Advertisement

ಅಕ್ರಮ ಶಸ್ತ್ರಾಸ್ತ್ರ ಘಟಕ ಪತ್ತೆ, 24 ಪಿಸ್ತೂಲು, ಬಂದೂಕು ವಶ, 3 ಸೆರೆ

11:14 AM Jul 17, 2018 | udayavani editorial |

ಮುಜಫ‌ರನಗರ : ಜಿಲ್ಲೆಯ ಬುಢಾನಾ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ಹುಸೇನ್‌ಪುರ ಕಾಲಾ ಗ್ರಾಮದಲ್ಲಿ ಅಕ್ರಮ ಶಸ್ತ್ರಾಸ್ತ್ರ ಉತ್ಪಾದಿಸುವ ಘಟಕವೊಂದನ್ನು ಪತ್ತೆ ಹಚ್ಚಿರುವ ಪೊಲೀಸರು ಎರಡು ಡಜನ್‌ಗಳಿಗೂ ಅಧಿಕ ನಾಡ ಪಿಸ್ತೂಲುಗಳನ್ನು  ಮತ್ತು ಒಂದು ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.

Advertisement

ಘಟನೆಗೆ ಸಂಬಂಧಿಸಿ ಹಬೀಬ್‌, ಶೋಯಿಬ್‌ ಮತ್ತು ಶರಾಫ‌ತ್‌ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 

ನಿನ್ನೆ ಸಂಜೆ ಈ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಸರ್ಕಲ್‌ ಪೊಲೀಸ್‌ ಆಫೀಸರ್‌ ಹರಿರಾಮ್‌ ಯಾದವ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next