Advertisement

ಅಕ್ರಮ ಗೋಮಾಂಸ ಮಾರಾಟ: ಮೂವರ ಬಂಧನ

01:12 PM Jun 17, 2022 | Team Udayavani |

ಕುಣಿಗಲ್: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ ಘಟನೆ ಹುಲಿಯೂರುದುರ್ಗ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

Advertisement

ತಾಲೂಕಿನ ಹುಲಿಯೂರುದುರ್ಗ ಹಳೆಪೇಟೆ ನಿವಾಸಿಗಳಾದ  ಕಿಜರ್ ಪಾಷ, (42), ಹುಸೇನ್(19), ಜಬಿಉಲ್ಲಾ( 18) ಬಂಧಿತ ಆರೋಪಿಗಳು.

ಹುಲಿಯೂರು ದುರ್ಗ ಹಳೆಪೇಟೆಯ ಕಿಜರ್ ಪಾಷ ಅವರ ಮನೆಯಲ್ಲಿ ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಗೋಮಾಂಸ ವಶಕ್ಕೆ ಪಡೆದು , ಮೂವರನ್ನು ಬಂಧಿಸಿದ್ದಾರೆ. ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ರಾಹುಲ್ ಇಡಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next