ಧಾರವಾಡ: ರಾಜ್ಯದ ಶಿಕ್ಷಣ ಕಾಶಿ, ವಿದ್ಯಾನಗರಿ ಮತ್ತು ಸಾಹಿತ್ಯ-ಸಾಂಸ್ಕೃತಿಕ ರಾಜಧಾನಿ ಧಾರ ವಾಡಕ್ಕೆ ಕಿರೀಟಪ್ರಾಯವಾಗಿ ಐಐಟಿ ಎಂಬ ಮಣಿ ಮುಕುಟ ಸೇರ್ಪಡೆಯಾಗಿದೆ.
ಧಾರಾನಗರಿಯಲ್ಲಿ ಐಐಟಿ ಸ್ಥಾಪನೆಯ 1990ರ ದಶಕದ ಕೂಗು 2016ರಲ್ಲಿ ಸಾಕಾರಗೊಂಡಿತ್ತು. ಈಗ ಇಲ್ಲಿಯ ಬೇಲೂರು ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ 470 ಎಕರೆ ಜಮೀನಿನಲ್ಲಿ ನಿರ್ಮಾಣಗೊಂಡ ಭವ್ಯ ಮತ್ತು ದೈತ್ಯ ಕ್ಯಾಂಪಸ್ ಉದ್ಘಾಟನೆಗೆ ಸಜ್ಜಾಗಿದೆ. ಪ್ರಧಾನಿ ಮೋದಿ ರವಿ ವಾರ ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಐಐಟಿ ಸಂಪೂರ್ಣ ಕಾರ್ಯಚಟುವಟಿಕೆಗಳನ್ನು ಈಗಿರುವ ವಾಲಿ¾ ತಾತ್ಕಾಲಿಕ ಕ್ಯಾಂಪಸ್‌ನಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ.
ಐಐಟಿ ಕ್ಯಾಂಪಸ್ ಇಡೀ ದೇಶದಲ್ಲಿಯೇ ಹಚ್ಚ ಹಸಿರಿನ ಕ್ಯಾಂಪಸ್ ಎಂದು ಘೋಷಿಸಲಾಗಿದೆ. ಸಾವಿರಾರು ಮರ-ಗಿಡಗಳನ್ನು ಉಳಿಸಿಕೊಳ್ಳಲಾ ಗಿದೆ. ಮಾವು, ಬೇವು, ಹಲಸು, ಬಿಳಿಮತ್ತಿ, ತೇಗ, ಗಂಧ, ಬೀಟೆ, ಹೊನ್ನೆ, ಕರಿಮತ್ತಿ ಅಷ್ಟೇಯಲ್ಲ, ನೀಲಗಿರಿ ಮತ್ತು ಅಕೇಶಿಯಾ ಗಿಡಗಳಿವೆ. ಇನ್ನಷ್ಟು ಹೊಸ ತೋಟ, ಹಸಿರು ಹಾಸು, ಗಿಡದ ಜತೆ ಬಳ್ಳಿಯೂ ಹಚ್ಚ ಹರಿಸಿನ ಪಚ್ಚೆಯಲ್ಲಿ ಐಐಟಿ ತಲೆ ಎತ್ತುವಂತೆ ನೋಡಿಕೊಳ್ಳಲಾಗಿದೆ. ದೇಶಿ ಸಂಸ್ಕೃತಿ ಬಿಂಬಿಸುವ ಚಾಲುಕ್ಯರ, ವಿಜಯನಗರ ಕಾಲದ ಶಿಲ್ಪಗಳು ಮುಖ್ಯ ದ್ವಾರದಲ್ಲಿ ಪ್ರತಿಬಿಂಬಗೊಂಡಿವೆ. ಇಲ್ಲಿ ಭಾರತೀಯ ಪಾರಂಪರಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುತ್ತಿರುವುದು ವಿಶೇಷ. ಸದ್ಯಕ್ಕೆ ಐಐ ಟಿಯ ಫೇಸ್-1ಎ ಬ್ಲಾಕ್‌ನಲ್ಲಿ 852 ಕೋಟಿ ರೂ. ವೆಚ್ಚದ, 2,500 ವಿದ್ಯಾರ್ಥಿಗಳಿಗೆ ವಸತಿ, ಕಲಿಕೆಗೆ ಬೇಕಾದ ಸೌಲಭ್ಯಗಳುಳ್ಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿ ಆಡಳಿತ ಭವನ, ಅಕಾಡೆಮಿ ಬ್ಲಾಕ್, ವಿಜ್ಞಾನ ಬ್ಲಾಕ್, ಮೆಸ್ ಬ್ಲಾಕ್ ಹಾಗೂ ಗ್ರಂಥಾಲಯ ಸೇರಿ ಒಟ್ಟು 18 ಕಟ್ಟಡಗಳು ಉದ್ಘಾಟನೆಗೆ ಸಿದ್ಧ ಗೊಂಡಿವೆ. ಪ್ರಸ್ತುತ 856 ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದು, 73 ಪ್ರಾಧ್ಯಾಪಕರು ಬೋಧಿಸುತ್ತಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಇಲ್ಲಿ ಶಿಕ್ಷಣ ಪಡೆದ ಎಲ್ಲ ವಿದ್ಯಾರ್ಥಿಗಳೂ ಉತ್ತಮ ಕೆಲಸದಲ್ಲಿದ್ದಾರೆ ಎನ್ನುತ್ತಿದ್ದಾರೆ ಐಐಟಿ ಪ್ರೊಫೆಸರ್‌ಗಳು.
ಐಐಟಿ ಸ್ಥಾಪನೆಯಾಗುವಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೆ, ರಾಜ್ಯದಲ್ಲಿ ಸಿದ್ದ ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಕೇಂದ್ರ ಐಐಟಿ ಘೋಷಣೆ ಮಾಡಿದರೆ, ರಾಜ್ಯ ಸರ್ಕಾರ 470 ಎಕರೆ ಭೂಮಿ ಸೇರಿ ತಾತ್ಕಾಲಿಕ ಕ್ಯಾಂಪಸ್ ನಿರ್ಮಿಸಿ ಕೊಟ್ಟಿತು. ಅಂದು ಸಂಸದರಾಗಿದ್ದ ಪ್ರಹ್ಲಾದ ಜೋಶಿ ರಾಜ್ಯಕ್ಕೆ ಐಐಟಿ ತರಲು ಹಾಗೂ ಧಾರವಾಡ ಉಸ್ತುವಾರಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರಿ ಅದನ್ನು ಧಾರವಾಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.