, ಕಾಲ್‍ಸೆಂಟರ್ ಪ್ರಮುಖ ಸೂತ್ರದಾರ ಗುಜರಾತ್ ನ ರಾಯ್ ಫರ್ನಾಂಡಿಸ್ (32, ) ಹಾಗೂ 8 ಜನ ಕಾರ್ಮಿಕರು ಸೇರಿ ಒಟ್ಟು 16 ಜನರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರಿಂದ 14 ಲ್ಯಾಪ್ ಟಾಪ್, 8 ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಅಕ್ರಮ ಕಾಲ್ ಸೆಂಟರ್ ನಡೆಯುತ್ತಿರುವ ಖಚಿತ ಮಾಹಿತಿಯ ಆಧಾರದ ಮೇಲೆ ಪೋಲಿಸರು ಮಧ್ಯರಾತ್ರಿಯ ವೇಳೆ ದಾಳಿ ನಡೆಸಿದ್ದಾರೆ. ಅಕ್ರಮ ಕಾಲ್‍ಸೆಂಟರ್ ಮೂಲಕವಾಗಿ ಅಮೆಜಾನ್ ಹೆಸರನ್ನು ಬಳಸಿಕೊಂಡು ಗ್ರಾಹಕರಿಗೆ ಗಿಫ್ಟ್ ಕಾರ್ಡ್ ಕೊಡುವುದಾಗಿ ಹೇಳಿ ಮೋಸವೆಸಗುತ್ತಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next