Advertisement

Ileana D’Cruz: ಮದುವೆಗೂ ಮುನ್ನವೇ ಮಗುವಿನ ನಿರೀಕ್ಷೆ; ಪೋಸ್ಟ್‌ ಹಾಕಿ ಸಂತಸ ಹಂಚಿಕೊಂಡ ನಟಿ

12:14 PM Apr 18, 2023 | |

ಮುಂಬಯಿ: ಬಾಲಿವುಡ್‌ ಬ್ಯೂಟಿ ಇಲಿಯಾನಾ ಡಿಕ್ರೂಜ್‌ ಮಂಗಳವಾರ (ಏ.18 ರಂದು) ಬೆಳ್ಳಂಬೆಳಗ್ಗೆ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಹಾಕಿರುವ ಪೋಸ್ಟ್‌ ವೈರಲ್‌ ಆಗಿದೆ. ಮದುವೆಗೂ ಮುನ್ನ ನಟಿ ಗರ್ಭಿಣಿಯಾಗಿರುವ ಬಗ್ಗೆ ಪೋಸ್ಟ್‌ ಹಾಕಿ ಎಲ್ಲರಿಗೂ ಅಚ್ಚರಿಯಾಗಿಸಿದ್ದಾರೆ.

Advertisement

ʼರುಸ್ತುಂʼ ಬೆಡಗಿ ಇಲಿಯಾನಾ ಮಗುವಿಗೆ ಹಾಕುವ ಬಟ್ಟೆಯೊಂದನ್ನು ಹಾಕಿ ಅದರಲ್ಲಿ ʼಅಡ್ವೆಂಟರ್‌ ಬೀಗೆನ್ಸ್‌ʼ ಎಂದು ಬರೆದುಕೊಂಡಿದ್ದು, ಇನ್ನೊಂದು ಫೋಟೋದಲ್ಲಿ ಕುತ್ತಿಗೆಗೆ ಹಾಕಿರುವ ಪೆಂಡಿಂಟ್‌ ವೊಂದರಲ್ಲಿ ʼಅಮ್ಮಾʼ (Mama) ಎಂದು ಬರೆದಿದೆ. ಪೋಸ್ಟ್‌ ಕೆಳಗೆ ಮಗುವನ್ನು ನೋಡುವ ಸಂತಸದಲ್ಲಿದ್ದೇನೆ ಎಂದು ಬರೆದಿಕೊಂಡಿದ್ದಾರೆ.

ಪೋಸ್ಟ್‌ ನೋಡಿದ ಅಭಿಮಾನಿಗಳಿಗೆ ಶಾಕ್‌ ಆಗಿದೆ ಏಕೆಂದರೆ ನಟಿಗೆ ಇನ್ನು ಮದುವೆಯಾಗಿಲ್ಲ. ಈ ಹಿಂದೆ ಇಲಿಯಾನಾ ಆಸ್ಟ್ರೇಲಿಯದ ಛಾಯಾಗ್ರಾಹಕ, ಆಂಡ್ರ್ಯೂ ನೀಬೋನ್  ಅವರೊಂದಿಗೆ ಡೇಟಿಂಗ್‌ ನಲ್ಲಿದ್ದರು. 2019 ರಲ್ಲಿ ಇಬ್ಬರು ದೂರವಾದರು.

ಇತ್ತೀಚೆಗಿನ ವರದಿಯ ಪ್ರಕಾರ ನಟಿ ಕತ್ರಿನಾ ಕೈಫ್ ಅವರ ಸಹೋದರಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರೊಂದಿಗೆ ಡೇಟಿಂಗ್‌ ನಲ್ಲಿದ್ದಾರೆ ಎನ್ನುವ ಗಾಸಿಪ್‌ ಹಬ್ಬಿದೆ. ಇವರಿಬ್ಬರ ಸುತ್ತಾಟ ಬಿಟೌನ್‌ ನಲ್ಲಿ ಸದ್ದು ಮಾಡಿದೆ.

ಆದರೆ ಇಲಿಯಾನಾ ಇದರ ಬಗ್ಗೆ ಎಲ್ಲೂ ಮುಕ್ತವಾಗಿ ಹೇಳಿಕೊಂಡಿಲ್ಲ. ನಟಿಯ ಪ್ರೆಗ್ನೆನ್ಸಿ ಬಗ್ಗೆ ಅನೇಕರು ಶಾಕ್‌ ಆಗಿದ್ದು, ಇವರಿಗೆ ಮದುವೆ ಯಾವಾಗ ಆಗಿದೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ನಟಿಯ ಸಂತಸದ ಕ್ಷಣಕ್ಕೆ ಶುಭಕೋರಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next