Advertisement

ಯುಪಿಎಸ್‍ಸಿ ಫಲಿತಾಂಶ |ಸೈಕಲ್‌ನಲ್ಲಿ ಬಟ್ಟೆ ಮಾರುವವನ ಪುತ್ರನಿಗೆ 45ನೇ ರ್‍ಯಾಂಕ್‌

01:12 PM Sep 26, 2021 | Team Udayavani |

ಬಿಹಾರ್ : ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದು ಮತ್ತೊಂದು ಸಾರಿ ಸಾಬೀತಾಗಿದೆ. ಸೈಕಲ್ ಮೇಲೆ ಬಟ್ಟೆ ಮಾರುವ ಬಡ ವ್ಯಾಪಾರಿಯ ಪುತ್ರನೋರ್ವ ಇದೀಗ ಯುಪಿಎಸ್‍ಸಿ ಪಾಸ್ ಮಾಡಿ ಇತರರಿಗೆ ಮಾದರಿಯಾಗಿದ್ದಾನೆ.

Advertisement

ಸೈಕಲ್‌ನಲ್ಲಿ ಬಟ್ಟೆಯ ಮೂಟೆ ಹೊತ್ತುಕೊಂಡು, ಊರೂರು ತಿರುಗಿ ಬಟ್ಟೆ ಮಾರಿ ಬದುಕುತ್ತಿರುವ ಬಿಹಾ ರದ ವ್ಯಾಪಾರಿಗೆ ಶುಕ್ರವಾರ ಸಂಭ್ರಮವೋ ಸಂಭ್ರಮ. ಎಲ್ಲಕಡೆಗಳಿಂದಲೂ ಅಭಿನಂದನೆಗಳ ಮಹಾ ಪೂರ. ಕಾರಣ ವೇನು ಗೊತ್ತೇ? ಈ ವ್ಯಾಪಾರಿಯ ಮಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಡೆದಿದ್ದು 45ನೇ ರ್‍ಯಾಂಕ್‌.

2018ರಲ್ಲಿ ದೆಹಲಿ ಐಐಟಿ ಪದವಿ ಪಡೆದಿರುವ ಅನಿಲ್‌ ಬೋಸಕ್‌ ತಮ್ಮ 3ನೇ ಪ್ರಯತ್ನದಲ್ಲಿ ಯುಪಿಎ ಸ್‌ಸಿ ರ್‍ಯಾಂಕ್‌ ಪಡೆದಿದ್ದಾರೆ. ತಮ್ಮ ಪುತ್ರನ ಸಾಧನೆ ಕುರಿತು ಮಾತನಾಡಿರುವ ಬಿನೋದ್‌ ಬೋಸಕ್‌, “ನಾನೇನೂ ಕಲಿತಿಲ್ಲ. ಆದರೆ, ಈ ಪರೀಕ್ಷೆ ನನ್ನ ಮಗನ ಕನಸಾಗಿತ್ತು. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತೇ ಜನ ಕೊಟ್ಟರೆ ಅವರೂ ಈ ರೀತಿಯ ಸಾಧನೆ ಮಾಡುತ್ತಾರೆ’ ಎಂದಿದ್ದಾರೆ.

ಐಐಟಿ ಮುಗಿಸಿ ಕೆಲಸಕ್ಕೆ ಸೇರಬಹುದೆಂದು ನಾವು ಅಂದುಕೊಂಡಿದ್ದೇವು. ಆದರೆ ಆತ ಯುಪಿಎಸ್‍ಸಿಗೆ ತಯಾರಿ ನಡೆಸುವುದಾಗಿ ಹೇಳಿದ. ಅವನ ಕನಸಿಗೆ ನಾವು ಅಡ್ಡಿಯಾಗಲಿಲ್ಲ. ಆತನ ಶಿಕ್ಷಕರು ಅವನಿಗೆ ಎಲ್ಲ (ಆರ್ಥಿಕವಾಗಿಯೂ) ರೀತಿಯಲ್ಲಿ ಸಹಾಯ ಮಾಡಿದರು. ಎಲ್ಲರ ಬೆಂಬಲ ಹಾಗೂ ಆತನ ಶ್ರಮದಿಂದ ಯುಪಿಎಸ್‍ಸಿ ಪಾಸ್ ಆಗಿದ್ದಾನೆ. ಇಡೀ ಊರಿನ ಜನ ಮನೆಗೆ ಬಂದು ಶುಭಾಶಯ ಕೋರುತ್ತಿರುವುದು ನೋಡಿದರೆ ನನಗೆ ಖುಷಿಯಾಗುತ್ತಿದೆ ಎಂದು ಮಗನ ಸಾಧನೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಬಿನೋದ್ ಬೋಸಕ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next