Advertisement

ಕುಂಭ್‌, ಹಜ್‌ ಜನಸ್ತೋಮ ನಿರ್ವಹಣೆಗೆ ಐಐಟಿ ಮದ್ರಾಸ್‌ ನಿಂದ algorithm

06:52 AM Feb 21, 2019 | udayavani editorial |

ಚೆನ್ನೈ : ಕುಂಭ ಮೇಳ, ಹಜ್‌ ಸಂದರ್ಭದಲ್ಲಿ ಸೇರುವ ಭಾರೀ ಜನಸ್ತೋಮವನ್ನು ಅತ್ಯಂತ ಕಡಿಮೆ ಪೊಲೀಸ್‌ ಸಿಬಂದಿಗಳ ನಿಯೋಜನೆಯೊಂದಿಗೆ ನಿಯಂತ್ರಿಸಲು ಅನುಕೂಲವಾಗುವಂತಹ ಅತ್ಯಾಧುನಿಕ algorithm ವ್ಯವಸ್ಥೆಯೊಂದನ್ನು ಐಐಟಿ ಮದ್ರಾಸ್‌ ನ ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದಾರೆ. 

Advertisement

ಈ ವ್ಯವಸ್ಥೆಯನ್ನು ಬಳಸುವ ಮೂಲಕ ಭಾರೀ ಸಂಖ್ಯೆಯಲ್ಲಿ ಸೇರುವ ಜನಸ್ತೋಮದಲ್ಲಿ ನೂಕು ನುಗ್ಗಲು, ಕಾಲ್‌ ತುಳಿತ ಮೊದಲಾದ ದುರಂತಗಳು ಸಂಭವಿಸುವುದನ್ನು  ಮತ್ತು ಅಮಾಯಕರು ಭಾರೀ ಸಂಖ್ಯೆಯಲ್ಲಿ  ಬಲಿಯಾಗುವುದನ್ನು  ತಪ್ಪಿಸಬಹುದಾಗಿದೆ ಎಂದು ಐಐಟಿ  ಮದ್ರಾಸ್‌ನ ಮಹೇಶ್‌ ಪಂಚಗ್‌ನುಲಾ ಹೇಳಿದ್ದಾರೆ. 

ಐಐಟಿ ಮದ್ರಾಸ್‌ ವಿಜ್ಞಾನಿಗಳ ಈ ಸಂಶೋಧನೆಯನ್ನು ಫಿಸಿಕಲ್‌ ರಿವ್ಯೂ ಲೆಟರ್ಸ್‌ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ಭಾರೀ ದೊಡ್ಡ ಜನಸಮೂಹವನ್ನು ದುರಂತದಿಂದ ಪಾರುಗೊಳಿಸುವ ಸ್ಥಳಾಂತರ ಕಾರ್ಯಾಚರಣೆಗೂ ಈ algorithm ವ್ಯವಸ್ಥೆಯನ್ನು ಬಳಸಬಹುದಾಗಿದೆ ಎಂದು ಮಹೇಶ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next