Advertisement

“ಐಟಡ್‌’ಮೂಲಕ ಚಿತ್ರ ಸ್ಪರ್ಶ ಅನುಭವ! ಮದ್ರಾಸ್‌ ಐಐಟಿಯ ಹೊಸ ಸಂಶೋಧನೆ

09:14 PM Oct 17, 2022 | Team Udayavani |

ಚೆನ್ನೈ: ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ಹೊಸ ಸಾಧ್ಯತೆಗಳು ಗೋಚರವಾಗುತ್ತದೆ. ಈಗ ನೀವು ಟಚ್‌ ಸ್ಟ್ರೀನ್‌ ಮೇಲಿನ ಚಿತ್ರಗಳನ್ನು ಸ್ಪರ್ಶಿಸಿ, ಅವುಗಳ ರಚನೆಯ ಸಂವೇದನೆಯನ್ನು ಪಡೆಯುವ ಮೂಲಕ ಅದರ ಅನುಭವ ಹೊಂದಬಹುದು.

Advertisement

ಇದು ವೈಜ್ಞಾನಿಕ ಕಾದಂಬರಿಯಲ್ಲ. ಬದಲಾಗಿ ಐಐಟಿ ಮದ್ರಾಸ್‌ನ ಸಂಶೋಧಕರು ಅಭಿವೃದ್ಧಿಪಡಿಸಿರುವ ನೂತನ ಟಚ್‌ಸ್ಟ್ರೀನ್‌ ಡಿಸ್‌ಪ್ಲೇ ತಂತ್ರಜ್ಞಾನದಿಂದ ಇದು ಸಾಧ್ಯವಿದೆ. ಇದರಿಂದ ಬಳಕೆದಾರರು ಚಿತ್ರದ ಮೇಲ್ಮೆ„ ಮೇಲೆ ತಮ್ಮ ಬೆರಳುಗಳನ್ನು ಸ್ಪರ್ಶಿಸಿದಾಗ ಚಿತ್ರದ ರಚನೆಯನ್ನು ಅನುಭವಿಸಬಹುದು.

ಈ ಟಚ್‌ಸ್ಟ್ರೀನ್‌ ಡಿಸ್‌ಪ್ಲೇ ಉಪಕರಣಕ್ಕೆ “ಐಟಡ್‌’ ಎಂದು ಹೆಸರಿಸಲಾಗಿದೆ. ಟಚ್‌ಸ್ಟ್ರೀನ್‌ ಡಿಸ್‌ಪ್ಲೇ ತಂತ್ರಜ್ಞಾನದಲ್ಲಿ ಇದು ನೂತನ ಆವಿಷ್ಕಾರವಾಗಿದೆ. ಈ ಅನುಭವಕ್ಕಾಗಿ ಸಾಪ್ಟ್ವೇರ್‌ ಬಳಸಲಾಗಿದೆ ಎಂದು ಐಐಟಿ ಮದ್ರಾಸ್‌ನ ಸಂಶೋಧಕರು ತಿಳಿಸಿದ್ದಾರೆ.

ಐಐಟಿ ಮದ್ರಾಸ್‌ನ ಅಪ್ಲೆಡ್‌ ಮೆಕ್ಯಾನಿಕ್ಸ್‌ ವಿಭಾಗದ ಪ್ರೊ. ಎಂ.ಮಣಿವಣ್ಣನ್‌ ನೇತೃತ್ವದಲ್ಲಿ ಈ ಆವಿಷ್ಕಾರ ಕೈಗೊಳ್ಳಲಾಗಿದೆ. “ಇದು ಐಟಡ್‌ ಯುಗವಾಗಿದೆ. ಈ ತಂತ್ರಜ್ಞಾನವು ಆನ್‌ಲೈನ್‌ ಶಾಪಿಂಗ್‌ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ. ಇದರ ಮೂಲಕ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್ಲ್ ಗಳಲ್ಲಿ ಖರೀದಿಸುವ ಮೊದಲು ವಸ್ತುಗಳನ್ನು ಸ್ಪರ್ಶಿಸಿ ಅದರ ಗುಣಮಟ್ಟ ಅನುಭವಿಸಬಹುದು. ಶೇ.30ರಷ್ಟು ವಸ್ತುಗಳ ವಾಪಸಾತಿಯು ಆನ್‌ಲೈನ್‌ನಲ್ಲಿ ಚಿತ್ರ ಕಾಣಿಸುವುದಕ್ಕೂ ಡೆಲಿವರಿಯಾದ ವಸ್ತು ಬಂದಿರುವುದಕ್ಕೆ ಇರುವ ವ್ಯತ್ಯಾಸ ಕಾರಣವಾಗಿದೆ,’ ಎಂದು ಪ್ರೊ. ಎಂ.ಮಣಿವಣ್ಣನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next