ಅಬುಧಾಬಿ: ಇಂಟರ್‌ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ (ಐಐಎಫ್ಎ) ನೀಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯಲ್ಲಿ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆದಿದ್ದು, ಅದರಲ್ಲಿ ವಿಕ್ಕಿ ಕೌಶಲ್ ಅಭಿನಯದ ಹಿಂದಿ ಚಿತ್ರ ಶೇರ್‌ಶಾ ಐದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕಾರ್ಗಿಲ್ ಯೋಧ ಕ್ಯಾ. ವಿಕ್ರಮ್ ಬಾತ್ರಾ ಅವರ ಜೀವನಾಧಾರಿತ ಚಿತ್ರವಾದ ಇದು, ಶ್ರೇಷ್ಠ ಚಿತ್ರ, ಶ್ರೇಷ್ಠ ನಿರ್ದೇಶನ (ಶ್ರೇಷ್ಠ ನಿರ್ದೇಶನ), ಶ್ರೇಷ್ಠ ಗಾಯಕ (ಜುಬಿನ್ ನಾಟಿಯಾಲ್), ಶ್ರೇಷ್ಠ ಗಾಯಕಿ (ಅನೀಸ್ ಕೌರ್) ಹಾಗೂ ಶ್ರೇಷ್ಠ ಸಂಗೀತ (ತನಿಷ್ಕ್ ಬಾಗ್ಚಿ, ಜಸ್ಲೀನ್ ರಾಯಲ್, ಜಾವೇದ್ ಮೊಹ್ಸಿನ್, ವಿಕ್ರಮ್ ಮನತ್ರೋಸೆ, ಬಿ. ಪ್ರಾಕ್ ಹಾಗೂ ಜಾನಿ) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಚಿತ್ರಕ್ಕೆ ಸಂಗೀತ ನೀಡಿರುವ ಎಲ್ಲಾ ಐವರು ಸಂಗೀತ ನಿರ್ದೇಶಕರೂ “ಅತ್ರಂಗಿ ರೇ’ ಚಿತ್ರಕ್ಕಾಗಿ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿರುವ ಎ.ಆರ್. ರಹಮಾನ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಇತರ ಪ್ರಶಸ್ತಿ ವಿಜೇತರು.
ಶ್ರೇಷ್ಠ ನಟ- ವಿಕ್ಕಿ ಕೌಶಲ್ (ಸರ್ದಾರ್ ಉಧಮ್)
ಶ್ರೇಷ್ಠ ನಟಿ – ಕೃತಿ ಸನೂನ್ (ಮಿಮಿ)
ಶ್ರೇಷ್ಠ ಗೀತ ಸಾಹಿತ್ಯ – ಕೌಸರ್ ಮುನೀರ್ (83)
ಶ್ರೇಷ್ಠ ಪದಾರ್ಪಣಾ ನಟ – ಅಹಾನ್ ಶೆಟ್ಟಿ (ತಡಪ್)
ಶ್ರೇಷ್ಠ ಪದಾರ್ಪಣೆ ನಟಿ – ಶರ್ವಾರಿ (ಬಂಟಿ ಔರ್ ಬಬ್ಲಿ 2)
ಶ್ರೇಷ್ಠ ಪೋಷಕ ನಟ – ಪಂಕಜ್ ತ್ರಿಪಾಠಿ (ಲುಡೊ)
ಶ್ರೇಷ್ಠ ಪೋಷಕ ನಟಿ – ಸಾಯಿ ತಮ್ಹನ್‌ಕರ್ (ಮಿಮಿ)