Advertisement
ಮಂಗಳೂರು ಬಂಟರ ಮಾತೃ ಸಂಘದ ಸಮಾಲೋಚನಾ ಸಭಾಗೃಹದಲ್ಲಿ ಜ. 16ರಂದು ನಡೆದ ಸಭೆಯಲ್ಲಿ ಈ ತನಕ ಸುಮಾರು ಹತ್ತು ವರ್ಷಗಳಲ್ಲಿ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಐಕಳ ಹರೀಶ್ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು.
Related Articles
Advertisement
ಎಳತ್ತೂರುಗುತ್ತು ರಾಮಣ್ಣ ಶೆಟ್ಟಿ ಮತ್ತು ಐಕಳ ಕುರುಂಬಿಲ್‌ಗುತ್ತು ದೇವಕಿ ಶೆಟ್ಟಿ ದಂಪತಿ ಸುಪುತ್ರರಾಗಿರುವ ಐಕಳ ಹರೀಶ್ ಶೆಟ್ಟಿ ಅವರು, ಶಿಮಂತೂರು ಶಾರದಾ ಹೈಸ್ಕೂಲ್‌ನಲ್ಲಿ ಪ್ರೌಢ ಶಾಲಾಭ್ಯಾಸದ ಬಳಿಕ ಮೂಲ್ಕಿ ವಿಜಯಾ ಕಾಲೇಜ್‌ನಲ್ಲಿ ಬಿಎ ಪದವಿಯನ್ನು ಪಡೆದರು. 1981ರಿಂದ ಸತತ ಮೂರು ವರ್ಷಗಳಿಂದ ದೇಹದಾಡ್ಯì ಸ್ಪರ್ಧೆಯಲ್ಲಿ ಮಿಸ್ಟರ್ ಮಂಗ್ಳೂರು ಯುನಿವರ್ಸಿಟಿ’, 1982 ಸಾಲಿನಲ್ಲಿ “ಮಿಸ್ಟರ್ ದಕ್ಷಿಣ ಕನ್ನಡ’, 1984ರಲ್ಲಿ “ಭಾರತ್ ಕಿಶೋರ್’ ಪುರಸ್ಕೃತರಾದ ಸರ್ವೋತ್ತಮ ಕ್ರೀಡಾಪಟು ಇವರಾಗಿದ್ದಾರೆ. ಮಹಾನಗರ ಮುಂಬಯಿಯಲ್ಲಿನ ಸಮಾಜ ಸೇವಕ, ಚತುರ ಸಂಘಟಕ, ಪ್ರಭಾವಿ ನೇತಾರ ಐಕಳ ಹರೀಶ್ ಶೆಟ್ಟಿ ಅವರು ಪತ್ನಿ ಚಂದ್ರಿಕಾ ಹರೀಶ್, ಪುತ್ರ ಅರ್ಜುನ್ ಶೆಟ್ಟಿ, ಪುತ್ರಿ ಸನ್ನಿಧಿ ಶೆಟ್ಟಿ ಅವರನ್ನೊಳಗೊಂಡು ಬೊರಿವಲಿಯಲ್ಲಿ ನೆಲೆಸಿದ್ದಾರೆ.
ಬಂಟ ಸಮಾಜದ ಮುಂದಾಳುವಾಗಿದ್ದು, ಎಲ್ಲರಿಗೂ ಪ್ರೋತ್ಸಾಹಕರಾಗಿ. ಜನಸಾಮಾನ್ಯ ರಲ್ಲಿ ತೋರಿದ ಪ್ರೀತಿ ವಿಶ್ವಾಸಗಳ ಸೇವೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಸಾಮಾ ಜಿಕ ವಲಯದ ಜನ ಮೆಚ್ಚು ಗೆಯ ಧೀಮಂತ ಸಮಾಜ ಸೇವಕ ಎಂದೆನಿಸಿದ್ದಾರೆ. ಕೇವಲ ಬಂಟ ಸಮುದಾಯ ಅಲ್ಲದೆ, ಎಲ್ಲ ಸಮಾಜಗಳ ಹಿತಕ್ಕಾಗಿ ಶ್ರಮಿಸಿ ಪ್ರಸಿದ್ಧರಾಗಿರುವ ಐಕಳ ಹರೀಶ್ ಶೆಟ್ಟಿ ಅವರು ಮಹಾನಗರ ಸೇರಿದಂತೆ ರಾಷ್ಟ್ರಾದ್ಯಂತ ಅಪಾರ ಹಿತೈಷಿ, ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ಸಾಹಸ, ಶ್ರದ್ಧೆಯಿಂದ ಬದುಕನ್ನು ಸಾಗಿಸಿದರು. ಈ ಕಾರಣದಿಂದಲೇ ಅವರಿಗೆ ನೂರಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಸಾಯಿಸಂಧ್ಯಾ ಆರ್ಟ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ, ಆಹಾರ್‌ನ ಉಪಾಧ್ಯಕ್ಷ ರಾಗಿ, ಬಂಟರ ಸಂಘದ ಅಧ್ಯಕ್ಷರಾಗಿ, ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿ, ಎಸ್. ಎಂ. ಶೆಟ್ಟಿ ಶಾಲಾ ಸಮುಚ್ಚಯ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಬಂಟ್ಸ್ ನ್ಯಾಯ ಮಂಡಳಿ ಸದಸ್ಯರಾಗಿ ನೂರಾರು ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿ ಕೊಂಡು ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಓರ್ವ ಸರ್ವೋತ್ಕೃಷ್ಟ ಸಂಘಟಕನೆಂದೇ ಗುರುತಿಸಿಕೊಂಡಿದ್ದಾರೆ.
ವರದಿ:ರೋನ್ಸ್ ಬಂಟ್ವಾಳ್