Advertisement

Switzerland; ಅಕ್ರಮವಾಗಿ ಆತ್ಮಹ*ತ್ಯಾ ಕೋಶ ಬಳಕೆ

02:00 AM Nov 05, 2024 | Team Udayavani |

ಹೊಸದಿಲ್ಲಿ: ಸ್ವಿಜರ್ಲೆಂಡ್‌ನ‌ಲ್ಲಿ ತಯಾರಿ­ಸಲಾಗಿದ್ದ ಆತ್ಮಹತ್ಯಾ ಕೋಶದಲ್ಲಿ ಮೊದಲ ಬಾರಿ ಸತ್ತ ಮಹಿಳೆಯ ಕತ್ತು ಹಿಸುಕಲಾಗಿತ್ತು ಎಂದು ವರದಿಯೊಂದು ತಿಳಿಸಿದೆ. ಸಾರ್ಕೋ ಹೆಸರಿನ ಈ ಆತ್ಮ­ಹತ್ಯಾ ಕೋಶಕ್ಕೆ ಸ್ವಿಜರ್ಲೆಂಡ್‌ನ‌ಲ್ಲಿ ನಿಷೇಧ ವಿಧಿಸಲಾಗಿದ್ದರೂ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಇದರ ಪ್ರಯೋಗ ನಡೆಸಲಾಗಿತ್ತು. ಇದೀಗ ಇದರಲ್ಲಿ ಸತ್ತ ಮಹಿಳೆಯ ಮರಣೋ­ತ್ತರ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಕತ್ತಿನ ಸುತ್ತ ಬಲವಾದ ಗಾಯವಾಗಿದ್ದು, ಉಸಿರುಗಟ್ಟಿಸಿ ಸಾಯಿಸಿರುವ ಸಾಧ್ಯತೆ ಇದೆ.

Advertisement

ಅಲ್ಲದೇ ಪ್ರಯೋಗದ ಸಮಯ­ದಲ್ಲಿ ಸಾರ್ಕೋದ ಬಾಗಿಲನ್ನು ಹಲವು ಬಾರಿ ತೆಗೆದು ಮುಚ್ಚಲಾಗಿದೆ ಎನ್ನಲಾ­ಗಿದೆ. ಪ್ರಯೋಗದ ವೇಳೆ ಮಾಡಲಾಗಿದ್ದ ವೀಡಿಯೋವನ್ನಿಟ್ಟು­ಕೊಂಡು ಪೊಲೀ ಸರು ಮತ್ತೆ ತನಿಖೆ ಆರಂಭಿಸಿದ್ದಾರೆ. ಸೆ.23ರಂದು ಇದರ‌ ಬಳಕೆ ಮಾಡಲಾ ಗಿತ್ತು. ಬಳಿಕ ಘಟನೆಗೆ ಕಾರಣವಾದ ವರನ್ನು ಪೊಲೀಸರು ಬಂಧಿಸಿದ್ದರು.

ಏನಿದು ಸಾರ್ಕೋ?: ದಯಾಮರಣ ಬಯಸುವವರಿಗಾಗಿ ಈ ಯಂತ್ರ ತಯಾ­­ರಿ­ಸಲಾಗಿದ್ದು, ಇದರಲ್ಲಿ ನೈಟ್ರೋ ಜನ್‌ ಬಿಡುಗಡೆಯಾಗುವ ಮೂಲಕ ಒಳಗಿರುವ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಗಾಢ ನಿದ್ರೆಗೆ ಜಾರಿ, ಬಳಿಕ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next