ನವ ದೆಹಲಿ : ಬಾಂಬೆಯ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ ಬಾಂಬೆ) ದೇಶದಾದ್ಯಂತ ಜನರಲ್ ಅಪ್ಟಿಟ್ಯೂಡ್ ಟೆಸ್ಟ್ (ಇಂಜಿನಿಯರಿಂಗ್ ಗೇಟ್ ಎಕ್ಸಾಮ್) 2021 ನ್ನು ಬರುವ ಶನಿವಾರ (ಫೆ. 6) ದಂದು ನಡೆಸಲು ನಿರ್ಧರಿಸಿದೆ.
ಓದಿ :ಮ್ಯಾನ್ಮಾರ್ ದಂಗೆ : ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಎತ್ತಿಹಿಡಿಯಬೇಕು’: ಎಂಇಎ
ಇತ್ತೀಚೆಗೆ ತನ್ನ ಅಧಿಕೃತ ವೆಬ್ಸೈಟ್ gate.iitb.ac.in ನಲ್ಲಿ ಪರೀಕ್ಷೆಯ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಗೇಟ್ 2021 ಪರೀಕ್ಷೆಯು ಶನಿವಾರ (ಫೆ. 6) ದಿಂದ ಭಾನುವಾರ (ಫೆ. 14) ದ ತನಕ ನಡೆಯಲಿದೆ. ಮಾರ್ಗಸೂಚಿಯ ಪ್ರಕಾರ ಪರೀಕ್ಷೆಯನ್ನು ಬರೆಯುವ ಎಲ್ಲಾ ಅಭ್ಯರ್ಥಿಗಳು ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದೆ.
ಪರೀಕ್ಷೆಯ ಪ್ರವೇಶಪತ್ರವನ್ನು ತನ್ನ ಅಧಿಕೃತ ವೆಬ್ಸೈಟ್ ನಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷಾರ್ಥಿಗಳು ವೆಬ್ಸೈಟ್ ಮೂಲಕವೇ ಡೌನ್ಲೋಡ್ ಮಾಡಕೊಳ್ಳಬಹುದು ಎಂದು ಕೂಡ ತಿಳಿಸಿದೆ.
ಗೇಟ್ ಎಕ್ಸಾಮ್ ಗೆ ಇನ್ನು ದಿನಗಣನೆ ಇರುವಾಗ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು ಪರೀಕ್ಷೆಯ ಪೂರ್ವ ತಯಾರಿಯಲ್ಲಿದ್ದಾರೆ. ಪರೀಕ್ಷಾರ್ಥಿಗಳ ಪರೀಕ್ಷಾ ಪೂರ್ವ ತಯಾರಿಗೆ ನಾವೂ ಕೂಡ ಒಂದಿಷ್ಟು ಸಲಹೆಯನ್ನು ನೀಡುತ್ತಿದ್ದೇವೆ. ನೀವು ಅದನ್ನೂ ಕೂಡ ನಿಮ್ಮ ತಯಾರಿಯಲ್ಲಿ ಬಳಸಿಕೊಳ್ಳಬಹುದಾಗಿದೆ.
ಓದಿ :ಪಾತ್ರಗಳ ಸುತ್ತ ದರ್ಶನ್ ಕಟೌಟ್: ಅಭಿಮಾನಿಗಳ ಹೊಸ ಪ್ರಯತ್ನ
*ನೀವು ಈಗಾಗಲೇ ಸಿದ್ಧಪಡಿಸಿರುವ ಸಣ್ಣ ಟಿಪ್ಪಣಿಗಳು, ಕೋಷ್ಟಕಗಳು, ಫ್ಲೋ ಚಾರ್ಟ್ ಗಳನ್ನು ತ್ವರಿತವಾಗಿ ಒಮ್ಮೆ ನೋಡಿಕೊಳ್ಳಿ.
*ಹಿಂದಿನ ವರ್ಷಗಳ ಗೇಟ್ ಎಕ್ಸಾಮ್ ನ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಸಾಧ್ಯವಾದಷ್ಟು ಅಭ್ಯಾಸ ಮಾಡಿ.
*ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಏನಾದರೂ ಪ್ರಶ್ನೆ ಇದ್ದರೆ, ನಿಮ್ಮ ಅನುಮಾನಗಳನ್ನು ನಿವಾರಿಸಲು ಇದು ಸರಿಯಾದ ಸಮಯ.
*ಯಾವುದೇ ಒತ್ತಡದಿಂದ ಓದಬೇಡಿ. ಅಭ್ಯಾಸದ ನಡುವೆ ಆಗಾಗ ಒಂದಿಷ್ಟು ವಿರಾಮಗಳನ್ನು ತೆಗೆದುಕೊಳ್ಳಿ.
ಓದಿ : ಕಳೆದ ಬಾರಿಯಂತೆ ಈ ಬಾರಿ ನಿರೀಕ್ಷೆ ಹುಸಿ ಆಗದಿರಲಿ